Home ಧಾರ್ಮಿಕ ಸುದ್ದಿ ಮಂಗಳಾದೇವಿ ದೇವಸ್ಥಾನ: ವರ್ಷಾವಧಿ ಜಾತ್ರೆ

ಮಂಗಳಾದೇವಿ ದೇವಸ್ಥಾನ: ವರ್ಷಾವಧಿ ಜಾತ್ರೆ

2025
0
SHARE

ಮಹಾನಗರ : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರೆ ಆರಂಭವಾಗಿದ್ದು, ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು. ಊರು, ಪರಊರಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದರು.

ಜಾತ್ರೆ ಅಂಗವಾಗಿ ರವಿವಾರ ಪ್ರಾತಃಕಾಲ ಪೂಜೆ, ನವಕ ಕಲಶಾಭಿಷೇಕ, 8.30ಕ್ಕೆ 108 ಕಾಯಿ ಗಣಪತಿ ಹೋಮ, ಮಧ್ಯಾಹ್ನ ಪೂಜೆ, ಬಳಿಕ ಅನ್ನ ಸಂತರ್ಪಣೆ. ಸಂಜೆ 6.30ಕ್ಕೆ ಬಯನ ಬಲಿ, ಮಹಾಪೂಜೆ, ಭೂತಬಲಿ ನಡೆಯಿತು.

ವಿವಿಧ ಕಾರ್ಯಕ್ರಮ
ಮಾ. 25ರಂದು ಪ್ರಾತಃಕಾಲ ಪೂಜೆ, ಗಣಪತಿ ಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಅನ್ನದಾನ, ಸಂಜೆ 6.30ಕ್ಕೆ ಬಯನ ಬಲಿ, ಮಹಾಪೂಜೆ, ಭೂತ ಬಲಿ ನಡೆಯಲಿದೆ.

ಮಾ. 26ರಂದು ಪ್ರಾತಃಕಾಲ ಪೂಜೆ, ಗಣಪತಿ ಹೋಮ, ನವಕ ಕಲಶಾಭಿಷೇಕ, ಚಂಡಿಕಾಯಾಗ. ಮಧ್ಯಾಹ್ನ ಮಹಾಪೂಜೆಯಾಗಿ ಅನ್ನಸಂತರ್ಪಣೆ. ಸಂಜೆ 6.30ಕ್ಕೆ ಬಯನ ಬಲಿ, ಮಹಾಪೂಜೆ, ಭೂತಬಲಿ ನಡೆಯಲಿದೆ.

ಮಾ. 27ರಂದು ಪ್ರಾತಃಕಾಲ ಪೂಜೆ, ಗಣಪತಿ ಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆಯಾಗಿ ರಥಾರೋಹಣ, ಬಳಿಕ ಅನ್ನಸಂತರ್ಪಣೆ, ಸಾಯಂಕಾಲ 7.30ಕ್ಕೆ ರಥೋತ್ಸವ, ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಭೂತ ಬಲಿ, ಕವಾಟ ಬಂಧನ, ಶಯನ ನಡೆಯಲಿದೆ.

ಮಾ. 28ರಂದು ಬೆಳಗ್ಗೆ 6.34ಕ್ಕೆ ಕವಾಟೋದ್ಘಾಟನೆ, ಅಭಿಷೇಕ ಪೂಜೆ, ಅಷ್ಟಾವದಾನ, ತೀರ್ಥಪ್ರಸಾದ, ಬಲಿ, ಮಹಾಪೂಜೆ, ಅನ್ನಸಂತರ್ಪಣೆ. ಸಾಯಂಕಾಲ 7 ಗಂಟೆಗೆ ಬಲಿ ಹೊರಟು ಅವಭೃಥ ಸ್ನಾನ, ಧ್ವಜಾವರೋಹಣ ನಡೆಯಲಿದೆ.

ಮಾ. 29ರಂದು ಸಂಪ್ರೋಕ್ಷಣೆ, ರಾತ್ರಿ 9.05ಕ್ಕೆ ಶ್ರೀ ಕ್ಷೇತ್ರದ ಪರಿವಾರ ದೈವಗಳಿಗೆ ನೇಮ ನಡೆಯಲಿದೆ. ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಜನೆ, ಭಕ್ತಿ ಸಂಗೀತ ಕಾರ್ಯಕ್ರಮ, ಯಕ್ಷಗಾನ ಬಯಲಾಟ, ನಾಟಕ ಪ್ರದರ್ಶನ ಸಹಿತ ಹಲವು ಕಾರ್ಯ ಕ್ರಮಗಳು ಪ್ರತಿದಿನ ನಡೆಯಲಿದೆ.

LEAVE A REPLY

Please enter your comment!
Please enter your name here