Home ಧಾರ್ಮಿಕ ಸುದ್ದಿ ಧಾರ್ಮಿಕಣ ಮಂಗಳಾದೇವಿ ಜಾತ್ರೆ ಸಮಾರೋಪ

ಧಾರ್ಮಿಕಣ ಮಂಗಳಾದೇವಿ ಜಾತ್ರೆ ಸಮಾರೋಪ

1638
0
SHARE

ಮಹಾನಗರ : ಅನನ್ಯ ಸನ್ನಿಧಾನದ ಶ್ರೀ ಮಂಗಳಾಂಬಿಕೆ ಎಲ್ಲ ಭಕ್ತರನ್ನು ಹರಸುವ ಮಹಾತಾಯಿ. ಮಂಗಳಾದೇವಿ ದೇವಸ್ಥಾನ ಎನ್ನುವುದು ಮಂಗಳೂರು ನಗರಕ್ಕೆ ಬಹುದೊಡ್ಡ ಆಭರಣ ಇದ್ದಂತೆ ಎಂದು ಮೇಯರ್‌ ಭಾಸ್ಕರ್‌ ಕೆ. ತಿಳಿಸಿದರು.

50 ಲಕ್ಷ ರೂ. ಅನುದಾನ
ಕ್ಷೇತ್ರದ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತ ನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಆರ್‌. ಲೋಬೋ ಅವರು ಕ್ಷೇತ್ರದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಅವರ ಮನವಿಯ ಮೇರೆಗೆ ಕ್ಷೇತ್ರದ ಯಾತ್ರಿ ನಿವಾಸಕ್ಕೆ ಸರಕಾರದ ವತಿಯಿಂದ 50 ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿದರು.

ಗಣ್ಯರ ಉಪಸ್ಥಿತಿ
ಕ್ಷೇತ್ರದ ಮೊಕ್ತೇಸರರಾದ ರಾಮ ನಾೖಕ್‌ ಕೋಟೆಕಾರ್‌, ಪ್ರೇಮಲತಾ ಎಸ್‌. ಕುಮಾರ್‌, ಆನುವಂಶಿಕ ಮೊಕ್ತೇಸರರಾದ ಜಿ. ರಘುರಾಮ ಉಪಾಧ್ಯಾಯ, ಎಂ. ಗಣೇಶ್‌ ಐತಾಳ್‌, ಬಿ. ವೆಂಕಟರಮಣ ಐತಾಳ್‌ ಉಪಸ್ಥಿತರಿದ್ದರು.

ಗೌರವಾರ್ಪಣೆ
ಈ ಸಂದರ್ಭ ನೂತನ ಮೇಯರ್‌ ಭಾಸ್ಕರ್‌ ಕೆ., ವಿವಿಧ ಕ್ಷೇತ್ರಗಳ ಸಾಧಕರಾದ ರಘುರಾಮ ರಾವ್‌, ರಾಧಾಕೃಷ್ಣ, ಭಾಸ್ಕರ ಬಂಗೇರ, ಗೌತಮಿ, ಸದಾಶಿವ ಅಮೀನ್‌ ಅವರನ್ನು ಗೌರವಿಸಲಾಯಿತು. ವಾರ್ಷಿಕ ಜಾತ್ರಾ ಮಹೋತ್ಸವದ ಎಲ್ಲ ದಿನಗಳಲ್ಲೂ ಸಹಕರಿಸಿದ ಕ್ಷೇತ್ರದ ಸಂಘ-ಸಂಸ್ಥೆಗಳನ್ನು, ಬ್ರಹ್ಮರಥೋತ್ಸವ ಹಾಗೂ ಅವಭೃಥ ಉತ್ಸವದ ಸಂದರ್ಭ ಸಹಕಾರ ನೀಡಿದ ಟ್ಯಾಬ್ಲೊ ತಂಡದವರನ್ನು ವಿಶೇಷವಾಗಿ ಗೌರವಿಸಲಾಯಿತು.
ವಾಸುದೇವ ರಾವ್‌ ಕುಡುಪು ಅಭಿನಂದನ ಭಾಷಣ ಮಾಡಿದರು. ಸಂಯೋಜಕ ವಿನಯಾನಂದ ವಂದಿ ಸಿದರು. ಸುಧಾಕರ ರಾವ್‌ ಪೇಜಾವರ ಅವರು ನಿರೂಪಿಸಿದರು.

LEAVE A REPLY

Please enter your comment!
Please enter your name here