ಮಲ್ಪೆ : ಮಲ್ಪೆ ಬಾಪುತೋಟ ಪಡುಗುಡ್ಡೆ ಶ್ರೀ ಕ್ಷೇತ್ರ ಸರ್ವೇಶ್ವರ ದೇವಸ್ಥಾನದ 24ನೇ ವರ್ಧಂತಿ ಉತ್ಸವ ಮತ್ತು ಶಿವರಾತ್ರಿ ಮಹೋತ್ಸ ವವು ಕೋಟ ಚಂದ್ರಶೇಖರ ಸೋಮಯಾಜಿ ಅವರ ನೇತೃತ್ವದಲ್ಲಿ ಫೆ. 21ರಿಂದ ಫೆ.23ರ ವರೆಗೆ ನಡೆಯಲಿದೆ.
ಫೆ. 21ರಂದು ಬೆಳಗ್ಗೆ 8.30ಕ್ಕೆ ರುದ್ರಾಭಿಷೇಕ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ತುಲಾ ಭಾರ ಸೇವೆ, ರಾತ್ರಿ ರಂಗಪೂಜೆ, ಫೆ. 22ರಂದು ಬೆಳಗ್ಗೆ 8.30ಕ್ಕೆ ಪಂಚದೈವ ನಾಗಬ್ರಹ್ಮಸ್ಥಾನದಲ್ಲಿ ಆಶ್ಲೇಷಾ ಬಲಿ ಸೇವೆ, ಕಲಾಭಿವೃದ್ಧಿ ಹೋಮ, ನವಕಲಶಸ್ನಪನ, ಸಂಜೆ ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ಕಲಾಭಿವೃದ್ಧಿ ಹೋಮ, ನವಕಲಶಸ್ನಪನ, ಮಹಾಪೂಜೆ, ಸಂಜೆ 6ಕ್ಕೆ ಹರಿಕಥೆ, ಫೆ. 23ರಂದು ಬೆಳಗ್ಗೆ 8.30ಕ್ಕೆ ಸರ್ವೇಶ್ವರ ಸನ್ನಿಧಿಯಲ್ಲಿ ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಬ್ರಹ್ಮಕಲಶಾಭಿಷೇಕ ನಡೆದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಫೆ. 21 ಮತ್ತು 22ರಂದು ರಾತ್ರಿ 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.