Home ಧಾರ್ಮಿಕ ಸುದ್ದಿ ಕೊಡವೂರು ದೇವಸ್ಥಾನ: ರಥೋತ್ಸವ ಸಂಪನ್ನ

ಕೊಡವೂರು ದೇವಸ್ಥಾನ: ರಥೋತ್ಸವ ಸಂಪನ್ನ

922
0
SHARE

ಮಲ್ಪೆ : ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶ್ರೀಮನ್ಮಾರಥೋತ್ಸವವು ಮಂಗಳವಾರ ವೈಭವದಿಂದ ನಡೆಯಿತು. ದೇಗುಲವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ವಿಶೇಷ ಸೇವೆಗಳನ್ನು ಸಲ್ಲಿಸಿದರು.

ಬೆಳಗ್ಗೆ ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ರಥಾರೋಹಣ ಜರಗಿತು. ಮಧ್ಯಾಹ್ನ ಸಾವಿರಾರು ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು. ರಾತ್ರಿ ರಥವು ವಿವಿಧ ವೇಷಭೂಷಣ, ವಾದ್ಯಘೋಷ, ಕಲಾತಂಡಗಳೊಂದಿಗೆ ದೇವಸ್ಥಾನದಿಂದ ಹೊರಟು ಕೊಡವೂರು ಪೇಟೆಯ ಬೀದಿಯಲ್ಲಿ ಸಾಗಿ ದೇವಸ್ಥಾನಕ್ಕೆ ಮರಳಿತು. ಸುಡುಮದ್ದು ಪ್ರದರ್ಶನ ನಡೆಯಿತು.

ಬಳಿಕ ದೇವಸ್ಥಾನದ ಒಳಗೆ ದರ್ಶನ ಸೇವೆ, ತೊಟ್ಟಿಲೋತ್ಸವ, ಭೂತಬಲಿ, ಶಯನೋತ್ಸವಗಳು ನಡೆದವು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ಶಂಕರನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್‌, ಗೌರವಾಧ್ಯಕ್ಷ ಆನಂದ ಪಿ. ಸುವರ್ಣ, ಭಕ್ತವೃಂದದ ಅಧ್ಯಕ್ಷ ಕೆ. ರವಿರಾಜ್‌ ಹೆಗ್ಡೆ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಜನಾರ್ದನ ಕೊಡವೂರು, ಅಡಿಗ ಕೃಷ್ಣಮುರ್ತಿ ಭಟ್‌, ಭಾಸ್ಕರ ಪಾಲನ್‌ ಬಾಚನಬೈಲು, ರಾಜ ಎ. ಶೇರಿಗಾರ್‌, ಚಂದ್ರಕಾಂತ ಪುತ್ರನ್‌ ಕಾನಂಗಿ, ಬಾಬ ಕೆ., ಸುಧಾ ಎನ್‌. ಶೆಟ್ಟಿ, ಬೇಬಿ ಎಸ್‌.ಮೆಂಡನ್‌ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here