Home ಧಾರ್ಮಿಕ ಸುದ್ದಿ ‘ಪ್ರಾರ್ಥನೆಯಿಂದ ದೇವರಿಗೆ ಸಮೀಪ’

‘ಪ್ರಾರ್ಥನೆಯಿಂದ ದೇವರಿಗೆ ಸಮೀಪ’

620
0
SHARE

ಮಲ್ಪೆ: ಪ್ರಾರ್ಥನೆ ಒಂದೇ ಮನುಷ್ಯನಿಗೆ ದೇವರಿಗೆ ಸಮೀಪವಾಗಲು ಇರುವ ಮಾರ್ಗ ವಾಗಿದ್ದು, ಇದರಿಂದ ಪವಿತ್ಮಾತ್ಮರ ವರಗಳನ್ನು ಪಡೆಯುವ ಏಕೈಕ ವಿಧಾನವಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್‌ ಪಾವ್ಲ್ ಸಲ್ದಾನ ಹೇಳಿದರು.

ಅವರು ಬುಧವಾರ ಕಲ್ಮಾಡಿ ಸ್ಟೆಲ್ಲಾ ಮಾರೀಸ್‌ ಚರ್ಚ್‌ನಲ್ಲಿ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವದ ನೊವೆನಾ ಪ್ರಾರ್ಥನೆಯ ಬಲಪೂಜೆಯಲ್ಲಿ ಸಂದೇಶವನ್ನು ನೀಡಿದರು.

ಮೇರಿ ಮಾತೆ ಇಡೀ ಜೀವಿತದಲ್ಲಿ ದೇವರ ಯೋಚನೆ ಮತ್ತು ಯೋಜನೆಗೆ ಅನುಗುಣವಾಗಿ ಬದುಕಿದ್ದಲ್ಲದೆ ಪಾಪ ರಹಿತವಾದ ಜೀವನ ನಡೆಸಿ ಪ್ರತಿಯೊಬ್ಬರಿಗೂ ಮಾದರಿಯಾದವರು. ಇಂತಹ ಜೀವನ ಜೀವಿಸಲು ಅವರಿಗೆ ಶಕ್ತಿ ನೀಡಿದ್ದು ಪ್ರಾರ್ಥನೆ. ನಾವೂ ಕೂಡ ಪ್ರಾರ್ಥನೆಯ ಮೂಲಕ ದೇವರಿಗೆ ಸಮೀಪವಾಗಲು ಪ್ರಯತ್ನಿಸಬೇಕು ಎಂದರು.

ಚರ್ಚ್‌ನ ಧರ್ಮಗುರು ಆಲ್ಬನ್‌ ಡಿ’ಸೋಜಾ, ವಾರ್ಷಿಕ ಮಹೋತ್ಸವ ಕಾರ್ಯಕ್ರಮದ ಸಂಚಾಲಕ ಪ್ರವೀಣ್‌ ಮೊಂತೆರೋ, ಪಾಲನ ಮಂಡಳಿಯ ಉಪಾಧ್ಯಕ್ಷ ಸಂಜಯ ಆಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ, 18 ಆಯೋಗಗಳ ಸಂಚಾಲಕ ಫ್ರಾನ್ಸಿಸ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here