Home ಧಾರ್ಮಿಕ ಸುದ್ದಿ ಕಲ್ಮಾಡಿ ಸ್ಟೆಲ್ಲಾ ಮಾರಿಸ್‌ ಚರ್ಚ್‌ನ ವಾರ್ಷಿಕ ಮಹೋತ್ಸವ

ಕಲ್ಮಾಡಿ ಸ್ಟೆಲ್ಲಾ ಮಾರಿಸ್‌ ಚರ್ಚ್‌ನ ವಾರ್ಷಿಕ ಮಹೋತ್ಸವ

946
0
SHARE

ಮಲ್ಪೆ: ಕಲ್ಮಾಡಿ ಸ್ಟೆಲ್ಲಾ ಮಾರಿಸ್‌ ಚರ್ಚಿನ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನೋತ್ಸವ ಹಬ್ಬದ ಪ್ರಯುಕ್ತ ವೆಲಂಕಣಿ ಮಾತೆಯ ತೇರಿನ ಮೆರವಣಿಗೆಯು ಆ. 14ರಂದು ಜರಗಿತು.

ಆದಿಉಡುಪಿ ಜಂಕ್ಷನ್‌ ಬಳಿ ತೇರಿನ ಮೆರವಣಿಗೆ ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ವೆಲಂಕಣಿ ಮಾತೆಯ ತೇರಿನ ಮೆರವಣಿಗೆ ಆದಿಉಡುಪಿ ಜಂಕ್ಷನ್‌ ಬಳಿಯಿಂದ ಸಾಗಿ ಸ್ಟೆಲ್ಲಾ ಮಾರಿಸ್‌ ಚರ್ಚ್‌ವರೆಗೆ ಪಾದಯಾತ್ರೆಯ ಮೂಲಕ ತೆರಳಿತು. ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಪೀಟರ್‌ ಪೌಲ್ ಸಲ್ದಾನ ಪ್ರಾರ್ಥನಾ ವಿಧಿ, ಬಲಿಪೂಜೆ ನೆರವೇರಿಸಿದರು.

ನಗರಸಭಾ ಸದಸ್ಯ ಸುಂದರ್‌ ಜೆ. ಕಲ್ಮಾಡಿ, ಚರ್ಚ್‌ನ ಪ್ರಧಾನ ಧರ್ಮಗುರು ಆಲ್ಬನ್‌ ಡಿ’ಸೋಜಾ, ಕಾರ್ಯಕ್ರಮದ ಸಂಚಾಲಕ ಪ್ರವೀಣ್‌ ಮೊಂತೆರೋ, ಚರ್ಚ್‌ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್‌ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ, ಚರ್ಚ್‌ನ 18 ಆಯೋಗಗಳ ಫ್ರಾನ್ಸಿಸ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here