Home ಧಾರ್ಮಿಕ ಸುದ್ದಿ ಜಿಎಸ್‌ಬಿ ಮುತ್ತೈದೆಯರಿಂದ ಚೂಡಿಪೂಜೆ

ಜಿಎಸ್‌ಬಿ ಮುತ್ತೈದೆಯರಿಂದ ಚೂಡಿಪೂಜೆ

ಕೊಡವೂರು ಗರಡಿಮಜಲು

231
0
SHARE

ಮಲ್ಪೆ: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ (ಜಿಎಸ್‌ಬಿ) ಮುತ್ತೈದೆಯರು ಶ್ರಾವಣ ತಿಂಗಳಲ್ಲಿ ನಡೆಸುವ ಚೂಡಿಪೂಜೆ ರವಿವಾರ ಕೊಡವೂರು ಗರಡಿಮಜಲಿನಲ್ಲಿ ನಡೆಯಿತು.

ಸುಮಂಗಳೆಯರು ಒಂದೆಡೆ ಸೇರಿ ಪ್ರಕೃತಿಯಲ್ಲಿ ಸಿಗುವ ವಿವಿಧ ಬಗೆಯ ಪುಷ್ಪಗಳಾದ ರಥಪುಷ್ಪ, ಗರಿಕೆ, ಶಂಖಪುಷ್ಪ, ರತ್ನಗಂಧಿ, ಸುಗಂಧರಾಜ, ಆರತಿ, ಅನ್ವಾಲಿ, ಕಣಗಿಲೆ, ಕರವೀರ, ಗೌರಿ ಹೂ, ಸಣ್ಣ ಗುಲಾಬಿ ಇತ್ಯಾದಿ ಹೂಗಳನ್ನು ಬಾಳೆನಾರಿನಿಂದ ಕಟ್ಟಿ ಚೂಡಿ ತಯಾರಿಸಿ ಅದನ್ನು ತುಳಸಿಕಟ್ಟೆ ಎದುರು ಇಟ್ಟು ಪೂಜಿಸಿ ತುಳಸಿಗೆ ಚೂಡಿ ಸಮರ್ಪಿಸಿ ಪ್ರದಕ್ಷಿಣೆ ನಮಸ್ಕಾರ ಇತ್ಯಾದಿಗಳನ್ನು ನಡೆಸಿ ವಿಶಿಷ್ಟ ಸಂಕೀರ್ತನೆಯೊಂದಿಗೆ ಚೂಡಿಯನ್ನು ಸಾಮೂಹಿಕವಾಗಿ ಪೂಜಿಸಲಾಗುತ್ತಿದ್ದು ಶ್ರಾವಣ ಮಾಸ ಪೂರ್ತಿ ಪ್ರತಿ ರವಿವಾರ ಮತ್ತು ಶುಕ್ರವಾರಗಳಂದು ಚೂಡಿಪೂಜೆ ನಡೆಸಲಾಗುತ್ತದೆ.

ಬಳಿಕ ಮನೆಯ ಹೊಸ್ತಿಲಲ್ಲಿಟ್ಟು ಪೂಜೆ ಮಾಡಿ, ದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯ, ಆರತಿ ಬೆಳಗಿ ದೇವರಿಗೂ ಚೂಡಿ ಸಮರ್ಪಿಸಲಾಗುತ್ತದೆ. ಜಿಎಸ್‌ಬಿ ಸಮಾಜದ ಸುಮಂಗಳೆಯರು ಶ್ರಾವಣ ಮಾಸದ ಪ್ರತಿ ಶುಕ್ರವಾರ ಮತ್ತು ರವಿವಾರ ಈ ಪೂಜೆಯನ್ನು ತಮ್ಮ ಮನೆಗಳಲ್ಲಿ ಮಾಡುತ್ತಾರೆ.

ಹೊನ್ನಾವರ ಕೃಪಾ ಮಲ್ಯ, ಸಾಕ್ಷಿ ಮಲ್ಯ ಎಂಬ ನೂತನ ವಧು ಪ್ರಥಮ ಚೂಡಿಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು. ಚೂಡಿಪೂಜೆಯಲ್ಲಿ ಪವಿತ್ರಾ ಕಾಮತ್‌, ರಾಧಿಕಾ ನಾಯಕ್‌ ಭಾಗವಹಿಸಿದ್ದರು. ಶ್ರೇಯಸ್‌ ಮಲ್ಯ, ಸುಧೀರ್‌ ಸಹಕರಿಸಿದರು.

ಶ್ರಾವಣ ಮಹಿಳೆಯರಿಗೆ ಸಡಗರ
ಈ ಸಂದರ್ಭದಲ್ಲಿ ಮಾತನಾಡಿದ ಯೋಗಿನಿ ಕಾಮತ್‌ ಅವರು ನೂತನ ವಧುವಿಗೆ ತವರುಮನೆ ಮತ್ತು ಗಂಡನ ಮನೆಯಲ್ಲಿ ವಿಶೇಷವಾಗಿ ನೆಂಟರಿಷ್ಟರೊಂದಿಗೆ ಚೂಡಿಪೂಜೆ ನಡೆಸಿ ಎಲ್ಲರಿಗೂ ಚೂಡಿ ನೀಡಿ ಆಶೀರ್ವಾದ ಪಡೆಯುವ ಕ್ರಮವಿದೆ. ಚೂಡಿಪೂಜೆ ಪ್ರಕೃತಿ ಪೂಜೆ ಎಂದು ಪರಿಭಾವಿಸಿ ಈ ಪೂಜೆಯಲ್ಲಿ ತುಳಸಿಮಾತೆ ಮತ್ತು ಸೂರ್ಯನಿಗೆ ವಿಶೇಷ ಪ್ರಾಧಾನ್ಯತೆ ಕಲ್ಪಿಸಲಾಗಿದೆ. ಶ್ರಾವಣ ಎಂದರೆ ಮಹಿಳೆಯರಾದ ನಮಗೆ ಎಲ್ಲಿಲ್ಲದ ಸಡಗರ ತರುತ್ತದೆ ಎಂದರು.

LEAVE A REPLY

Please enter your comment!
Please enter your name here