Home ಧಾರ್ಮಿಕ ಸುದ್ದಿ ಜೂ. 15-17: ಸಮರ್ಪಣೆ, ಬ್ರಹ್ಮಕಲಶ, ಧರ್ಮ ನೇಮ

ಜೂ. 15-17: ಸಮರ್ಪಣೆ, ಬ್ರಹ್ಮಕಲಶ, ಧರ್ಮ ನೇಮ

ಬಡಾನಿಡಿಯೂರು ಬೊಬ್ಬರ್ಯ, ಪರಿವಾರ ಶಕ್ತಿಗಳ ನವೀಕೃತ ದೈವಾಲಯ

513
0
SHARE

ಮಲ್ಪೆ : ತೊಟ್ಟಂ ಬಡಾನಿಡಿಯೂರು 1ನೇ ಮತ್ತು 2ನೇ ಮೊಗವೀರ ಗ್ರಾಮಸಭಾ ಶ್ರೀ ಬೊಬ್ಬರ್ಯ ಸ್ಥಾನದ ಶ್ರೀ ಬೊಬ್ಬರ್ಯ ಮತ್ತು ಪರಿವಾರ ಶಕ್ತಿಗಳ ನವೀಕೃತ ದೈವಾಲಯ ಸಮರ್ಪಣೆ, ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ದೈವದ ಧರ್ಮ ನೇಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜೂ. 15ರಿಂದ ಜೂ. 17ರವರೆಗೆ ಆಗಮ ಪಂಡಿತ ವೇ| ಮೂ.| ಕುತ್ಯಾರು ಕೇಂಜ ಶ್ರೀಧರ ತಂತ್ರಿ, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್‌ ಗುಂಡಿಬೈಲು ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಜೂ. 16ರಂದು ಸಂಜೆ 5.30ಕ್ಕೆ ಸಾಮೂಹಿಕ ಪ್ರಾರ್ಥನೆ, ಶಿಲ್ಪ ಪೂಜೆ, ತೋರಣ , ಉಗ್ರಾಣ ಮುಹೂರ್ತ, ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೋಘ್ನ ಹೋಮ, ದಿಕ್ಪಾಲಬಲಿ, ಬಿಂಬಾಧಿವಾಸ, ಶಯ್ನಾಧಿವಾಸ, ಬ್ರಹ್ಮಕಲಶ ಪ್ರತಿಷ್ಠೆಗಳು ನಡೆಯಲಿವೆ.

ಪ್ರತಿಷ್ಠಾ, ಬ್ರಹ್ಮಕಲಶ

ಜೂ. 17ರಂದು ಪುಣ್ಯಾಹ ವಾಚನ, ಮಹಾಸಂಕಲ್ಪ, ಗಂಟೆ 8ಕ್ಕೆ ಶ್ರೀ ಬೊಬ್ಬರ್ಯ, ನಂದಿಕೇಶ್ವರ, ನೀಚ ದೈವಗಳ ಪುನರ್‌ ಪ್ರತಿಷ್ಠೆ, ಸಾನ್ನಿಧ್ಯ ಕಲಶಾಭಿಷೇಕ, ಬ್ರಹ್ಮಕಲಶ ಪ್ರತಿಷ್ಠೆ, ಗಣಯಾಗ, ಪ್ರಧಾನಯಾಗ, 10.15ಕ್ಕೆ ಬ್ರಹ್ಮಕಲಶಾಭಿಷೇಕ
ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಬೊಬ್ಬರ್ಯ ದರ್ಶನ, ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಜರಗಲಿದೆ. ಅನಂತರ ಬಡಾನಿಡಿಯೂರು ಶ್ರೀ ಪಂಢರೀನಾಥ ವಿಠೊಭ ಭಜನ ಮಂದಿರ ಹಾಗೂ ತೊಟ್ಟಂ ಶ್ರೀ ಭಕ್ತಿ ಉದಯ ಪಂಢರೀನಾಥ ಭಜನ ಮಂದಿರದವರಿಂದ ಭಜನ ಕಾರ್ಯಕ್ರಮ ನಡೆಯಲಿದೆ.

ದೈವಗಳ ನೇಮ

ಸಂಜೆ 6 ಗಂಟೆಗೆ ನವೀಕೃತ ದೇಗುಲದ ಲೋಕಾರ್ಪಣೆ, ಉದ್ಘಾಟನಾ ಕಾರ್ಯಕ್ರಮ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಸಮ್ಮಾನ, ರಾತ್ರಿ 7 ಗಂಟೆಗೆ ಸಾನ್ನಿಧ್ಯಾಭಿವೃದ್ಧಿಗೋಸ್ಕರ ಶ್ರೀ ನಂದೀಕೇಶ್ವರ, ಶ್ರೀ ಬೊಬ್ಬರ್ಯ ನೀಚ ದೈವಗಳ ನೇಮ ನಡೆಯಲಿದೆ.

ನಾಳೆ ಹೊರೆಕಾಣಿಕೆ ಮೆರವಣಿಗೆ

ಜೂ. 15ರಂದು ಸಂಜೆ 3.30ಕ್ಕೆ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಬಲರಾಮ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ವಿವಿಧ ವಾದ್ಯಘೋಷದೊಂದಿಗೆ ದೈವಸ್ಥಾನಕ್ಕೆ ಆಗಮಿಸಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶೇಖರ ತಿಂಗಳಾಯ ಬೀಚ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



LEAVE A REPLY

Please enter your comment!
Please enter your name here