ಮಲ್ಪೆ: ಕೆಮ್ಮಣ್ಣು ಗುಡ್ಯಾಂ ತೋನ್ಸೆ ಶ್ರೀ ಭದ್ರಕಾಳಿ ಮಹಾ ಮಾರಿಕಾಂಬ ದೇವಸ್ಥಾನದಲ್ಲಿ ದೇವಿಯ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕವು ಮೇ 8 ರಿಂದ ಮೇ 10ರವರೆಗೆ ನಡೆಯಲಿದೆ.
ಆ ಪ್ರಯುಕ್ತ ಮೇ 8ರಂದು ಬೆಳಗ್ಗೆ ಗಣಹೋಮ, ನವಗ್ರಹ ಯಾಗ, ಸಂಜೆ ವಾಸ್ತುಹೋಮ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ಬಿಂಬಶುದ್ಧಿ, ಅಧಿವಾಸ ಪೂಜೆ, ಪ್ರತಿಷ್ಠಾ ಹೋಮ ನಡೆಯಲಿವೆ.
ಮೇ 9ರಂದು ಬೆಳಗ್ಗೆ ಚಂಡಿಕಾಯಾಗ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಬ್ರಹ್ಮಕಲಶ ಸ್ಥಾಪನೆ, ದುರ್ಗಾಪೂಜೆ, ಮೇ 10ರಂದು ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಅಂದು ಸಂಜೆ 6.30ಕ್ಕೆ ಧಾರ್ಮಿಕ ಸಭೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹಾಗೂ ಮೂಡುಬಿದ್ರಿ ಜೈನ್ ಮಠದ ಶ್ರೀ ಸ್ವಸ್ಥಿ ಶ್ರೀ ಭಾರತವರ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆಮ್ಮಣ್ಣು ಸೈಂಟ್ ತೆರೆಜಾ ಚರ್ಚ್ ಧರ್ಮಗುರು ರೆ|ಫಾ| ವಿಕ್ಟರ್ ಡಿ’ಸೋಜ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ಭಾರತ ಸರಕಾರದ ಆರೋಗ್ಯ ವಿಭಾಗದ ಡಾ| ಮೊಹಮ್ಮದ್ ರಫೀಕ್, ಕಚ್ಚಾರು ನಾಗೇಶ್ವರ ದೇವಸ್ಥಾನದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಉದ್ಯಮಿ ಕುತ್ಪಾಡಿ ಚಂದ್ರಶೆಟ್ಟಿ, ಜಯಶ್ರೀ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷ ಕೆ.ಪಿ. ಜಗದೀಶ್ ಅಧಿಕಾರಿ, ನ್ಯಾಯವಾದಿ ತೋನ್ಸೆ ಪಡುಮನೆ ಸದಾಶಿವ ಕೆ. ಶೆಟ್ಟಿ, ತುಳುವ ಬೊಳ್ಳಿ ದಯನಂದ ಜಿ. ಕತ್ತಲ್ಸರ್, ಮುಂಬೈ ಉದ್ಯಮಿ ರಾಜಗೋಪಾಲ್ ಬಿ. ಶೆಟ್ಟಿ, ಮುಂಬೈ ವಿಶ್ವಕರ್ಮ ಅಸೋಸಿಯೇಶನಿನ ಅಧ್ಯಕ್ಷ ಸದಾನಂದ ಆಚಾರ್ಯ, ಮುಂಬೈ ಬಿಲ್ಲವ ಅಸೋಸಿಯೇಶನಿನ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಕಲ್ಯಾಣಪುರ ಗ್ರಾ.ಪಂ. ಅಧ್ಯಕ್ಷೆ ಪುಷ್ಪ ಎಸ್. ಕೋಟ್ಯಾನ್, ತೋನ್ಸೆ ಗ್ರಾ.ಪಂ. ಅಧ್ಯಕ್ಷೆ ಫೌಜಿಯಾ ಸಾದಿಕ್, ಬಡಾನಿಡಿಯೂರು ಗ್ರಾ.ಪಂ. ಅಧ್ಯಕ್ಷ ಉಮೇಶ್ ಪೂಜಾರಿ, ಕಾಂಚನ್ ಹುಂಡೈಯ ಪ್ರಸಾದ್ರಾಜ್ ಕಾಂಚನ್, ತೋನ್ಸೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಧಾಕರ್, ತೋನ್ಸೆ ಬಿಲ್ಲವ ಒಕ್ಕೂಟದ ಅಧ್ಯಕ್ಷ ಬಿ.ಪಿ. ರಮೇಶ್ ಪೂಜಾರಿ, ಒಕ್ಕೂಟದ ಅಧ್ಯಕ್ಷೆ ಇಂದಿರಾ ಶಶಿಧರ್ ಉಪಸ್ಥಿತರಿರುವರು ಎಂದು ದೇವಸ್ಥಾನದ ಆಡಳಿತಿ ಸಮಿತಿಯ ಅಧ್ಯಕ್ಷ ಜಯಕೃಷ್ಣ ಎ. ಶೆಟ್ಟಿ ತೋನ್ಸೆ ಪಡುಮನೆ, ಕಾರ್ಯದರ್ಶಿ ಸದಾಶಿವ ಕೋಟ್ಯಾನ್, ಸಂಚಾಲಕ ಕಂಡಾಳ ರಘುರಾಮ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಮೇ 10ರಂದು ಸಂಜೆ 4.30ಕ್ಕೆ ಉಡುಪಿ ಸೃಷ್ಟಿ ಕಲಾ ಕುಠೀರ ಡಾ| ಮಂಜರಿಚಂದ್ರ ಅವರಿಂದ ನೃತ್ಯವೈಭವ, ಸ್ಥಳೀಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ, ರಾತ್ರಿ 7.30ಕ್ಕೆ ಮುಲ್ಕಿ ನವ ವೈಭವ ಕಲಾವಿದರಿಂದ ತುಳುನಾಡ ವೈಭವ ಕಾರ್ಯಕ್ರಮ ನಡೆಯಲಿರುವುದು.
ಮೇ 8: ಬೆಳ್ಳಿಯ ಪ್ರಭಾವಳಿಯ ಮೆರವಣಿಗೆ
ಜಯಕೃಷ್ಣ ಎ. ಶೆಟ್ಟಿ ತೋನ್ಸೆ ಪಡುಮನೆ ಅವರ ಸೋದರ ಅಳಿಯ ರಮಾನಾಥ್ ವಿ. ಶೆಟ್ಟಿ ತೋನ್ಸೆ ಪಡುಮನೆ ಅವರು ಶ್ರೀ ದೇವಿಗೆ ಕೊಡುಗೆಯಾಗಿ ನೀಡಿದ ಬೆಳ್ಳಿಯ ಪ್ರಭಾವಳಿಯ ಮತ್ತು ಪಾಣಿಪೀಠದ ಕವಚವನ್ನು ಮೇ 8ರಂದು ಸಂಜೆ 5ಕ್ಕೆ ಹಂಪನಕಟ್ಟೆಯಿಂದ ಶ್ರೀ ದೇವಿಯ ಸನ್ನಿಧಿಗೆ ವೈಭವದ ಮೆರವಣಿಗೆಯಲ್ಲಿ ತರಲಾಗುವುದು.