ಮಲ್ಪೆ : ಮಲ್ಪೆ ಕಡಲತೀರ ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರದ ವಾರ್ಷಿಕ ಮಂಗಲದ ಪ್ರಯುಕ್ತ ಈ ಬಾರಿ ನಡೆಯುವ 9ನೇ ವರ್ಷದ ಅಖಂಡ ಭಜನಾ ಸಪ್ತಾಹಕ್ಕೆ ಫೆ. 6 ಸೂರ್ಯೋದಯಕ್ಕೆ ಚಾಲನೆ ನೀಡಲಾಯಿತು.
ಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಿಲ್ಲಾಧ್ಯಕ್ಷ ಕೃಷ್ಣ ರಾವ್ ಕೊಡಂಚ ಅವರು ಅಖಂಡ ಭಜನ ಸಪ್ತಾಹಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಕ್ತರನ್ನು ಭಗವಂತನಡೆಗೆ, ಭಗವಂತನನ್ನು ಭಕ್ತರಡೆಗೆ ಕೊಂಡೊಯ್ಯುವ ಶಕ್ತಿ ಭಜನೆಗಿದೆ. ಭಜನೆ ಮತ್ತು ಧ್ಯಾನದಿಂದ ಅಂತರಂಗ ಶುದ್ಧಿಗೊಂಡು ಜಗತ್ತನ್ನೆ ಪ್ರೀತಿಸುವ ಮನಃ ಸ್ಥಿತಿಯನ್ನು ಮೂಡಿಸುತ್ತದೆ. ಆ ಮೂಲಕ ಇಲ್ಲಿನ ಭಜನ ಮಂದಿರ ನಮ್ಮ ಹಿಂದೂ ಸಂಸ್ಕಾರವನ್ನು ಕಾಪಾಡಿಕೊಂಡು ಬರುವ ಕೆಲಸವನ್ನು ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಬೋಜರಾಜ ಆರ್. ಕಿದಿಯೂರು, ಲಕ್ಷ್ಮೀ ನಗರದ ಉದ್ಯಮಿ ಆನಂದ ಶೆಟ್ಟಿ, ಡಿ.ಜೆ. ಕನ್ಸ್ಟ್ರಕ್ಷನ್ನ ಸದಾನಂದ ಡಿ. ಸಾಲ್ಯಾನ್, ಮಲ್ಪೆ ದುರ್ಗಾ ಹೊಟೇಲ್ ಮಾಲಕ ಆನಂದ ನಾಯಕ್, ಸಾಣೆಕಲ್ಲು ಕುಲದೇವತಾ ಭಜನ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಭಟ್, ಎರ್ಮಾಳು ಬಡಾ ಕರ್ಕೇರ ಮೂಲಸ್ಥಾನದ ಅಧ್ಯಕ್ಷ ಕಾಂತಪ್ಪ ಕರ್ಕೇರ, ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಗೌರವಾಧ್ಯಕ್ಷ ಪಾಂಡುರಂಗ ಮಲ್ಪೆ, ಉಪಾಧ್ಯಕ್ಷ ಶಶಿಧರ್ ಕುಂದರ್, ಕಾರ್ಯದರ್ಶಿ ಯಶವಂತ್ ಸುವರ್ಣ, ಕೋಶಾಧಿಕಾರಿ ಸತೀಶ್ ಮೆಂಡನ್, ಧನಂಜಯ್ ಕುಂದರ್, ಪ್ರದೀಪ್ ಮೆಂಡನ್, ಜ್ಞಾನೇಶ್ವರ ಕೋಟ್ಯಾನ್, ರಾಧಾಕೃಷ್ಣ ಮೆಂಡನ್, ಶೇಖರ್ ತಿಂಗಳಾಯ, ಮನೋಹರ್ ಸುವರ್ಣ, ಯಶವಂತ ಕೋಟ್ಯಾನ್, ರಾಜೀವ ಕರ್ಕೇರ, ತಿಲಕ್ ರಾಜ್, ಸಂತೋಷ್ ಕೋಟ್ಯಾನ್, ಸುಂದರ ಜತ್ತನ್, ತಾರಾನಾಥ್ ಕರ್ಕೇರ, ಚಂದ್ರಶೇಖರ್ ಮೆಂಡನ್, ವಾದಿರಾಜ್ ಕರ್ಕೇರ, ಚಂದ್ರಧರ್ ಕುಂದರ್, ಸೂರಪ್ಪ ಸುವರ್ಣ, ಗೋವರ್ಧನ್ ಸಾಲ್ಯಾನ್, ಸದಾನಂದ ಮೆಂಡನ್, ಮಾತೃ ಮಂಡಳಿಯ ಅಧ್ಯಕ್ಷೆ ಆಶಾ ಎನ್. ಅಮೀನ್, ವಾರಿಜಾ ಜ್ಞಾನೇಶ್ವರ್, ಹೀರಾ ಗುರುರಾಜ್, ಇಂದಿರಾ ಶಶಿಧರ್, ಚಂದ್ರಾವತಿ ಗಂಗಾಧರ್, ದೀಪಾ ಸತೀಶ್, ಸಾವಿತ್ರಿ ಅನಿಲ್, ಪುಷ್ಪಾ ಶಶಿಧರ್, ಹೇಮಾ, ಇಂದಿರಾ, ಆಶಾ ಜಗದೀಶ್, ಮಮತ, ಪ್ರಜ್ಞಾ , ಭಾರತಿ ಸುರೇಶ್, ಲಲಿತಾ, ಸುಮಾ ಮೊದಲಾದವರು ಉಪಸ್ಥಿತರಿದ್ದರು.