Home ಧಾರ್ಮಿಕ ಸುದ್ದಿ ಮಲ್ಪೆ ಕಡಲತೀರ ಶ್ರೀ ಜ್ಞಾನಜ್ಯೋತಿ ಭಜನ ಮಂದಿರ

ಮಲ್ಪೆ ಕಡಲತೀರ ಶ್ರೀ ಜ್ಞಾನಜ್ಯೋತಿ ಭಜನ ಮಂದಿರ

9ನೇ ವರ್ಷದ ಅಖಂಡ ಭಜನ ಸಪ್ತಾಹ, 42ನೇ ವಾರ್ಷಿಕ ಮಂಗಲ

545
0
SHARE

ಮಲ್ಪೆ : ಮಲ್ಪೆ ಕಡಲತೀರ ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರದ 42ನೇ ವಾರ್ಷಿಕ ಮಂಗಲ, 9ನೇ ವರ್ಷದ ಅಖಂಡ ಭಜನಾ ಸಪ್ತಾಹ, ಆರೋಗ್ಯ ತಪಾಸಣಾ ಶಿಬಿರ, ಶಿಶು ಮಂದಿರ ಮತ್ತು ಮಾತೃಮಂಡಳಿಯ ವಾರ್ಷಿಕೋತ್ಸವವು ಫೆ. 4ರಿಂದ 13ರವರೆಗೆ ಜರಗಲಿದೆ.

ಆ ಪ್ರಯುಕ್ತ ಫೆ. 6ರಂದು ಬೆಳಗ್ಗೆ 6.45ರ ಸೂರ್ಯೋದಯದಲ್ಲಿ ಅಖಂಡ ಭಜನಾ ಸಪ್ತಾಹಕ್ಕೆ ಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಿಲ್ಲಾಧ್ಯಕ್ಷ ಕೃಷ್ಣ ರಾವ್‌ ಕೊಡಂಚ ಅವರು ಚಾಲನೆ ನೀಡಲಿರುವರು. ಪ್ರಮುಖ ಗಣ್ಯರಾದ ಬೋಜರಾಜ ಆರ್‌. ಕಿದಿಯೂರು, ಮನೋಹರ್‌ ಶೆಟ್ಟಿ ತೋನ್ಸೆ, ಆನಂದ ಶೆಟ್ಟಿ, ಸದಾನಂದ ಮೆಂಡನ್‌, ಆನಂದ ನಾಯಕ್‌, ಬಾಲಕೃಷ್ಣ ಭಟ್‌ ಉಪಸ್ಥಿತರಿರುವರು.

ಫೆ. 13ರಂದು ಮಂಗಲೋತ್ಸವದ ಪ್ರಯುಕ್ತ ಬೆಳಗ್ಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಹಾಅನ್ನಸಂತರ್ಪಣೆ ನಡೆಯಲಿದೆ. ಉತ್ತರಖಂಡ ಕಾಶಿಮಠ ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿ ಅವರು ಉಪಸ್ಥಿತರಿದ್ದು ಆಶೀರ್ವಚನ ನೀಡಲಿರುವರು.

ಸಂಜೆ ನಡೆಯುವ ಧಾರ್ಮಿಕ ಸಭೆಯನ್ನು ಉದ್ಯಮಿ ಸಾಧು ಸಾಲ್ಯಾನ್‌ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಂದಿರದ ಅಧ್ಯಕ್ಷ ಕಿಶೋರ್‌ ಡಿ. ಸುವರ್ಣ ವಹಿಸಲಿರುವರು. ಮುಖ್ಯ
ಭಾಷಣಕಾರರಾಗಿ ಮೂಡುಬಿದ್ರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಪವನ್‌ ಕಿರಣ್‌ ಕೆರೆ, ಮುಖ್ಯ ಅತಿಥಿಗಳಾಗಿ ಕುಂದಾಪುರ ಸೇವಾ ಸಂಗಮ ಟ್ರಸ್ಟ್‌ನ ನಿರ್ವಾಹಕ ವಿಶ್ವಸ್ತ ಕೇಶವರಾಯ ಪ್ರಭು, ಕಾರ್ಯದರ್ಶಿ ಚಂದ್ರಿಕಾ ಧನ್ಯ, ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ, ನಿವೃತ್ತ ಮುಖ್ಯೋಪಾಧ್ಯಾಯ ಕರುಣಾಕರ ಮಾಸ್ತರ್‌, ಮಂದಿರದ ಪ್ರಧಾನ ಅರ್ಚಕ ಸೂರಪ್ಪ ಸುವರ್ಣ, ಮಾತೃ ಮಂಡಳಿಯ ಅಧ್ಯಕ್ಷೆ ಆಶಾ ಎನ್‌. ಅಮೀನ್‌ ಉಪಸ್ಥಿತರಿರುವರು. ದೊಡ್ಡಣಗುಡ್ಡೆ ಗೋ ಸಂರಕ್ಷಕಿ ಕಮಲ ಅವರನ್ನು ಸಮ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಂದ ನೃತ್ಯ ಕಾರ್ಯಕ್ರಮ, ನೃತ್ಯನಿಕೇತನ ಕೊಡವೂರು ಕಲಾವಿದರಿಂದ ಚೈತ್ರಾ ನೃತ್ಯ ನಾಟಕ, ಮಳೆ ಬಂತು ಮಳೆ ನೃತ್ಯ ರೂಪಕ ನಡೆಯಲಿದೆ. ಫೆ. 7ರಂದು ಸಂಜೆ 5.30ಕ್ಕೆ ಕುಟುಂಬ ಪ್ರಬೋಧಧನ ಕಾರ್ಯಕ್ರಮ ನಡೆಯಲಿದೆ.

ಫೆ. 4: ಯು. ದುಗ್ಗಪ್ಪ ಸಂಸ್ಮರಣೆ ಪ್ರಶಸ್ತಿ
ಭಜನಾ ಮಂದಿರದ ವತಿಯಿಂದ ಮಂದಿರ ಸದಸ್ಯರಾಗಿದ್ದ ದಿವಂಗತ ಯು. ದುಗ್ಗಪ್ಪ ಅವರ ಸ್ಮರಣಾರ್ಥವಾಗಿ ಯು. ದುಗ್ಗಪ್ಪ ಸಂಸ್ಮರಣೆ ಪ್ರಶಸ್ತಿಯನ್ನು ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ತೋನ್ಸೆ ಜಯಂತ್‌ ಕುಮಾರ್‌ ಅವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿ ಪ್ರಧಾನ ಪುರಸ್ಕಾರ ಸಮಾರಂಭವು ಫೆ. 4ರಂದು ಸಂಜೆ 6ಗಂಟೆಗೆ ಮಂದಿರದಲ್ಲಿ ನಡೆಯಲಿದ್ದು, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್‌ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮೀನುಗಾರಿಕೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ವಹಿಸಲಿರುವರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎಲ್‌. ಸಾಮಗ ಮಲ್ಪೆ ಸಂಸ್ಮರಣಾ ಮಾತುಗಳನ್ನಾಡಲಿದ್ದಾರೆ. ಪ್ರಮುಖ ಗಣ್ಯರಾದ ಆನಂದ ಸಿ. ಕುಂದರ್‌, ಹರಿಯಪ್ಪ ಕೋಟ್ಯಾನ್‌, ಆನಂದ ಪಿ. ಸುವರ್ಣ, ಮನೋಹರ್‌ ಶೆಟ್ಟಿ, ಬೈಕಾಡಿ ಸುಪ್ರಸಾದ್‌ ಶೆಟ್ಟಿ, ತಲ್ಲೂರು ಶಿವರಾಮ ಶೆಟ್ಟಿ, ಸಾಧು ಸಾಲ್ಯಾನ್‌, ಎನ್‌. ಟಿ. ಅಮೀನ್‌, ಗಣೇಶ್‌ ರಾವ್‌ ಉಪಸ್ಥಿತರಿರುವರು. ಬಳಿಕ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರಿಂದ ಕುಶಲವ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಆರೋಗ್ಯ ಶಿಬಿರಗಳು
ಶಿಬಿರವು ಫೆ. 9ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೂಳೆ ಸಾಂದ್ರತೆ, ಸಿಹಿಮೂತ್ರ, ಕಿವಿ, ಮೂಗು, ಗಂಟಲು, ದಮ್ಮು (ಉಬ್ಬಸ), ಕೆಮ್ಮು ಉಚಿತ ತಪಸಣೆ, ಫೆ. 10ರಂದು ಹೃದಯ ಮತ್ತು ಮಧುಮೇಹ ಉಚಿತ ತಪಸಣೆ, ಫೆ. 11ರಂದು ಕಣ್ಣಿನ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ಕನ್ನಡಕ ವಿತರಣೆ, ಚರ್ಮ ತಪಾಸಣಾ ಶಿಬಿರವು ನಡೆಯಲಿದೆ. ಫೆ. 12ರಂದು ಬೆಳಗ್ಗೆ 10.30 ವಿಮಾ ಪಾಲಿಸಿ ವಿತರಣಾ ಕಾರ್ಯಕ್ರಮ ಜರಗಲಿದೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here