Home ಧಾರ್ಮಿಕ ಸುದ್ದಿ ಮಲ್ಪೆ ಬಾಪುತೋಟ : ನಾಗಬ್ರಹ್ಮಮಂಡಲ ಸೇವೆ

ಮಲ್ಪೆ ಬಾಪುತೋಟ : ನಾಗಬ್ರಹ್ಮಮಂಡಲ ಸೇವೆ

ಇಂದು ಹೊರೆಕಾಣಿಕೆ ಮೆರವಣಿಗೆ

1688
0
SHARE

ಮಲ್ಪೆ : ಮಲ್ಪೆ ಬಾಪುತೋಟ ಗೋಳಿದಡಿ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಬಂಗೇರ ಕುಟುಂಬಸ್ಥರ ಸೇವಾರ್ಥವಾಗಿ ಚತುಃಪವಿತ್ರ ನಾಗಬ್ರಹ್ಮಮಂಡಲ ಸೇವೆಯು ಫೆ. 16ರಿಂದ ಫೆ. 18ರ ವರೆಗೆ ಪ್ರೊ| ಲಕ್ಷ್ಮೀನಾರಾಯಣ ಸಾಮಗ ಅವರ ನೇತೃತ್ವದಲ್ಲಿ, ವೇ. ಮೂ| ಮುರಳೀಧರ ತಂತ್ರಿ, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್‌ ಅವರ ಪೌರೋಹಿತ್ಯ, ವೇ|ಮೂ| ಶ್ರೀಕ್ಷೇತ್ರ ಕಲ್ಲಂಗಳ ಬ್ರಹ್ಮಶ್ರೀ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ, ಮುದ್ದೂರು ಕೃಷ್ಣ ಪ್ರಸಾದ್‌ ವೈದ್ಯ ಮತ್ತು ಬಳಗದ ಸಹಯೋಗದಲ್ಲಿ ನಡೆಯಲಿರುವುದು.

ಫೆ. 16 ಮತ್ತು 17ರಂದು ನಾಗಬ್ರಹ್ಮಸ್ಥಾನದಲ್ಲಿ ವೈದಿಕ ವಿಧಿವಿಧಾನಗಳು ಜರಗಲಿವೆ. ಫೆ. 18ರಂದು ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಜರಗಲಿದೆ. ಸಂಜೆ 5 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.

ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಪ್ರೊ| ಎಂ.ಎಲ್‌. ಸಾಮಗ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸುಬ್ರಹ್ಮಣ್ಯ ಉಪಾಧ್ಯ ಮಲ್ಪೆ, ಕೃಷ್ಣ ಉಪಾಧ್ಯ ಮಲ್ಪೆ, ಮಾಜಿ ಶಾಸಕ ಯು. ಆರ್‌. ಸಭಾಪತಿ, ಕೆ. ರಘುಪತಿ ಭಟ್‌, ಕಲ್ಮಾಡಿ ಚರ್ಚ್‌ನ ಧರ್ಮಗುರು ಆಲ್ಬನ್‌ ಡಿ’ಸೋಜಾ, ಪಡುಬಿದ್ರೆ ಖಡ್ಗೇಶ್ವರಿ ಬ್ರಹ್ಮಸ್ಥಾನದ ಮೊಕ್ತೇಸರ ನಾರಾಯಣ ರಾವ್‌, ಬೆಂಗಳೂರು ಬಿಲ್ಲವ ಅಸೋಸಿಯೇಶನಿನ ಅಧ್ಯಕ್ಷ ವೇದ ಕುಮಾರ್‌, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯ ನಾರಾಯಣ ಪಿ. ಕುಂದರ್‌, ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ಮಲ್ಪೆ ರಾಘವೇಂದ್ರ, ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ್‌ ಸಿ. ಬಂಗೇರ, ಉದ್ಯಮಿ ನಾಗೇಶ್‌ ಉದ್ಯಾವರ ಉಪಸ್ಥಿತರಿರುವರು. ರಾತ್ರಿ 8.30ಕ್ಕೆ ನಾಗಸಹಿತ ಪರಿವಾರ ದೇವರಿಗೆ ಪ್ರಸನ್ನಪೂಜೆ, ಹಾಲಿಟ್ಟು ಸೇವೆ ಜರಗಿ ರಾತ್ರಿ 10 ಗಂಟೆಗೆ ಚತುಃಪವಿತ್ರ ನಾಗಬ್ರಹ್ಮ ಮಂಡಲ ಸೇವೆ ನಡೆಯಲಿದೆ.

ಇಂದು ಹೊರಕಾಣಿಕೆ ಮೆರವಣಿಗೆ
ಫೆ. 16ರಂದು ಅಪರಾಹ್ನ 2ಗಂಟೆಗೆ ಕೊಡವೂರು ಶಂಕರನಾರಾಯಣ ದೇವಸ್ಥಾನದಿಂದ ವೈಭವದ ಹೊರೆಕಾಣಿಕೆ ಮೆರವಣಿಗೆಯು ಸನ್ನಿಧಿಗೆ ಸಾಗಿಬರಲಿದೆ. ಅಂದು ರಾತ್ರಿ 7ಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರಿದಾಸ ಬಿ.ಸಿ. ರಾವ್‌ ಶಿವಪುರ ಅವರಿಂದ ಹರಿಕಥೆ, ಫೆ. 17ರಂದು ಸಂಜೆ ಸುರೇಖಾ ಎಂ. ಭಟ್‌ ಮತ್ತು ಬಳಗದವರಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ನಾಗಬ್ರಹ್ಮ ಮಂಡಲ ಸೇವಾ ಸಮಿತಿಯ ಅಧ್ಯಕ್ಷ ಎಚ್‌. ವಿ. ಜಗಜೀವನ್‌, ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್‌ ಕುಮಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here