ತೆಕ್ಕಟ್ಟೆ (ಮಲ್ಯಾಡಿ) : ಮಲ್ಯಾಡಿ ಶ್ರೀ ಕ್ಷೇತ್ರ ಸಪರಿವಾರ ಶ್ರೀ ಸತ್ಯಗಣಪತಿ, ಶ್ರೀ ಮಹಾದೇವಿ, ಶ್ರೀ ಹಿರಿಯಮ್ಮ ಮತ್ತು ಶ್ರೀ ನಂದಿಕೇಶ್ವರ ಸಪರಿವಾರ ಸನ್ನಿಧಿಯಲ್ಲಿ ಜ. 30ರಂದು ಹಾಲುಹಬ್ಬ ಹಾಗೂ ಕೆಂಡ ಸೇವೆ ಸಡಗರದಿಂದ ಜರಗಿತು.
ದೇಗುಲವು ಸಂಪೂರ್ಣ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಸಾವಿರಾರು ಭಕ್ತರು ಶ್ರೀದೇವರಿಗೆ ಹಣ್ಣುಕಾಯಿ ಸೇವೆ, ಹೂವು, ಕಾಣಿಕೆಯನ್ನು ಸಮರ್ಪಿಸಿದರು.
ಡಿ. 31ರಂದು ಶ್ರೀ ದೇವರ ಢಕ್ಕೆ ಬಲಿ ಸೇವೆ ನಾಗನಿಗೆ ಹಾಲಿಟ್ಟು ಸೇವೆ ಅನಂತರ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಹಾಗೂ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ನೂತನ ಪ್ರಸಂಗ ಪ್ರದರ್ಶನಗೊಂಡಿತು.