ಉಡುಪಿ: ಕರಾವಳಿಯ ವಿಷ್ಣು ಕ್ಷೇತ್ರಗಳಲ್ಲೇ ಅತ್ಯಂತ ಪ್ರಾಚೀನ ಇತಿಹಾಸವುಳ್ಳ ಮಲ್ಲಂಪಳ್ಳಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳೆದ ಮಕರ ಸಂಕ್ರಾಂತಿಯಿಂದ ಆರಂಭಗೊಂಡ ಜೀರ್ಣೋದ್ಧಾರ ಕಾರ್ಯ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದೊಂದಿಗೆ ಶನಿವಾರ ಸಂಪನ್ನಗೊಂಡಿತು.
ಕಾಣಿಯೂರು ಶ್ರೀಗಳ ಸಾನ್ನಿಧ್ಯದಲ್ಲಿ ವಿದ್ವಾನ್ ಹೆರ್ಗ ಜಯರಾಮ ತಂತ್ರಿ ಅವರ ನೇತೃತ್ವದ ಋತ್ವಿಜರಿಂದ ಶ್ರೀ ವಿಷ್ಣುಮೂರ್ತಿ ದೇವರಿಗೆ ಪಂಚಾಮೃತ ಅಭಿಷೇಕ ಬ್ರಹ್ಮಕಲಶಾಭಿಷೇಕವುನೆರವೇರಿತು.
ಶ್ರೀ ವಿದ್ಯಾವಲ್ಲಭ ತೀರ್ಥರು ಸಂದೇಶ ನೀಡಿ, ಅತ್ಯಂತ ಕಡಿಮೆ ಸಮಯದಲ್ಲಿ ನಡೆದ ಮಲ್ಲಂಪಳ್ಳಿ ಕ್ಷೇತ್ರ ಜೀರ್ಣೋದ್ಧಾರ ಕಾರ್ಯ ಕಂಡು ಅತ್ಯಂತ ಅಶ್ವರ್ಯ ಹಾಗೂ ಆನಂದವಾಗಿದೆ. ಹತ್ತು ಸಮಸ್ತರ ನಿಸ್ಪೃಹ ಸೇವೆಯಿಂದ ಇದು ಸಾಧ್ಯವಾಗಿದೆ. ಬ್ರಹ್ಮ ಕಲಶಾಭಿಷೇಕದಿಂದ ನಾಡಿಗೆ ಒಳಿತಾಗಲಿ ಎಂದರು.
ಅನ್ನಸಂತರ್ಪಣೆಯಲ್ಲಿ ಎರಡೂವರೆ ಸಾವಿರ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಉದ್ಯಮಿ ಭುವನೇಂದ್ರ ಕಿದಿಯೂರ್ ಹಾಲು – ಪಾಯಸ ಸೇವೆಯನ್ನು ಪ್ರಾಯೋಜಿಸಿದ್ದರು. ಕಾಣಿಯೂರು ಶ್ರೀಗಳ ವತಿಯಿಂದ ಹಯಗ್ರೀವ ಮಡ್ಡಿ, ಸೌಕೂರು ದೇವಳದ ವತಿಯಿಂದ ವಡೆ ಪ್ರಸಾದ ವ್ಯವಸ್ಥೆಯಾಗಿತ್ತು.
ಭಕ್ತರ ಮನೆಗೊಂದರಂತೆ ಸಾವಿರ ಮನೆಗಳಿಗೆ ಪ್ರಸಾದ ರೂಪದಲ್ಲಿ ಭಕ್ತರಿಗೆ ಬಿಲ್ವಪತ್ರೆ ಸಸಿಗಳನ್ನು ವಿತರಿಸಲಾಯಿತು
ಜಿ.ಪಂ.ಅಧ್ಯಕ್ಷ ದಿನಕರ ಬಾಬು, ಯಶ್ಪಾಲ್ ಸುವರ್ಣ, ಪುರುಷೋತ್ತಮ ಶೆಟ್ಟಿ , ಡಾ| ಜಿ.ಶಂಕರ್, ಸುರೇಶ್ ನಾಯಕ್, ಸರಸ್ವತೀ ಬಾರಿತ್ತಾಯ, ಮಂಜುನಾಥ ಉಪಾಧ್ಯ, ಹೆರ್ಗ ಹರಿಪ್ರಸಾದ್ ಭಟ್, ಮುರಳೀಧರ ತಂತ್ರಿ ಕೊರಂಗ್ರಪಾಡಿ, ರಂಜನ ಕಲ್ಕೂರ್ , ಶಾಂತಾ ಉಡುಪ, ಮುರಳಿ ಕಡೆಕಾರ್ ಕ್ಷೇತ್ರಕ್ಕೆ ಭೇಟಿ ನೀಡಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎಂ. ಶ್ರೀನಿವಾಸ ಬಲ್ಲಾಳ್, ಅರ್ಚಕ ಅಚ್ಯುತ ಬಲ್ಲಾಳ್, ಕೇಶವ ಆಚಾರ್ಯ , ಉತ್ಸವ ಸಮಿತಿ ಕಾರ್ಯದರ್ಶಿ ವಾಸುದೇವ ಭಟ್, ಪೆರಂಪಳ್ಳಿ ವಾಸ್ತು ತಜ್ಞ ಸುಬ್ರಹ್ಮಣ್ಯ ಭಟ್, ಜ್ಯೋತಿ ತಂತ್ರಿ, ಶ್ರೀಪತಿ ಭಟ್, ಪ್ರಶಾತ್ ಪೆರಂಪಳ್ಳಿ ಕೃಷ್ಣ ರಾವ್, ಗಿರಿಧರ್, ಕಿಶೋರ್ ಸೇರಿದಂತೆ ಹಲವಾರು ಮಂದಿ ಉತ್ಸವದಲ್ಲಿ ಸಹಕರಿಸಿದರು.
ಅದಮಾರು ಶ್ರೀ ವಿಶ್ವಪ್ರಿಯ ತೀರ್ಥರು ಶುಕ್ರವಾರ ಸಂಜೆ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ದೇವಳದ ಗೌರವವನ್ನು ಸ್ವೀಕರಿಸಿದರು.