ಉಡುಪಿ: ಮಲ್ಲಂಪಳ್ಳಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೇಗುಲ ಸಮರ್ಪಣೆ ಹಾಗೂ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸೋಮವಾರ ಬೆಳಗ್ಗೆ ಅದ್ದೂರಿ ಚಾಲನೆ ದೊರೆಯಿತು. ವಿದ್ವಾನ್ ಹೆರ್ಗ ಜಯರಾಮ ತಂತ್ರಿಗಳ ನೇತೃತ್ವದಲ್ಲಿ ಮುಹೂರ್ತ, ಗಣಯಾಗ ನವಗ್ರಹ ಯಾಗ ಸಹಿತ ಧಾರ್ಮಿಕ ವಿಧಿ ವಿಧಾನ ನಡೆದವು.
ಸಂಜೆ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ಬೃಹತ್ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್ ಮೆರವಣಿಗೆಗೆ ಭಗವಾಧ್ವಜ ಅರಳಿಸಿ ಚಾಲನೆ ನೀಡಿದರು.
ವಾಸ್ತು ತಜ್ಞ ಸುಬ್ರಹ್ಮಣ್ಯ ಭಟ್, ಗೋಪಾಲ ಶೆಟ್ಟಿ , ನಗರಸಭಾ ಸದಸ್ಯ ಗಿರಿಧರ ಆಚಾರ್ಯ, ನಗರಸಭಾ ಮಾಜಿ ಸದಸ್ಯ ಪ್ರಶಾಂತ್ ಭಟ್, ಸತೀಶ್, ಕಿಶೋರ್, ನಾಗರಾಜ ಶಿವತ್ತಾಯ, ಸತೀಶ್ ಕುಮಾರ್, ನಿರಂಜನ ಭಟ್, ರಂಗನಾಥ ಸರಳಾಯ , ಕೇಶವ ಆಚಾರ್ಯ, ರಂಗನಾಥ ಸಾಮಗ, ಎಸ್.ವಿ.ಭಟ್ ಮೊದಲಾದವರು ಉಪಸ್ಥಿತರಿದ್ದರು.
ದೇಗುಲ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿಎಂ. ಶ್ರೀನಿವಾಸ ಬಲ್ಲಾಳ್, ಅಚ್ಯುತ ಬಲ್ಲಾಳ್ ಮೊದಲಾ ದವರು ಮೆರವಣಿಗೆಯನ್ನು ಬರಮಾಡಿಕೊಂಡರು . ಕ್ಷೇತ್ರಕ್ಕೆ ಸಂಜೆ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಭೇಟಿ ನೀಡಿ ಆಶೀರ್ವಚನಗೈದರು.