Home Uncategorized ಮರ್ದಾಳ: ನೆಕ್ಕಿತ್ತಡ್ಕ ಮಖಾಂ ವಾರ್ಷಿಕ ಉರೂಸ್‌ಗೆ ಚಾಲನೆ

ಮರ್ದಾಳ: ನೆಕ್ಕಿತ್ತಡ್ಕ ಮಖಾಂ ವಾರ್ಷಿಕ ಉರೂಸ್‌ಗೆ ಚಾಲನೆ

1308
0
SHARE

ಕಡಬ ಫೆ. 19: ಮರ್ದಾಳದ ನೆಕ್ಕಿತ್ತಡ್ಕ ಮಖಾಂ ವಾರ್ಷಿಕ ಉರೂಸ್‌ ಸಮಾರಂಭಕ್ಕೆ ಉರೂಸ್‌ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್‌ ರಹಿಮಾನ್‌ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಮರ್ದಾಳ ತಖೀÌಯತುಲ್‌ ಇಸ್ಲಾಂ ಜುಮ್ಮಾ ಮಸೀದಿಯ ಅಧ್ಯಕ್ಷ ಸೈಯದ್‌ ಕೆ.ಎಸ್‌. ಹಮೀದ್‌ ತಂಙಳ್‌ ಅವರು ದುವಾ ಆಶೀರ್ವಚನ ನೀಡಿದರು.

ಮರ್ದಾಳ ಮಸೀದಿಯ ಖತೀಬ್‌ ಹನೀಫ್‌ ಸಖಾಫಿ, ಉರೂಸ್‌ ಕಮಿಟಿ ಉಪಾಧ್ಯಕ್ಷ ಸಿ.ಕೆ. ಸಿದ್ದಿಕ್‌ ಸಖಾಫಿ, ಸದರ್‌ ಮುಹಲ್ಲಿಂ ಇಶಾìದ್‌ ಸಹದಿ, ಮಹಝಿನ್‌ ಆದಂ ಸಹದಿ, ಮಸೀದಿ ಕಮಿಟಿಯ ಮಾಜಿ ಅಧ್ಯಕ್ಷ ಮಹಮ್ಮದ್‌ ಪಿಲ್ಯ, ಸಮಿತಿ ಸದಸ್ಯ ಮಹಮ್ಮದ್‌ ಕೆ., ಪ್ರಧಾನ ಕಾರ್ಯದರ್ಶಿ ಹನೀಫ್‌, ಉರೂಸ್‌ ಕಮಿಟಿ ಕಾರ್ಯದರ್ಶಿ ರಶೀದ್‌ ನಿಂತಿಕಲ್ಲು, ಜಮಾಅತ್‌ ಕಮಿಟಿ ಕೋಶಾಧಿಕಾರಿ ಅಬ್ದುಲ್‌ ಲತೀಫ್‌ ಕೆ.ಜಿ.ಎನ್‌., ಉರೂಸ್‌ ಕಮಿಟಿ ಕೋಶಾಧಿಕಾರಿ ಮಹಮ್ಮದ್‌ ಶರೀಫ್‌, ಸಾದಿಕ್‌, ಹೈದರ್‌, ಇಸ್ಮಾಯಿಲ್‌ ಐ.ಎಂ., ಸತ್ತಾರ್‌ ಬಾಜಿನಡಿ, ಸುಲೇಮಾನ್‌ ಆರ್‌., ನಿಝಾರ್‌ ಸಾಲೆತ್ತಡ್ಕ, ಝಫೀರ್‌ ಮೊದಲಾದವರು ಉಪಸ್ಥಿತರಿದ್ದರು.

ರಾತ್ರಿ ನಡೆದ ಸಮಾರಂಭದಲ್ಲಿ ಗೇರು ಕಟ್ಟೆ ಮನ್‌ಶರ್‌ ಅಸ್ಸಯ್ಯದ್‌ ಸಿ.ಟಿ.ಎಂ. ಉಮ್ಮರ್‌ ಅಸ್ಸಖಾಫ್‌ ತಂಙಳ್‌ ದುಃವಾ ಆಶೀರ್ವಚನ ನೀಡಿದರು. ಮರ್ದಾಳ ಜುಮಾ ಮಸೀದಿ ಖತೀಬ್‌ ಮೊಹಮ್ಮದ್‌ ಹನೀಫ್‌ ಸಖಾಫಿ ಪ್ರಭಾಷಣಗೈದರು. ಮುಹಲ್ಲಿಂ ಇರ್ಶಾದ್‌ ಸಹದಿ ಸ್ವಾಗತಿಸಿ, ಆದಂ ಸಹದಿ ವಂದಿಸಿದರು.

LEAVE A REPLY

Please enter your comment!
Please enter your name here