Home ಧಾರ್ಮಿಕ ಸುದ್ದಿ ಮಜಲುಮಾರು: ಜಾತ್ರೆ ಸಂಪನ್ನ

ಮಜಲುಮಾರು: ಜಾತ್ರೆ ಸಂಪನ್ನ

1375
0
SHARE

ನರಿಮೊಗರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಎ. 8 ಮತ್ತು 9ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಜಾತ್ರೆಯ ಅಂಗವಾಗಿ ಎ. 9ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ, ಏಕದಶ ರುದ್ರಾಭಿಷೇಕ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಶ್ರೀ ದೇವಸ್ಥಾನದ ದೈವಗಳ ಸನ್ನಿಧಿಯಲ್ಲಿ ತಂಬಿಲ ಸೇವೆ, ದೇವರಿಗೆ ಮಹಾಪೂಜೆ ಜರಗಿತು. ರಾತ್ರಿ ದೈವಗಳ ಭಂಡಾರ ತೆಗೆದು, ದೇವರ ಬಲಿ ಉತ್ಸವ, ವಸಂತ ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ವೈದಿಕ ಮಂತ್ರಾಕ್ಷತೆ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಶ್ರೀ ಕ್ಷೇತ್ರದ ದೈವಗಳ ನೇಮ ನಡಾವಳಿ ನಡೆಯಿತು.

ಉಮಾಮಹೇಶ್ವರ ಸೇವಾ ಟ್ರಸ್ಟ್‌ ಅಧ್ಯಕ್ಷ ತಿರುಮಲೇಶ್ವರ ಭಟ್‌, ಗೌರವಾಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಉಪಾಧ್ಯಕ್ಷ ಸುಬ್ರಹ್ಮಣ್ಯ ತಂತ್ರಿ ಉಪ್ಪಳ, ಕಾರ್ಯದರ್ಶಿ ವಿಶ್ವನಾಥ ಗೌಡ, ಕೋಶಾಧಿಕಾರಿ ನವೀನ್‌ ರೈ ಶಿಬರ, ಸದಸ್ಯರಾದ ಲಕ್ಷ್ಮೀಶ ತಂತ್ರಿ ಉಪ್ಪಳ, ಪ್ರಸನ್ನ ಭಟ್‌ ಪಂಚವಟಿ, ಗಿರೀಶ್‌ ರೈ ಮಣಿಯ, ಎಂ. ರವಿ ಮಣಿಯ, ಎಂ. ಸುಧೀರ್‌ ಹೆಬ್ಟಾರ್‌, ಕೆ.ಎಂ. ಬೆಳಿಯಪ್ಪ ಗೌಡ ಕೆದ್ಕಾರ್‌, ಕೇಶವ ಪೂಜಾರಿ ಮುಕ್ವೆ, ಪದ್ಮನಾಭ ಪೂಜಾರಿ ಬೆದ್ರಾಳ, ಮೋನಪ್ಪ ಪುರುಷ ಮುಗೇರಡ್ಕ, ದೇವಸ್ಥಾನದ ಪ್ರಧಾನ ಅರ್ಚಕ ಪ್ರಸಾದ್‌ ಅಡಿಗ, ಭಜನ ಮಂಡಳಿ ಅಧ್ಯಕ್ಷ ಪ್ರವೀಣ್‌ ಕುಲಾಲ್‌ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here