Home ಧಾರ್ಮಿಕ ಸುದ್ದಿ ಮಹಮ್ಮಾಯಿ ದೇವಸ್ಥಾನ ಬ್ರಹ್ಮಕಲಶೋತ್ಸವ

ಮಹಮ್ಮಾಯಿ ದೇವಸ್ಥಾನ ಬ್ರಹ್ಮಕಲಶೋತ್ಸವ

1874
0
SHARE

ಪಡುಪಣಂಬೂರು: ಇಲ್ಲಿನ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಫೆ. 10ರಂದು ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಕ್ತರ ಪಾಲ್ಗೊಳ್ಳುವಿಕೆಯಿಂದ ಶಿಬರೂರು ವೇ|ಮೂ| ವೇದವ್ಯಾಸ ತಂತ್ರಿ ಅವರ ನೇತೃತ್ವದಲ್ಲಿ ಜರಗಿತು.

ಬೆಳಗ್ಗೆ ಪ್ರಸನ್ನ ಪೂಜೆ ನಡೆದು, ಕಲಶ ಪ್ರತಿಷ್ಠೆಗೊಂಡು, ಮೀನ ಲಗ್ನದಲ್ಲಿ ಬ್ರಹಕಲಶೋತ್ಸವವು ನಡೆಯಿತು. ಅನಂತರ ಶ್ರೀದೇವಿ ದರ್ಶನ, ಸಾಮೂಹಿಕ ಹೂವಿನ ಪೂಜೆ, ಅಪ್ಪ ಸೇವೆ, ಮಹಾ ಪೂಜೆಯನ್ನು ನೇರವೇರಿಸಲಾಯಿತು.

ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ದೇವಸ್ಥಾನದಲ್ಲಿನ ವಿವಿಧ ಉಪ ಸಮಿತಿಯ ಸ್ವಯಂ ಸೇವಕರು ಸೇವಾಕರ್ತರಾಗಿ ತೊಡಗಿಸಿಕೊಂಡಿದ್ದರು. ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರು ಸಹಕರಿಸಿದ್ದರು. ದೇವಸ್ಥಾನ ವಠಾರದಲ್ಲಿ ಸ್ವಚ್ಛತೆಗೆ ಭಾರೀ ಮಹತ್ವ ನೀಡಲಾಗಿತ್ತು.

ಕ್ಷೇತ್ರದ ಅರ್ಚಕ ಕೆ.ಎಂ. ಕೃಷ್ಣ ಭಟ್, ಗುರಿಕಾರರಾದ ರಾಮ ಗುರಿಕಾರ್‌, ಬಿ. ರತ್ನಾಕರ ಶೆಟ್ಟಿಗಾರ್‌ ಯಾನೆ ಕಾಂತಣ್ಣ ಗುರಿಕಾರ್‌, ಅಪ್ಪು ಗುರಿಕಾರ್‌, ಲಕ್ಷ್ಮಣ ಗುರಿಕಾರ್‌, ಆಡಳಿತ ಮಂಡಳಿಯ ಅಧ್ಯಕ್ಷ ವೀರಪ್ಪ ಒ. ಶೆಟ್ಟಿಗಾರ್‌, ಪ್ರಧಾನ ಕಾರ್ಯದರ್ಶಿ ಉಮಾನಾಥ ಜೆ. ಶೆಟ್ಟಿಗಾರ್‌, ಕೋಶಾಧಿಕಾರಿ ಆರ್‌.ಎನ್‌. ಶೆಟ್ಟಿಗಾರ್‌, ಬೆಂಗಳೂರು ಸಮಿತಿಯ ಅಧ್ಯಕ್ಷ ಪಿ. ನಾಗೇಶ್‌ ಶೆಟ್ಟಿಗಾರ್‌, ಮುಂಬಯಿ ಸಮಿತಿಯ ಅಧ್ಯಕ್ಷ ಎಚ್.ಎ. ಶೆಟ್ಟಿಗಾರ್‌, ಪದಾಧಿಕಾರಿಗಳು, ಸದಸ್ಯರು, ವಿವಿಧ ಗ್ರಾಮ ಸಮಿತಿಯ ಪದಾಧಿಕಾರಿಗಳು, ಯುವಕ ಮಂಡಲದ ಅಧ್ಯಕ್ಷ ಶಂಕರ ಶೆಟ್ಟಿಗಾರ್‌, ಮಹಿಳಾ ಮಂಡಳಿಯ ಅಧ್ಯಕ್ಷೆ ವಿಪುಲ್ಲ ಡಿ. ಶೆಟ್ಟಿಗಾರ್‌ ಉಪಸ್ಥಿತರಿದ್ದರು.ಮೂಲ್ಕಿ ಪೊಲೀಸ್‌ ಠಾಣೆಯ ಸಿಬಂದಿ,ಗೃಹರಕ್ಷಕ ದಳದ ಸಿಬಂದಿ ಭದ್ರತಾ ವ್ಯವಸ್ಥೆಯಲ್ಲಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here