Home ಧಾರ್ಮಿಕ ಸುದ್ದಿ 50ರ ಗಣೇಶೋತ್ಸವದಲ್ಸಿ “ಮಹಿಳಾ ಸಂಪದ’

50ರ ಗಣೇಶೋತ್ಸವದಲ್ಸಿ “ಮಹಿಳಾ ಸಂಪದ’

317
0
SHARE

ಸುಳ್ಯ : ಇಲ್ಲಿನ ಶ್ರೀ ಸಿದ್ಧಿವಿ ನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀದೇವ ತಾರಾಧನೆ ಸಮಿತಿ, ಸುವರ್ಣ ಮಹೋತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮದಲ್ಲಿ ಶನಿವಾರ ದಿನಪೂರ್ತಿ ಮಹಿಳೆಯರಿಂದಲೇ ಕಾರ್ಯಕ್ರಮ ನಡೆದಿದ್ದು, ಎಲ್ಲರ ಗಮನ ಸೆಳೆಯಿತು.

ಪೂರ್ವಾಹ್ನ ಮಾತೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ಅಪ್ಪ ನೈವೇದ್ಯವನ್ನು ಶ್ರೀ ದೇವರಿಗೆ ಸನ್ನಿಧಿಯಲ್ಲಿ ಸಮರ್ಪಿಸಿದರು. ಸೇವೆಯಲ್ಲಿ 160 ಮಹಿಳೆಯರು
ಪಾಲ್ಗೊಂಡರು. 10.45ರಿಂದ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷ ಬಳಗದವರಿಂದ ಯಕ್ಷಗಾನ ತಾಳಮದ್ದಲೆ “ಸಮರ ಸೌಗಂಧಿಕಾ’ ಪ್ರದರ್ಶನಗೊಂಡಿತು. ಅಪರಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಮೂಹಿಕ ಭಜನೆ ನಡೆಯಿತು.

ಸಂಜೆ ನಡೆದ ಮಹಿಳಾ ಸಂಪದ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಕ್ಷೇತ್ರದ ಸಾದ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿದರು. ಡಾ| ಯಶೋದಾ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ವಿಮಲಾ ರಂಗಯ್ಯ ಭಾಗವಹಿಸಿದ್ದರು. ಶಕುಂತಲಾ ಅಯ್ಯರ್‌ ಉಪನ್ಯಾಸ ನೀಡಿದರು. ಪದ್ಮಾವತಿ
ಕಾಮತ್‌, ಎಂ.ಜಿ. ಕಾವೇರಮ್ಮ, ವೇದಾವತಿ ಅನಂತ ಬಡ್ಡಡ್ಕ, ಡಾ| ವೀಣಾ ಫಾಲಚಂದ್ರ, ಸೀತಾರತಾರನ್ನು ಸಮ್ಮಾನಿಸಲಾಯಿತು. ಲತಾ ಮಧುಸೂದನ ಸ್ವಾಗತಿಸಿದರು.

ಸ್ವಪ್ನಾ ಸುದರ್ಶನ್‌ ವಂದಿಸಿದರು. ಇಂದಿರಾ ಮಂಚಿ, ಶೀಲಾ ಕುರುಂಜಿ, ಪ್ರಜ್ಞಾ, ಚಿತ್ರಾ ಮಟ್ಟಿ, ಸೌಮ್ಯಾ ಸೂರ್ತಿಲ ಅವರು ಸಮ್ಮಾನ ಪತ್ರ ವಾಚಿಸಿದರು. ಶ್ರದ್ಧಾ ಭಟ್‌ ನಾಯರ್‌ ಪಳ್ಳ ಕಾಸರಗೋಡು ಅವರಿಂದ ಭಕ್ತ ಮಾರ್ಕಾಂಡೇಯ ಹರಿಕಥಾ ಕಾಲಕ್ಷೇಪ ನಡೆಯಿತು.

LEAVE A REPLY

Please enter your comment!
Please enter your name here