Home ಧಾರ್ಮಿಕ ಸುದ್ದಿ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಮಾ. 2-8: ಮಹಾಶಿವರಾತ್ರಿ ಜಾತ್ರೆ

ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಮಾ. 2-8: ಮಹಾಶಿವರಾತ್ರಿ ಜಾತ್ರೆ

2314
0
SHARE

ಪುಂಜಾಲಕಟ್ಟೆ : ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾತ್ರೆ ಮಾ.2ರಿಂದ ಮಾ. 8ರ ವರೆಗೆ ಜರಗಲಿದೆ.
ಮಾ. 2ರಂದು ಸಂಜೆ ಪ್ರಾರ್ಥನೆ, ಧ್ವಜಾರೋಹಣ, ಸಪ್ತೋತ್ಸವ ಆರಂಭ, 3ರಂದು ಬೆಳಗ್ಗೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ ನಿತ್ಯ ಉತ್ಸವಗಳು, 4ರಂದು ಮಹಾಶಿವರಾತ್ರಿ ಜಾಗರಣೆ, ಬೆಳಗ್ಗೆ ದರ್ಶನ ಬಲಿ, ಕಂಚು ಬೆಳಕು ಸೇವೆಗಳು, ಸಂಜೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಉತ್ಸವ, ಶ್ರೀ ಕಾರಿಂಜೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ, ರಾತ್ರಿ ತುಲಾಭಾರ ಸೇವೆ ಪ್ರಾರಂಭ, ರಂಗಪೂಜೆ, ಶತರುದ್ರಾಭಿಷೇಕ, ಭಜನೆ, 5ರಂದು ಚಂದ್ರಮಂಡಲ ಉತ್ಸವ, ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ದರ್ಶನಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಪಾರ್ವತಿ ಪರಮೇಶ್ವರ ದೇವರ ಭೇಟಿ, ಚಂದ್ರ ಮಂಡಲ ಉತ್ಸವ, ಬೆಳಗ್ಗೆ ಶಯನೋತ್ಸವ ಕವಾಟ ಬಂಧನ, ಪ್ರಸಾದ ವಿತರಣೆ, 6ರಂದು ಬೆಳಗ್ಗೆ ಮಹಾರಥೋತ್ಸವ, ದೈವದ ನೇಮ, ಮಹಾಪೂಜೆಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರಗಲಿದೆ.

7ರಂದು ಕಟ್ಟೆಪೂಜೆ ಉತ್ಸವ, ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ದರ್ಶನಬಲಿ, ದರ್ಶನ ಪ್ರಸಾದ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತ ರ್ಪಣೆ, ಸಂಜೆ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ಕೃಷ್ಣ ಸಂಧಾನ, ರಾತ್ರಿ ಪಾರ್ವತಿ ಪರಮೇಶ್ವರ ದೇವರ ಭೇಟಿ, ಕಟ್ಟೆಪೂಜೆ ಉತ್ಸವಗಳು, ಭೂತ ಬಲಿ, ದೇವರ ಶಯನ, ಕವಾಟಬಂಧನ, 8ರಂದು ಬೆಳಗ್ಗೆ ಕವಾಟೋದ್ಘಾಟನೆ, ಮಧ್ಯಾಹ್ನ ಮಹಾಪೂಜೆಗಳು, ಅನ್ನಸಂತರ್ಪಣೆ, ಸಂಜೆ ಅವಭೃಥ ಸ್ನಾನಕ್ಕೆ ಹೊರಡುವುದು, ವ್ಯಾಘ್ರ ಚಾಮುಂಡಿ ದೈವದ ನೇಮ, ದೇವರ ಅವಭೃಥ ಸ್ನಾನ, ಧ್ವಜ ಅವರೋಹಣ, 9ರಂದು ಬೆಳಗ್ಗೆ ಸಂಪ್ರೋಕ್ಷಣೆ, ಕಲಶ, ಮಹಾಪೂಜೆ, ಅನ್ನಸಂತರ್ಪಣೆ, ಮಹಾ ಮಂತ್ರಾಕ್ಷತೆ, 11ರಂದು ಶ್ರೀ ಕ್ಷೇತ್ರದ ನಾಗ ಸನ್ನಿಧಿಯಲ್ಲಿ ಪವಮಾನಾಭಿಷೇಕ ಸಹಿತ ನಾಗತಂಬಿಲಗಳು ನಡೆಯಲಿವೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here