Home ಧಾರ್ಮಿಕ ಸುದ್ದಿ ಮಹಾಶಿವರಾತ್ರಿ, ಮಹಾರಥೋತ್ಸವ

ಮಹಾಶಿವರಾತ್ರಿ, ಮಹಾರಥೋತ್ಸವ

1394
0
SHARE

ಪುಂಜಾಲಕಟ್ಟೆ : ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಾ.2ರಿಂದ ಆರಂಭ ಗೊಂಡ ಮಹಾಶಿವರಾತ್ರಿ ಜಾತ್ರೆಯು ಪೂರ್ವ ಸಂಪ್ರದಾಯದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮದೊಂದಿಗೆ ಸಂಭ್ರಮದಿಂದ ಮಾ.6ರಂದು ಸಂಪನ್ನಗೊಂಡಿತು.

ಕ್ಷೇತ್ರದ ಅರ್ಚಕರಾದ ಬಾಲಕೃಷ್ಣ ಆಚಾರ್ಯ, ಮಿಥುನ್‌ ರಾಜ್‌ ನಾವಡ, ರಾಘವೇಂದ್ರ ಭಟ್‌ ಕೊಡಂಬೆಟ್ಟು ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪಾರ್ವತಿ-ಪರಮೇಶ್ವರ ದೇವರ ಭೇಟಿ ಮಾ.5ರಂದು ಚಂದ್ರಮಂಡಲ ಉತ್ಸವ, ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ದರ್ಶನಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿತು. ರಾತ್ರಿ ಜಾತ್ರೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಪಾರ್ವತಿ-ಪರಮೇಶ್ವರ ದೇವರ ಭೇಟಿ
ನಡೆಯಿತು. ಬಳಿಕ ಚಂದ್ರಮಂಡಲ ಉತ್ಸವ, ಬೆಳಗ್ಗೆ ಶಯನೋತ್ಸವ ಕವಾಟ ಬಂಧನ,ಪ್ರಸಾದ ವಿತರಣೆ ನಡೆಯಿತು.

ಬುಧವಾರ ಮಧ್ಯಾಹ್ನ ಗದಾತೀರ್ಥ ಕೆರೆಯ ಬದಿಯ ವಿಶಾಲ ಮೈದಾನದಲ್ಲಿ ಮಹಾರಥೋತ್ಸವ ನಡೆಯಿತು. ರಥೋತ್ಸವ ಸಮಯದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ನೇಮ ನಡೆಯಿತು. ಬಳಿಕ ದೇವರು ದೇವಸ್ಥಾನಕ್ಕೆ ಹಿಂತಿರುಗಿ ಮಹಾಪೂಜೆ ನಂತರ ಮಹಾ ಅನ್ನಸಂತರ್ಪಣೆ ನಡೆಯಿತು.

ಅನ್ನ ಸಂತರ್ಪಣೆ
ಮಹಾಶಿವರಾತ್ರಿ ಜಾತ್ರೋತ್ಸವಕ್ಕೆ ಜನ ಸಾಗರ ಹರಿದು ಬಂದಿತ್ತು. ಸಾವಿರಾರು ಭಕ್ತಾದಿಗಳು ದೇವರ ಭೇಟಿ ಹಾಗೂ ಮಹಾರಥೋತ್ಸವದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ನಿಗದಿತ ಸಮಯಕ್ಕೆ ಮಹಾ ಅನ್ನ ಸಂತರ್ಪಣೆ ನಡೆದು ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿದರು. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೆ ಪ್ರಸನ್ನ ಕುಮಾರ್‌ ಹಾಗೂ ಪುಂಜಾಲಕಟ್ಟೆ ಠಾಣಾ ಎಎಸ್ಸೆ ಭಾಸ್ಕರ್‌, ಬಂಟ್ವಾಳ ಟ್ರಾμಕ್‌ ಠಾಣಾ ಸಿಬಂದಿ ಬಂದೋಬಸ್ತ್ಏ ರ್ಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

ಶಯನೋತ್ಸವ, ಶಯನ ಸೇವೆ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಜಾತ್ರೋತ್ಸವ ಸಂದರ್ಭದಲ್ಲಿ ವಿಶೇಷ ಸೇವೆಗಳಲ್ಲಿ ಶಯನ ಸೇವೆ ಅಪೂರ್ವವಾದುದು. ರಾತ್ರಿ ದೇವರ ಭೇಟಿಯ ಬಳಿಕ
ಗರ್ಭಗುಡಿಯಲ್ಲಿ ಶಯನೋತ್ಸವ, ಕವಾಟ ಬಂಧನ ನಡೆಸಲಾಗುತ್ತದೆ. ಮರುದಿನ ಬೆಳಗ್ಗೆ ಕವಾಟೋದ್ಘಾಟನೆ ಯಾಗುವಾಗ ಪಾರ್ವತಿ ಪರಮೇಶ್ವರ ದೇವರ ದರ್ಶನ ಮಾಡುವುದೇ ಶಯನ ಸೇವೆ.

ಮಾಜಿ ಸಚಿವ ಬಿ. ರಮಾನಾಥ ರೈ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್‌, ಬಂಟ್ವಾಳ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಕಾವಳಮೂಡೂರು ಪಂ.ಅ. ಅಧಿಕಾರಿ ವೇದವ, ಪ್ರಮುಖರಾದ ವೆಂಕಟರಮಣ ಮುಚ್ಚಿನ್ನಾಯ, ಗಣಪತಿ ಮುಚ್ಚಿನ್ನಾಯ, ಮಾಣಿಕ್ಯರಾಜ್‌
ಜೈನ್‌, ರಾಜ್‌ ಪ್ರಸಾದ್‌ ಆರಿಗ, ಧನಂಜಯ ಹೆಗ್ಡೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಆಚಾರ್ಯ ಬಿ., ಯು. ಸದಾಶಿವ ಪ್ರಭು, ಟಿ. ಕೃಷ್ಣಪ್ಪ ಗೌಡ, ಪಿ.
ವಿಶ್ವನಾಥ ಪೂಜಾರಿ, ವೆಂಕಪ್ಪ ನಾಯ್ಕ, ಪಿ. ಸುಜಲಾ ಶೆಟ್ಟಿ, ಸವಿತಾ, ಕಚೇರಿ ಮೆನೇಜರ್‌ ಸತೀಶ್‌ ಪ್ರಭು, ಮತ್ತು ಸಿಬಂದಿ ವರ್ಗ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here