Home ಧಾರ್ಮಿಕ ಕಾರ್ಯಕ್ರಮ ಮಹಾರುದ್ರವಾದ ನೂರನೇ ಪ್ರತಿರುದ್ರ

ಮಹಾರುದ್ರವಾದ ನೂರನೇ ಪ್ರತಿರುದ್ರ

684
0
SHARE

ಮುಳ್ಳೇರಿಯ: ಮುಳ್ಳೇರಿಯ ಮಂಡಲಾಂತರ್ಗತ ಪಳ್ಳತ್ತಡ್ಕ ವಲಯವು ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ಆದೇಶದಂತೆ, 2014ರ ಜ. 23ರ ಶಿವರಾತ್ರಿಯಂದು ಪ್ರಾರಂಭವಾಗಿ, ಎಲ್ಲ ಪ್ರದೋಷ ಕಾಲದಲ್ಲಿ ಪ್ರತಿರುದ್ರ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸೋಮವಾರ ಸೋಮಪ್ರದೋಷದ ಸಂದರ್ಭದಲ್ಲಿ ಪಳ್ಳತ್ತಡ್ಕ ಮುದ್ದು ಮಂದಿರದಲ್ಲಿ ಐತಿಹಾಸಿಕ ನೂರನೇ ಪ್ರತಿರುದ್ರವು, ಭಜನ ರಾಮಾಯಣ, ಶಿವಪೂಜೆ ಮತ್ತು ಗೋಪೂಜೆಯೊಂದಿಗೆ ನೆರವೇರಿತು. ಮುಳ್ಳೇರಿಯ ಹವ್ಯಕ ಮಂಡಲದ ವಿವಿಧ ವಲಯಗಳಿಂದ 138 ಕ್ಕೂ ಹೆಚ್ಚು ಮಂದಿ ರುದ್ರಾಧ್ಯಾಯಿಗಳು ಭಾಗವಹಿಸಿ, ನೂರನೇ ಪ್ರತಿರುದ್ರವು ಮಹಾರುದ್ರವಾಗಿ ಸಂಪನ್ನಗೊಳ್ಳುವಂತೆ ಮಾಡಿದರು.

‘ಪ್ರತಿರುದ್ರವೆಂಬ ನಮ್ಮ ಸಂಕಲ್ಪವು ಎಲ್ಲರ ಸಹಕಾರದಿಂದ ಮಹಾರುದ್ರವಾಗಿ ಪರಿಣಮಿಸಿದೆ. ಸಂಕಲ್ಪ ಶಕ್ತಿಯೊಂದು ದೃಢವಾಗಿದ್ದರೆ ಕಾರ್ಯಸಿದ್ಧಿಯಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ. ಇದು ನಮಗೆ ಬಹಳ ತೃಪ್ತಿದಾಯಕವಾಗಿ ಪರಿಣಮಿಸಿದೆ ‘ ಎಂಬುದಾಗಿ ಹಿರಿಯ ವಿದ್ವಾಂಸರಾದ ವೇ| ಮೂ| ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಶ್ರೀ ಸಂಸ್ಥಾನದವರು ಧ್ವನಿಮುದ್ರಿತ ಆಶೀರ್ವಚನದ ಮೂಲಕ ನೆರೆದ ಭಕ್ತರನ್ನು ಆಶೀರ್ವಚಿಸಿದರು. ಮಹಾ ಮಂಡಲಾಧ್ಯಕ್ಷೆ ಈಶ್ವರೀ ಬೇರ್ಕಡವು, ಮಂಡಲಾಧ್ಯಕ್ಷ ಪ್ರೊ| ಶ್ರೀಕೃಷ್ಣ ಭಟ್‌, ಮಂಡಲ ಕಾರ್ಯ ದರ್ಶಿ ಬಾಲಸುಬ್ರಹ್ಮಣ್ಯಭಟ್‌ ಸರ್ಪಮಲೆ, ಮಂಡಲ ಗುರಿಕಾರರಾದ ಮೊಗ್ರ ಸತ್ಯನಾರಾಯಣ ಭಟ್‌, ಮಹಾಮಂಡಲ ಉಲ್ಲೇಖ ಪ್ರಧಾನ ಗೋವಿಂದಬಳ್ಳಮೂಲೆ, ಮಂಡಲ ಉಪಾಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಪೈಸಾರಿ, ವಲಯಾಧ್ಯಕ್ಷ ರಾಮಕೃಷ್ಣ ಭಟ್‌ ಕೋರಿಕ್ಕಾರು ಸಾಂದರ್ಭಿಕ ನುಡಿಗಳನ್ನಾಡಿದರು.

ಮಕ್ಕಳಿಗೆ ಮತ್ತು ವಯಸ್ಕರಿಗೆ ಉಚಿತವಾಗಿ ವೇದ ಶಿಕ್ಷಣವನ್ನು ನೀಡುತ್ತಿರುವ ವೇ| ಮೂ| ಪಳ್ಳತ್ತಡ್ಕ ಪರಮೇಶ್ವರ ಭಟ್‌ ಹಾಗೂ ಪ್ರತಿರುದ್ರವು ನಿರಂತರವಾಗಿ ಸಾಗಲು ಶ್ರಮಿಸಿದ ವಿಷ್ಣು ಶರ್ಮ ಕೋರಿಕ್ಕಾರು ಇವರನ್ನು ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.

ನೂರನೇ ಪ್ರತಿರುದ್ರದಲ್ಲಿ ವಿಶೇಷವಾಗಿ, ವೃತ್ತಿನಿರತ ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ರುದ್ರ ಪಠಣದಲ್ಲಿ ಸಹಕರಿಸಿದ ಬಾಂಧವರನ್ನು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಮಾತೆಯರು ತಯಾರಿಸಿದ ಪರಂಪರಾಗತ ಆರೋಗ್ಯದಾಯಕ ರುಚಿಕರ ಭೋಜನವು ನೆರೆದ ಭಕ್ತ ಜನರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ಸ್ವಾಗತಿಸಿ, ವಲಯ ಉಲ್ಲೇಖ ಪ್ರಧಾನ ಚಂದ್ರಶೇಖರ ಭಟ್‌ ಪಳ್ಳತ್ತಡ್ಕ ನಿರೂಪಿಸಿದರು.

LEAVE A REPLY

Please enter your comment!
Please enter your name here