Home ಧಾರ್ಮಿಕ ಸುದ್ದಿ ಮಹಾಮೂಡುಗಣಪತಿ, ಮನೆಯಕ್ಕಿ ಸಮಾರಾಧನೆ

ಮಹಾಮೂಡುಗಣಪತಿ, ಮನೆಯಕ್ಕಿ ಸಮಾರಾಧನೆ

101
0
SHARE

ಕೋಟ: ಸಾಲಿಗ್ರಾಮ ಗುರುನರಸಿಂಹ ದೇಗುಲಕ್ಕೆ ಸಂಬಂಧಿಸಿದ ಕೋಟ ಹದಿನಾಲ್ಕು ಗ್ರಾಮಗಳ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ ಸಂಗ್ರಹಿಸಿದ ಅಕ್ಕಿ, ಕಾಯಿ ಮುಂತಾದ ಸಾಮಗ್ರಿಗಳಿಂದ ನ.23ರಂದು ಮಹಾಮೂಡುಗಣಪತಿ ಹಾಗೂ ಮನೆಯಕ್ಕಿ ಸಮಾರಾಧನೆ ಜರಗಿತು. ಈ ಪ್ರಯುಕ್ತ ಸಂಹಿತಾಭಿಷೇಕ, ಪರಿವಾರ ದೇವರುಗಳಿಗೆ ಸೇವೆ, ಅನ್ನಸಂತರ್ಪಣೆ ಅನ್ನಪ್ರಸಾದ ವಿತರಣೆ ನೆರವೇರಿತು.

ದೇಗುಲದಲ್ಲಿ ಅನಾದಿಕಾಲದಿಂದಲೂ ವೃಶ್ಚಿಕಮಾಸದ ಹುಣ್ಣಿಮೆಯಂದು ಈ ಸೇವೆ ನಡೆದುಕೊಂಡು ಬಂದಿದೆ. ಕಾರ್ಯಕ್ರಮದ ಯಶಸ್ವಿಗೆ ಸಹಕರಿ ಸಿದ 29ಮಂದಿ ಗ್ರಾಮಮೋಕ್ತೇಸರರು, ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸದಸ್ಯರು, ಕೂಟ ಮಹಾಜಗತ್ತಿನ ಎಲ್ಲಾ ಅಂಗಸಂಸ್ಥೆಯ ಸದಸ್ಯರುಗಳು, ಊರ ಪರಊರ ಭಕ್ತಾದಿಗಳು ಮತ್ತು ಗ್ರಾಮಸ್ಥರಿಗೆ ಆಡಳಿತ ಮಂಡಳಿ ಅಧ್ಯಕ್ಷ ಆನಂತಪದ್ಮನಾಭ ಐತಾಳ ವಂದಿಸಿದರು.

LEAVE A REPLY

Please enter your comment!
Please enter your name here