Home ಧಾರ್ಮಿಕ ಸುದ್ದಿ ಅಷ್ಟ ದಿಕ್ಕುಗಳಿಗೆ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ವಿಶೇಷ

ಅಷ್ಟ ದಿಕ್ಕುಗಳಿಗೆ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ವಿಶೇಷ

291
0
SHARE

ನಗರ : ಪುತ್ತೂರು ಸೀಮೆಯ ಒಡೆಯ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ಜಾತ್ರೆ ಪೂರ್ವ ಶಿಷ್ಟ ಸಂಪ್ರದಾಯ ಹಾಗೂ ಹಲವು ವಿಶೇಷಗಳೊಂದಿಗೆ ನಡೆಯುತ್ತದೆ. ಇದರಲ್ಲಿ ದೇವರ ಪೇಟೆ ಸವಾರಿಯೂ ಭಕ್ತರ ಪಾಲಿಗೆ ಸಂಭ್ರಮದ ಕ್ಷಣ.

ಮಹಾಲಿಂಗೇಶ್ವರ ದೇವರ 10 ದಿನಗಳ ವಾರ್ಷಿಕ ಜಾತ್ರೆಯ ಸಂದರ್ಭ ದೇವರು ದಶ ದಿಕ್ಕುಗಳಿಗೆ ಪೇಟೆ ಸವಾರಿ ಉತ್ಸವದಲ್ಲಿ ತೆರಳಿ ಭಕ್ತರ ಕಟ್ಟೆ ಪೂಜೆ ಸೇವೆಯನ್ನು ಸ್ವೀಕರಿಸುವುದು ಮತ್ತು ವರ್ಷ ಕಳೆದಂತೆ ಕಟ್ಟೆಪೂಜೆ ಸೇವೆಗಳು ಹೆಚ್ಚುತ್ತಿರುವುದು ಹಾಗೂ ವಿಜ್ರಂಭಣೆಯಿಂದ ನಡೆಯುತ್ತಿರುವುದು ಪುತ್ತೂರು ಜಾತ್ರೆಯ ವಿಶೇಷತೆಗಳಲ್ಲಿ ಒಂದು.

ಪುತ್ತೂರಿನಲ್ಲಿ ಮಾತ 10 ದಿನಗಳ ಕಾಲ ಪೇಟೆ ಸವಾರಿ ನಡೆಯುವ ಜಾತ್ರೆ ಪುತ್ತೂರಿನಲ್ಲಿ ಮಾತ್ರವಾಗಿದ್ದು, ದ.ಕ. ಜಿಲ್ಲೆಯ ಮಟ್ಟಿಗೆ ಇದು ಧಾರ್ಮಿಕ ಚರಿತ್ರೆ. ದಶ ದಿಕ್ಕುಗಳ ಭಕ್ತರು, ನೆಂಟರಿಷ್ಟರು ದೇವರ ಪೇಟೆ ಸವಾರಿಯನ್ನು ತಮ್ಮ ಮನೆ, ಅಂಗಡಿಗಳನ್ನು ಸಿಂಗರಿಸಿ ದೇವರನ್ನು ಸ್ವಾಗತಿಸಿ ಕಣ್ತುಂಬಿಕೊಳ್ಳುತ್ತಾರೆ. ದೇವರಿಗೆ ಹೂ, ಹಣ್ಣುಕಾಯಿ, ಅಷ್ಟದ್ರವ್ಯಗಳನ್ನು ಸಮರ್ಪಿಸಿ ಪುನೀತರಾಗುತ್ತಾರೆ.

LEAVE A REPLY

Please enter your comment!
Please enter your name here