ಮಲ್ಪೆ : ಇಲ್ಲಿನ ವಡಭಾಂಡೇಶ್ವರ ಕಡಲತೀರದಲ್ಲಿ ಮಹಾಲಯ ಅವವಾಸ್ಯೆ ಪ್ರಯುಕ್ತ ಮಂಗಳವಾರ ಊರ ಪರವೂರ ಭಕ್ತರಿಂದ ಗತಿಸಿದ ಹಿರಿಯರಿಗೆ ತರ್ಪಣ ನೀಡುವ
ಕಾರ್ಯ ನಡೆಯಿತು.
ಪಿತೃಪಕ್ಷದ ಕೊನೆಯ ದಿನವಾದ ಮಹಾಲಯ ಅಮವಾಸ್ಯೆಯಂದು ನೂರಾರು ಭಕ್ತರು ತಿಲತರ್ಪಣ, ಪಿಂಡಪ್ರದಾನ, ತಿಲಹೋಮ ಕರ್ಮಗಳನ್ನು ನಡೆಸಿ ಹಿರಿಯರನ್ನು ಸ್ಮರಿಸಿ ಕೊಳ್ಳಲಾಯಿತು. ಬಳಿಕ ಸಮುದ್ರ ಸ್ನಾನಗೈದು ಬಲರಾಮ ದೇವರ ದರ್ಶನವನ್ನು ಪಡೆದರು.
ಸೋಮವಾರ ಸರಕಾರಿ ರಜೆಯ ಇದ್ದರೂ ಬೆಳಗ್ಗೆ 10ರ ನಂತರ ಅಮವಾಸ್ಯೆಯಾದ್ದರಿಂದ ಕೆಲವೇ ಜನ ಮಾತ್ರ ಪಿಂಡ ಪ್ರದಾನ ಮಾಡಿದ್ದು ಕಂಡು ಬಂದಿದ್ದು ಮಂಗಳವಾರ ಬೆಳಗ್ಗೆ
ಹೆಚ್ಚಿನ ಭಕ್ತಾದಿಗಳು ಅಗಮಿಸಿದ್ದರು.