Home ಧಾರ್ಮಿಕ ಸುದ್ದಿ ಮಹಾಲಕ್ಷ್ಮೀ ದೇಗುಲ ಸಂದರ್ಶನ ಚಾರಿತ್ರಿಕ ಘಟನೆ

ಮಹಾಲಕ್ಷ್ಮೀ ದೇಗುಲ ಸಂದರ್ಶನ ಚಾರಿತ್ರಿಕ ಘಟನೆ

ಶ್ರೀ ಶಿವಾನಂದ ಸರಸ್ವತೀ ಗೌಡಪಾದಾಚಾರ್ಯ

1304
0
SHARE

ಉಡುಪಿ : ರಾಜಾಪುರದ ಅಡಿವರೆಯ ಶ್ರೀ ಮಹಾಕಾಲೀ ಸಂಸ್ಥಾನದಲ್ಲಿ ನೆಲೆನಿಂತ ಶ್ರೀ ಮಹಾ ಲಕ್ಷ್ಮೀ ದೇವಿಯ ಸಂಪರ್ಕ ಕಡಿದು ಹೋಗಿರುವ ಜಿಎಸ್‌ಬಿ ಕುಲಾವಿ ವೃಂದವನ್ನು ಪುನರಪಿ ಕರೆಯಿಸಿ ಕೊಳ್ಳುವಲ್ಲಿ ನಡೆದ ಅಪೂರ್ವ ಘಟನೆ ಚಾರಿತ್ರಿಕ ಎಂದು ಗೋವಾ ಕವಳೆ ಮಠದ ಶ್ರೀಮತ್‌ ಶ್ರೀ ಶಿವಾನಂದ ಸರಸ್ವತೀ ಗೌಡಪಾದಾಚಾರ್ಯ ಸ್ವಾಮೀ ಮಹಾರಾಜರು ನುಡಿದರು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ರಾಜಾ ಪುರದ ಅಡಿವರೆ ಗ್ರಾಮದ ಶ್ರೀ ಮಹಾ ಕಾಲೀ ಸಂಸ್ಥಾನ ದೇಗುಲ ಸಂಕೀರ್ಣ ದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಿಯ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಕಳೆದ ನಾಲ್ಕೈದು ಶತಮಾನಗಳಿಂದ ಕುಲಾವಿಗಳ ವಿಸ್ಮತಿಯ ಕಾರಣ ಮರೆತು- ಕಳೆದುಹೋಗಿದ್ದ ಸಂಪರ್ಕ ಸಂಬಂಧ ಪುನರಪಿ ನಡೆಯುತ್ತಿರುವುದು ದೇವಿಯ ಮಹಿಮೆಯನ್ನು ಸಾರುತ್ತದೆ. ಸಮಾಜದ ಆದಿ ಆರಾಧನೆಯು ಶಾಕ್ತೇಯವಾಗಿದ್ದು ಶ್ರೀ ಮಹಾಲಕ್ಷ್ಮೀಯನ್ನು ಕುಲದೇವಿ ಯಾಗಿ ಆರಾಧಿಸುತ್ತಿದ್ದ ಪರಂಪರೆ. ಕುಲಾವಿಗಳು ಸಮಾಜದ ಇಲ್ಲಿರುವ ಬಾಂಧವರ ಸಹಕಾರದಿಂದ ದರ್ಶನಾಕಾಂಕ್ಷಿಗಳಾಗಿ ನೀಡಿರುವ ಭೇಟಿ ಫ‌ಲ ಪ್ರದ. ಇದು ಸಮಾಜಕ್ಕೆ ಕಲ್ಯಾಣ ಉಂಟು ಮಾಡಲಿದೆ ಎಂದ ಅವರು ಉಡುಪಿ ಪರಿಸರದಲ್ಲಿ ಶ್ರೀ ಮಠದ ಶಾಖೆ, ದೇಗುಲ, ವೈದಿಕ ಪಾಠಶಾಲೆ ನಿರ್ಮಿತಿಗೆ ಮಾರ್ಗದರ್ಶನ ನೀಡಿದರು.

ಧರ್ಮ ರಕ್ಷಣೆ ಮತ್ತು ಪಾಲನೆಗಾಗಿ ಗೌಡ ಸಾರಸ್ವತ ಬ್ರಾಹ್ಮಣರು ಬೇರೆ ಬೇರೆ ಊರುಗಳಿಗೆ ಸ್ಥಳಾಂತರ ವಾದ ಚರಿತ್ರೆ ಹೊಂದಿ¨ªಾರೆ. ಆ ಹಿರಿಯರ ಉದ್ದೇಶ ಹಾಗೂ ಸಂಕಲ್ಪ ಮುಂದಕ್ಕೆ ಮೈಗೂಡಿಸಿ ಬೆಳೆಸಿಕೊಂಡರೆ ಮಾತ್ರ ಸಮಾಜದ ಅಸ್ತಿತ್ವವನ್ನು ಉಳಿಸಬಹುದು. ಈ ನೆಲೆಯಲ್ಲಿ ಶ್ರೀ ಮಹಾಲಕ್ಷ್ಮೀ, ಶ್ರೀ ರವಳನಾಥ ದೇವರ ಆರಾಧನೆ ವ್ಯವಸ್ಥಿತವಾಗಿ ನಡೆಯಬೇಕು. ಗುರು ಪ್ರೇರಣೆ, ಶ್ರೀ ದೇವಿಯ ಆಶಯದಂತೆ ಕಳೆದ ಐದಾರು ವರ್ಷಗಳಿಂದ ನಡೆದ ಅವಿರತ ಪ್ರಯತ್ನದ ಮೂಲಕ ಮಹಾ ಲಕ್ಷ್ಮೀ ಶೋಧನೆ ನಡೆದಿದೆ ಎಂದರು.

ಸಚ್ಚಿದಾನಂದ ವಿ. ನಾಯಕ್‌ ಬೆಲ್ಪತ್ರೆ ಮಾತನಾಡಿ, ಜಿಎಸ್‌ಬಿ ಕುಲಾವಿಗಳಿಗೆ ಸನ್ನಿಧಾನದ ಅನುಗ್ರಹ ಸಿಗಬೇಕಾದರೆ ಮೂಲಮಠ ಶ್ರೀ ಗೌಡ ಪಾದಾಚಾರ್ಯ ಸಂಸ್ಥಾನದ ಗುರು ವರ್ಯರ ಅನುಗ್ರಹದಿಂದ ನಡೆಯಬೇಕೆಂಬ ನಿರ್ಧಾರಕ್ಕೆ ಬರಲಾಗಿದ್ದು, ಆ ಅದೃಷ್ಟ ಕೈಗೂಡಿದೆ ಎಂದರು.

ಎಂ. ಗೋಕುಲದಾಸ ನಾಯಕ್‌ ನೇತೃತ್ವದ ಕಾರ್ಯಕ್ರಮದಲ್ಲಿ ಉಡುಪಿ, ದ.ಕ., ವಿಶ್ವದಾದ್ಯಂತ ಹರಡಿದ ಕುಲಾವಿಗಳು, ಭಾಲಾವಲಿ ರಾಜಾಪುರ ರತ್ನಗಿರಿಯ ಗೌಡ ಸಾರಸ್ವತ ಬ್ರಾಹ್ಮಣ ಕುಲಾವಿಗಳು ಉಪಸ್ಥಿತರಿದ್ದರು.

1893ರಲ್ಲಿ ಎಣ್ಣೆಹೊಳೆ ಕರಾರಿನಲ್ಲಿ ಸಮಾಜದ ಕುಲದೇವಿ  ಮಹಾಲಕ್ಷ್ಮೀ ದೇಗುಲದ ಸ್ಥಾಪನೆ ವಿಚಾರದ ಸ್ಪಷ್ಟನೆ ಸಿಗುತ್ತದೆ. 2016ರಲ್ಲಿ ಬಂಟಕಲ್ಲು ಕ್ಷೇತ್ರದ ಜೀರ್ಣೋದ್ಧಾರಕ್ಕೆ ನಡೆಸಿದ ಅಷ್ಟ ಮಂಗಳ ಪ್ರಶ್ನೆಯಲ್ಲೂ ಮಹಾಲಕ್ಷ್ಮೀ ದೇವಿ ಮೂಲ ಸಂಕಲ್ಪ ವಾಗಿತ್ತು. ಹಾಗಾಗಿ ಅದನ್ನೇ ಮುಂದುವರಿಸಿ ನಿರ್ಮಾಣ ಕಾರ್ಯ ನಡೆಯಬೇಕೆನ್ನುವುದು ಕಂಡು ಬಂದಿರುವುದರಿಂದ ಸಮಾಜಕ್ಕೆ ಅನಾದಿ ಕಾಲದಿಂದಲೂ ಶ್ರೀ ಮಹಾಲಕ್ಷ್ಮೀಯೇ ಕುಲದೇವಿ ಆಗಿರುವುದು ಸ್ಪಷ್ಟ.

LEAVE A REPLY

Please enter your comment!
Please enter your name here