Home ಧಾರ್ಮಿಕ ಸುದ್ದಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಜೀರ್ಣೋದ್ಧಾರ ಸಮಿತಿ ಸಭೆ

ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಜೀರ್ಣೋದ್ಧಾರ ಸಮಿತಿ ಸಭೆ

555
0
SHARE
ಜೀರ್ಣೋದ್ಧಾರ ಸಮಿತಿ ಸಭೆ ನಡೆಯಿತು.

ನಗರ : ಶ್ರೀ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಭೆ ನಡೆಯಿತು. ಕ್ಷೇತ್ರದ ಧರ್ಮದರ್ಶಿ ಎನ್‌. ಐತ್ತಪ್ಪ ಸಪಲ್ಯರ ಉಪಸ್ಥಿತಿಯಲ್ಲಿ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ನೆಲ್ಲಿಕಟ್ಟೆ, ಕಾರ್ಯಾಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ, ಪ್ರ. ಕಾರ್ಯದರ್ಶಿ ಕೃಷ್ಣ ಪ್ರಸಾದ್‌ ಬೆಟ್ಟ, ಉಪಾಧ್ಯಕ್ಷ ಲೋಕೇಶ್‌ ಹೆಗ್ಡೆ, ಜತೆ ಕಾರ್ಯದರ್ಶಿ ಇಂದುಶೇಖರ್‌, ಪ್ರಭಾ ಆಚಾರ್ಯ ಹಾಗೂ ಹರಿಪ್ರಸಾದ್‌ ನೆಲ್ಲಿಕಟ್ಟೆ, ಕೋಶಾಧಿಕಾರಿ ಸಂಜೀವ ನಾಯಕ್‌ ಹಾಗೂ ಸುರೇಶ್‌ ಗೌಡ, ಗೌರವ ಸಲಹೆಗಾರರು, ಕಾರ್ಯಸಮಿತಿ ಸದಸ್ಯರು ಮತ್ತು ಆರ್ಥಿಕ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಜೀರ್ಣೋದ್ಧಾರದ ಆರ್ಥಿಕ ಮೂಲ ಸಂಗ್ರಹಣೆಯ ರೂಪು-ರೇಷೆಗಳ ಕುರಿತು ಚರ್ಚೆ ನಡೆಸಲಾಯಿತು. ಇದುವರೆಗೆ ಸಂಗ್ರಹವಾದ ಮೊತ್ತದ ಕುರಿತು ವರದಿ ಮಂಡಿಸಲಾಯಿತು. ಸಮಿತಿಯ ಜನಾರ್ದನ ಬೆಟ್ಟ ಸ್ವಾಗತಿಸಿದರು. ಇಂದುಶೇಖರ್‌ ವಂದಿಸಿದರು. ಆರ್ಥಿಕ ಸದಸ್ಯರಾದ ಲಕ್ಷ್ಮೀಪ್ರಸಾದ್‌ ಬೆಟ್ಟ, ರಾಜೀವ ಸುವರ್ಣ, ಪಿ.ಕೆ. ಗಣೇಶ್‌, ಸುಂದರ ಪೂಜಾರಿ ಬಡವು, ಮೋನಪ್ಪ ಸಪಲ್ಯ, ಜನಾರ್ದನ್‌ ರಾವ್‌, ಮಹಾಲಿಂಗ ನಾಯ್ಕ, ದೇವಾನಂದ ಎಸ್‌., ವೆಂಕಟಕೃಷ್ಣ, ಅನಸೂಯಾ, ತಿಮ್ಮಪ್ಪ, ತನಿಯಪ್ಪ, ಧನಂಜಯ, ಅಂತಪ್ಪ ಸಪಲ್ಯ, ಮೋನಪ್ಪ ಸಪಲ್ಯ ನಗರ, ಬಾಬು ಗೌಡ, ಪೂವಪ್ಪ ಚಿಕ್ಕ ಪುತ್ತೂರು, ರಮೇಶ್‌ ಪಡಿಲ್‌, ಹೇಮಾವತಿ, ರಾಜೇಶ್‌ ನಾಯಕ್‌, ದಿನೇಶ್‌ ಸಾಲ್ಯಾನ್‌ ಬನ್ನೂರು, ವಸಂತ ಕೇಶವ, ನವೀನ್‌ ಕೊಯ್ಲ, ಕೇಶವ ಅಳಕೆಮಜಲು, ವಿಶ್ವನಾಥ ಕಬಕ, ವಿಜಯ ಕೊಪ್ಪಳ, ಮೀನಾಕ್ಷಿ, ಅನಿಲ್‌ ಕುಮಾರ್‌, ಅಶೋಕ್‌ ಬಾಂಬಿಲ, ಭವಾನಿ ಬಂಟ್ವಾಳ, ಗಿರಿಜಾ, ಹರೀಶ್‌ ಅಲಿಮಾರ್‌, ಮೋಹನ್‌ ನೆಹರೂ ನಗರ, ಸುಭಾಷ್‌ ಚಂದ್ರ, ಕೇಶವ ನಾಯಕ್‌, ಜಗದೀಶ್‌ ಬಂಟ್ವಾಳ, ಶಾಂತಪ್ಪ, ಹೇಮಲತಾ, ವನಿತಾ, ವಿನೋದ್‌, ಅಕ್ಷತಾ ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here