Home ಧಾರ್ಮಿಕ ಸುದ್ದಿ ಮಹಾದೇವನ ಜಳಕದ ಸವಾರಿ

ಮಹಾದೇವನ ಜಳಕದ ಸವಾರಿ

1930
0
SHARE

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಅಂಗವಾಗಿ ಗುರುವಾರ ಸಂಜೆ ಶ್ರೀ ದೇವರ ಅವಭೃಥ ಸವಾರಿ 13 ಕಿ.ಮೀ. ದೂರವಿರುವ ವೀರಮಂಗಲ ಕುಮಾರಧಾರಾ ನದಿ ತಟಕ್ಕೆ ನಗರದ ಮೂಲಕ ವಿವಿಧ ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾ ತೆರಳಿತು. ದಾರಿಯುದ್ದಕ್ಕೂ ಶ್ರೀ ದೇವರು ಭಕ್ತರಿಂದ ಆರತಿ, ಹಣ್ಣುಕಾಯಿ ಮತ್ತು ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾ ಎ. 19ರ ಮುಂಜಾನೆ ವೀರಮಂಗಲ ನದಿ ತಟಕ್ಕೆ ತಲುಪುತ್ತಾರೆ. ಅಲ್ಲಿ ಅವಭೃಥ ಮುಗಿಸಿ ಬೆಳಗ್ಗೆ 10 ಗಂಟೆಗೆ ಶ್ರೀ ದೇವರು ದೇವಾಲಯಕ್ಕೆ ಮರಳಿ ಧ್ವಜಾವರೋಹಣ ನಡೆಯುತ್ತದೆ.

ರಥೋತ್ಸವದ ಬಳಿಕ ಎ. 17ರ ರಾತ್ರಿ ಶ್ರೀ ದೇವರ ರಥೋತ್ಸವ ನಡೆದ ಬಳಿಕ ಶ್ರೀ ದೇವರ ಬಂಗಾರ್‌ ಕಾಯರ್‌ಕಟ್ಟೆ ಸವಾರಿ ನಡೆಯಿತು. ಅಲಲ್ಲಿ ಕಾರ್ಯಕ್ರಮ
ಶ್ರೀ ದೇವರು ಅವಭೃಥಕ್ಕೆ ಹೋಗುವ ದಾರಿಯುದ್ದಕ್ಕೂ ತಳಿರು ತೋರಣ, ವಿದ್ಯುತ್‌ ದೀಪಗಳ ಅಲಂಕಾರ, ಹಣತೆಗಳ ಸಿಂಗಾರ, ಕಟ್ಟೆಗಳ ಸಿಂಗಾರ ಗಮನ ಸೆಳೆಯಿತು. ವಿವಿಧ ಕಟ್ಟೆಗಳಲ್ಲಿ ಶ್ರೀ ದೇವರಿಗೆ ಪೂಜೆಯ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗಾನ, ತಾಳಮದ್ದಳೆ, ನಾಟಕ, ಸಂಗೀತ ಕಾರ್ಯಕ್ರಮಗಳು ನಡೆದವು. ಸುಡುಮದ್ದು ಪ್ರದರ್ಶನವೂ ನಡೆಯಿತು.

ಶ್ರೀ ಉಳ್ಳಾಲ್ತಿ ದೈವಗಳನ್ನು ಬೀಳ್ಕೊಡುವ ಕಾರ್ಯ ಪೂರ್ವಶಿಷ್ಟ ಸಂಪ್ರದಾಯದಂತೆ ನಡೆದು ಅನಂತರ ಭೂತ ಬಲಿ ನಡೆದು ಶ್ರೀ ದೇವರ ಶಯನ ನಡೆಯಿತು.
ದೈವ ಭೇಟಿ ಎ. 18ರಂದು ದೇವಾಲಯದಲ್ಲಿ ಬೆಳಗ್ಗೆ ತುಲಾಭಾರ ಸೇವೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆ ಯಿತು. ಅಪರಾಹ್ನ ದೇವಾಲ ಯದ ದೈವಗಳಾದ ಹುಲಿಭೂತ, ಕಾಜು ಕುಜುಂಬ ಅಂಜ್ಞಣತ್ತಾಯ ದೈವಗಳ ಪ್ರತಿನಿಧಿ ದೈವವಾಗಿ ದೇವ ರೊಂದಿಗೆ ಹೋಗುವ ರಕ್ತೇಶ್ವರಿ ದೈವವು ದೇವರನ್ನು ರಥದ ಗದ್ದೆಯಲ್ಲಿ ಭೂತದ ಕಲ್ಲಿನ ಬಳಿಯಿಂದ ಬೀಳ್ಕೊಡುವ ಪದ್ಧತಿ ನಡೆಯಿತು. ಬಳಿಕ ಶ್ರೀ ದೇವರು ನಗರದ ರಾಜ ರಸ್ತೆಯ ಮೂಲಕ ವೀರಮಂಗಲ ಕುಮಾರ ಧಾರ ನದಿತಟಕ್ಕೆ ಅವಭೃಥ ಸ್ನಾನಕ್ಕೆ ತೆರಳಿದರು. ವಿವಿಧೆಡೆ ಕಟ್ಟೆ ಪೂಜೆ ಆರಂಭದಲ್ಲಿ ಶ್ರೀ ಲಕ್ಷ್ಮೀ ವೆಂಕಟರ ಮಣ ದೇವಾಲಯದ ಕಟ್ಟೆ ಯಿಂದ ಆರಂಭಗೊಂಡು ವೀರಮಂಗಲ ಅವಭೃಥ ಸ್ಥಳದ ನದಿ ಕಿನಾರೆ ಕಟ್ಟೆಯ ತನಕ ಸುಮಾರು 51 ಕಟ್ಟೆಗಳಲ್ಲಿ ದೇವರಿಗೆ ಪೂಜೆ ನಡೆಯಿತು. ಪ್ರತಿ ಕಟ್ಟೆಗಳ ಬಳಿಯಲ್ಲೂ ನೂರಾರು ಮಂದಿ ಭಕ್ತರು ಪಾಲ್ಗೊಂಡರು.

50 ಕಟ್ಟೆಗಳಲ್ಲಿ ಪೂಜೆಯ ಜತೆಗೆ ನಗರದಲ್ಲಿ ಹಾಗೂ ವೀರಮಂಗಲ ನದಿ ತೀರಕ್ಕೆ ತಲುಪುವ ಮೊದಲು ಕಡೆಗಳಲ್ಲಿ ಭಕ್ತಾಧಿಗಳು ಭಕ್ತಿಯಿಂದ ಶ್ರೀ ದೇವರಿಗೆ ಸಲ್ಲಿಸುವ ಆರತಿ, ಹಣ್ಣುಕಾಯಿಗಳನ್ನು ಸ್ವೀಕರಿಸಿದರು.

ಇಂದು ನೇಮ ಶ್ರೀ ದೇವರು ಬೆಳಗ್ಗೆ ವೀರಮಂಗಲ ಕುಮಾರ ಧಾರ ನದಿಯಲ್ಲಿ ಸ್ನಾನ ಮುಗಿಸಿದ ಬಳಿಕ ಪೂರ್ವಾಹ್ನ 10 ಗಂಟೆಗೆ ದೇವಾಲಯಕ್ಕೆ ಮರಳಿ ತಲುಪುತ್ತಾರೆ.
ಅನಂತರ ದೇವಾಲಯದಲ್ಲಿ ಧ್ವಜಾವ ರೋಹಣ ನಡೆಯಲಿದೆ. ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ನಡೆದು ಹುಲಿಭೂತ, ರಕ್ತೇಶ್ವರಿ ನೇಮ ಜರಗಲಿದೆ.

LEAVE A REPLY

Please enter your comment!
Please enter your name here