ಮಡಿಕೇರಿ: ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ತುಂತುರು ಮಳೆಯ ನಡುವೆ ಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಕಾವೇರಿಮತ್ತು ಭಗಂಡೇಶ್ವರನಿಗೆ ಸ್ವತಃ ಪೂಜೆ ಸಲ್ಲಿಸಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.ಈ ಸಂದರ್ಭ ಹಾಜರಿದ್ದ ಅರ್ಚಕ ವೃಂದದೊಂದಿಗೆ ಕುಶಲೋಪರಿ ನಡೆಸಿದರು.