Home ಧಾರ್ಮಿಕ ಸುದ್ದಿ ಕಾಟೋಳಪ್ಪ ದೇಗುಲದ ಪುನರ್‌ ನಿರ್ಮಾಣ ಕಾರ್ಯಕ್ಕೆ ಚಾಲನೆ ಆರಂಭ

ಕಾಟೋಳಪ್ಪ ದೇಗುಲದ ಪುನರ್‌ ನಿರ್ಮಾಣ ಕಾರ್ಯಕ್ಕೆ ಚಾಲನೆ ಆರಂಭ

15594
0
SHARE

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪುರಾತನ ಮುಕೋಡ್ಲುವಿನ ಆವಂಡಿ ಗ್ರಾಮದಲ್ಲಿ ಸುಮಾರು ಐದು ವರ್ಷಗಳ ಹಿಂದೆ ಮರಬಿದ್ದು ಹಾನಿಗೀಡಾಗಿದ್ದ ಪುರಾತನ‌ ಶ್ರೀ ಕಾಟೋಳಪ್ಪ ದೇವಾಲಯದ ಪುನರ್‌ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದ್ದು, ಇತ್ತೀಚೆಗೆ ಭೂಮಿಪೂಜೆ ನೆರವೇರಿಸಲಾಗಿದೆ.

ವಿಧಾನ ಪರಿಷತ್‌ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿ ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ಯಿತ್ತರು.

ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಳ್ಳಲಿದ್ದು, ಸರ್ಕಾರದಿಂದ ಈಗಾಗಲೇ 18 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಅನುದಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ವೀಣಾಅಚ್ಚಯ್ಯ ಅವರ ಪ್ರಯತ್ನದ ಬಗ್ಗೆ ಗ್ರಾಮದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಕಳದ ಶಿಲ್ಪಿ ಮಣಿ ಅವರು ದೇವಾಲಯದ ಶಿಲ್ಪಕಾರ್ಯವನ್ನು ಕೈಗೊಂಡಿದ್ದು, ಎಪ್ರಿಲ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ತಕ್ಕ ಮುಖ್ಯಸ್ಥರಾದ ಹಂಚೆಟ್ಟಿರ ನಯನ ಚಂಗಪ್ಪ, ತಂಬುಕುತ್ತಿರ ಪೂವಯ್ಯ, ಕಾರ್ಯದರ್ಶಿ ಟಿ.ಎಂ.0 ಅಯ್ಯಪ್ಪ ಮತ್ತಿತರ ಪ್ರಮುಖರು ಹಾಗೂ ಗ್ರಾಮಸ್ಥರು ಭೂಮಿಪೂಜೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹುತ್ತವೇ ದೇವರು
ಯಾವುದೇ ವಿಗ್ರಹಗಳಿಲ್ಲದೆ ದೊಡ್ಡ ಹುತ್ತವನ್ನಷ್ಟೇ ಹೊಂದಿರುವುದು ಶ್ರೀ àಕಾಟೋಳಪ್ಪ ದೇವಾಲಯದ ವೈಶಿಷ್ಟéವಾಗಿದೆ. ಇದನ್ನು ಸುಮಾರು 62 ಎಕರೆ ಪ್ರದೇಶದ ದೇವರಕಾಡು ಸುತ್ತುವರೆದಿದೆ.

LEAVE A REPLY

Please enter your comment!
Please enter your name here