Home ಧಾರ್ಮಿಕ ಸುದ್ದಿ ಅಯ್ಯಪ್ಪಸ್ವಾಮಿ ದೇಗುಲ: ಮಂಡಲಪೂಜೆ‌ಗಳಿಗೆ ಚಾಲನೆ

ಅಯ್ಯಪ್ಪಸ್ವಾಮಿ ದೇಗುಲ: ಮಂಡಲಪೂಜೆ‌ಗಳಿಗೆ ಚಾಲನೆ

1362
0
SHARE

ಮಡಿಕೇರಿ : ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲಪೂಜೆ ಅಂಗವಾಗಿ 3 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳಿಗೆ ಶನಿವಾರ ಚಾಲನೆ ದೊರೆಯಿತು.

ಗಣಪತಿ ಹೋಮ ನಂತರ ದೇವಾಲಯದ ಆವರಣದಲ್ಲಿ ಧ್ವಜಾರೋಹಣ ನಡೆಯಿತು. ಅರ್ಚಕರಾದ ರಾಘವೇಂದ್ರ ಭಟ್‌ ನೇತೃತ್ವದಲ್ಲಿ ಸೋಮಶೇಖರ್‌ ಭಟ್‌, ವಿಷ್ಣುಮೂರ್ತಿ ಭಟ್‌ ತಂಡ ಪೂಜಾ ವಿಧಿ ನೆರವೇರಿಸಿದರು.

ಸಂಜೆ 7 ಗಂಟೆಗೆ ಉಯ್ನಾಲೋತ್ಸವ ಕಾರ್ಯಕ್ರಮ ಜರುಗಿತು. ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷರಾದ ಬಿ.ಪಿ.ಗಣಪತಿ, ಉಪಾಧ್ಯಕ್ಷ ಮಹೇಶ್‌ ನಲ್ವಾಡೆ, ಖಜಾಂಚಿ ಮಣಿ, ಟ್ರಸ್ಟಿಗಳಾದ ಡಿ.ಆರ್‌.ಸೋಮಶೇಖರ್‌, ದೇವಾಲಯ ಸಮಿತಿ ಸದಸ್ಯರಾದ ಎಂ.ಎನ್‌.ಚಂದ್ರಮೋಹನ್‌, ಉದ್ಯಮಿ ಕೋದಂಡರಾಮ್‌ ಮತ್ತಿತರರು ಇದ್ದರು.

ಪೂಜಾ ಕಾರ್ಯಕ್ರಮ: ಮಂಡಲಪೂಜೆ ಅಂಗವಾಗಿ ಭಾನುವಾರ (15) ಬೆಳಗ್ಗೆ 8 ಗಂಟೆಗೆ ನವಗ್ರಹ ಹೋಮ, ಸಂಜೆ 7 ಗಂಟೆಗೆ ಉಯ್ನಾಲೋತ್ಸವ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ. 16 ರಂದು ಸೋಮವಾರ ಬೆಳಗ್ಗೆ 9 ಗಂಟೆಯಿಂದ ಅಯ್ಯಪ್ಪಸ್ವಾಮಿ ಮಂಡಲಪೂಜೋತ್ಸವ ನಡೆಯಲಿದ್ದು ನಂತರ ಅಭಿಷೇಕ ಪೂಜೆ, ಕಳಸ ಪೂಜೆ, ನೈವೇದ್ಯ, ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ ಪಾಲ್‌ಕೊಂಬು ತರುವುದು, ಸಂಜೆ 6
ಗಂಟೆಗೆ ಚಂಡೆವಾದ್ಯ ಭವ್ಯ ದೀಪಾಲಂಕೃತ ಮಂಟಪದಲ್ಲಿ ಸ್ವಾಮಿ ಮೆರವಣಿಗೆ ನಡೆಯಲಿದೆ.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೇವಾಲಯಕ್ಕೆ ಹಿಂದಿರುಗಿ ಬಂದು ರಾತ್ರಿ 8 ಗಂಟೆಯ ನಂತರ ಭಜನಾ ಕಾರ್ಯಕ್ರಮ ಬೆಳಗಿನ ಜಾವ 3 ಗಂಟೆಗೆ ಅಗ್ನಿಕೊಂಡ ಪ್ರವೇಶ ಕಾರ್ಯಕ್ರಮದೊಂದಿಗೆ ಮಂಡಲಪೂಜೆಗೆ ತೆರೆ ಬೀಳಲಿದೆ.

LEAVE A REPLY

Please enter your comment!
Please enter your name here