Home ಧಾರ್ಮಿಕ ಸುದ್ದಿ ಮೆಲ್ಬರ್ನ್ ನಲ್ಲಿ ಮಧ್ವರ ವಿಗ್ರಹ ಸ್ಥಾಪನೆ

ಮೆಲ್ಬರ್ನ್ ನಲ್ಲಿ ಮಧ್ವರ ವಿಗ್ರಹ ಸ್ಥಾಪನೆ

550
0
SHARE

ಉಡುಪಿ: ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದ ಮುರುಂಬೀನಾ ಪ್ರದೇಶದಲ್ಲಿರುವ ಶ್ರೀ ವೆಂಕಟಕೃಷ್ಣ ವೃಂದಾವನ ಕ್ಷೇತ್ರದಲ್ಲಿ ಸೋಮವಾರ ಮಧ್ವನವಮಿ ಪರ್ವದಿನ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಧ್ವಾಚಾರ್ಯರ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

ವಾಯುಸ್ತುತಿಯೊಂದಿಗೆ ಮಧು ಅಭಿಷೇಕ ನಡೆಸಿದ ಶ್ರೀಪಾದರು ಸಂಸ್ಥಾನ ಪೂಜೆ ನಡೆಸಿ ಪ್ರತಿಷ್ಠಾಪನೆಗೈದರು. ಇದೇ ಸಂದರ್ಭ ಸುದರ್ಶನ ಹೋಮದಿಂದ ತಪ್ತವಾದ ಮುದ್ರೆಗಳಿಂದ ಭಕ್ತರಿಗೆ ಮುದ್ರಾಧಾರಣೆ ನಡೆಸಿದರು.

ಮಧ್ವಾಚಾರ್ಯರು ಉಡುಪಿಯಿಂದ ಭೌತಿಕ ಶರೀರದಿಂದ ನಿರ್ಗಮಿಸಿ ಏಳು ಶತಕಗಳು ಕಳೆದಿವೆ. ಇದೀಗ ಮೆಲ್ಬೋರ್ನ್ ನಗರದವರಿಗೆ ಸುವರ್ಣಾಕ್ಷರಗಳಿಂದ ಬರೆದಿಡುವ ದಿನ. ಇಂದು ಮಧ್ವರ ವಿಗ್ರಹ ಇಲ್ಲಿ ಪ್ರತಿಷ್ಠಾಪನೆಯಾಗಿದೆ ಎಂದು ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.

ಇಂದು ಜಗತ್ತು ಅತೀವ ಆಸೆಯಿಂದ ಬಳಲುತ್ತಿದೆ. ನಾವು ಈ ಜಗತ್ತಿನಿಂದ ಅತ್ಯಂತ ಕನಿಷ್ಠ ಪ್ರಯೋಜನವನ್ನು ಮಾತ್ರ ಪಡೆಯಬೇಕು. ನಾವು ಸಾಧಿಸಿದ್ದೆಲ್ಲವೂ ಭಗವಂತನಿಂದ ಎಂಬ ಅನುಸಂಧಾನದಿಂದ ನಮಗೆ ಕನಿಷ್ಠವನ್ನು ಇರಿಸಿಕೊಂಡು ಉಳಿದುದನ್ನು ಹಂಚಬೇಕು. ನಮಗೆ ಸಿಕ್ಕಿದ ಅಧಿಕಾರ ಯಾರಿಂದ ಬಂತು ಎಂಬ ಪ್ರಶ್ನೆ ಮೂಡಬೇಕು. ಭಗವಂತನಿಂದ ಬಂದ ಕಾರಣ ನಮ್ಮ ಕೃತಜ್ಞತೆ ಆತನಿಗೆ ಸಲ್ಲಬೇಕು ಎಂದು ಸ್ವಾಮೀಜಿ ಹೇಳಿದರು. ಅಮೆರಿಕ, ಮಸ್ಕತ್‌ ಮೊದಲಾದೆಡೆ ಶ್ರೀಕೃಷ್ಣನ ಸನ್ನಿಧಾನವನ್ನು ಪ್ರತಿಷ್ಠಾಪಿಸುತ್ತಿರುವ ಶ್ರೀಪಾದರು ಇದೀಗ ಆಸ್ಟ್ರೇಲಿಯಾದಲ್ಲಿಯೂ ಮಧ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ.

LEAVE A REPLY

Please enter your comment!
Please enter your name here