Home ಧಾರ್ಮಿಕ ಸುದ್ದಿ ಮಾ.19-23: ನಿಡಿಗಲ್‌ನ ಲೋಕನಾಡು ಕ್ಷೇತ್ರದ ವರ್ಷಾವಧಿ-ಸಿರಿ ಜಾತ್ರೆ

ಮಾ.19-23: ನಿಡಿಗಲ್‌ನ ಲೋಕನಾಡು ಕ್ಷೇತ್ರದ ವರ್ಷಾವಧಿ-ಸಿರಿ ಜಾತ್ರೆ

1479
0
SHARE

ಬೆಳ್ತಂಗಡಿ : ತುಳುನಾಡಿನ ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆ ಕ್ಷೇತ್ರ ನಿಡಿಗಲ್‌ನ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಮಾ. 19ರಿಂದ 23ರ ವರೆಗೆ ವರ್ಷಾವಧಿ ಜಾತ್ರೆ ಹಾಗೂ ಸಿರಿ ಜಾತ್ರಾ ಮಹೋತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮಾ. 19ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ, ಹೊರೆಕಾಣಿಕೆ, ಧ್ವಜಾರೋಹಣ, ಮಹಾಪೂಜೆ, ಶ್ರೀ ದೇವರ ಬಲಿ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 11ಕ್ಕೆ ದೇವರ
ಉತ್ಸವ, ದೀಪಾರಾಧನೆ, ಭೂತರಾಜ, ಮಹಿಷಂತಾಯ, ಮೂರ್ತಿಲ್ಲಾಯ ದೈವಗಳ ನೇಮ ನಡೆಯಲಿದೆ.

ಮಾ. 20ರಂದು ವಿವಿಧ ವೈದಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಭಜನ್‌ ಸಂಕೀರ್ತನೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ
ಕಾರ್ಯಕ್ರಮ, ರಾತ್ರಿ ಅನ್ನಸಂತರ್ಪಣೆ, ಕುಮಾರ ದರ್ಶನ, ಶ್ರೀ ದೇವರ ಉತ್ಸವ, ವಸಂತಕಟ್ಟೆ ಪೂಜೆ, ಶ್ರೀ ಅಬ್ಬಗ ದಾರಗರ ಚೆನ್ನೆಮಣೆ ಆಟ, ರಾತ್ರಿ 10ಕ್ಕೆ ಮೂಲ ಮಹಿಷಂತಾಯ, ರಕ್ತೇಶ್ವರಿ, ಪ್ರಧಾನ ದೈವ, ಸೇಮಕಲ್ಲ ಪಂಜುರ್ಲಿ, ದೈವಗಳಿಗೆ ನೇಮ, ಕುಮಾರ ಮತ್ತು ಪಂಜುರ್ಲಿ ದೈವದ ಭೇಟಿ ನಡೆಯಲಿದೆ.

ಮಾ. 21ರಂದು ಬೆಳಗ್ಗೆ 11ಕ್ಕೆ ಆಶ್ಲೇಷ ಬಲಿ- ಶ್ರೀ ನಾಗದರ್ಶನ ಸೇವೆ, ಸಂಜೆ ಭಜನ್‌ ಸಾಮ್ರಾಟ್‌, 6.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೆಟ್ನಾಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ನಾವೂರಿನ ಡಾ| ಪ್ರದೀಪ್‌ ಎ.ಅವರು ಧಾರ್ಮಿಕ ಉಪನ್ಯಾಸಗೈಯ್ಯಲಿದ್ದಾರೆ.

ಅತಿಥಿಗಳಾಗಿ ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ಕುಮಾರ್‌, ಧರ್ಮಸ್ಥಳ ಅನ್ನಪೂರ್ಣ ಛತ್ರದ ವ್ಯವಸ್ಥಾಪಕ ಜಿ. ಸುಬ್ರಹ್ಮಣ್ಯ ಪ್ರಸಾದ್‌, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಪದ್ಮನಾಭ ಕೋಟ್ಯಾನ್‌, ಕುಕ್ಕೆಶ್ರೀ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಉಜಿರೆ ಸಿ.ಎ.ಬ್ಯಾಂಕ್‌ ಅಧ್ಯಕ್ಷ ಇಚ್ಚಿಲ ಸುಂದರ ಗೌಡ, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಮುಕುಂದ ಸುವರ್ಣ ಅವರು ಭಾಗವಹಿಸಲಿದ್ದಾರೆ.

ರಾತ್ರಿ ಕುಮಾರ ದರ್ಶನ, ದೇವರ ಉತ್ಸವ, ಕಟ್ಟೆಪೂಜೆ, ವಾರ್ಷಿಕ ನಡ್ವಾಲ್‌ ಸಿರಿ ಜಾತ್ರೆ, ರಾತ್ರಿ 9ಕ್ಕೆ ಮಂಗೆ ಮಲೊಡಿc ನಾಟಕ ಪ್ರದರ್ಶನಗೊಳ್ಳಲಿದೆ.

ಮಾ. 22ರಂದು ರಾತ್ರಿ ರಂಗಪೂಜೆ, ಮಾ. 23ರಂದು ಬೆಳಗ್ಗೆ 8ಕ್ಕೆ ಕವಾಟೋದ್ಘಾಟನೆ, ಶ್ರೀ ದೇವರ ಬಲಿ, ಪಿಲಿಚಾಮುಂಡಿ ದೈವದ ನೇಮ, ಧ್ವಜಾವರೋಹಣ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here