Home ಧಾರ್ಮಿಕ ಸುದ್ದಿ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸಿ: ಜೆ.ಬಿ. ಸಲ್ಡಾನ್ಹಾ

ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸಿ: ಜೆ.ಬಿ. ಸಲ್ಡಾನ್ಹಾ

631
0
SHARE

ಉಳ್ಳಾಲ: ಪರಸ್ಪರ ಸಂಪರ್ಕ ಬೆಳಸುವ ಹಬ್ಬ ಕ್ರಿಸ್ಮಸ್‌. ಪರರ ಜತೆ, ದೇವರ ಜತೆ, ಅಂತಕರಣದ ಜತೆ ಇಂತಹ ಸಂಬಂಧದ ಬಗ್ಗೆ ಅರಿತುಕೊಂಡು ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಿ ಎಲ್ಲರನ್ನು ಸ್ವಾಗ ತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಪೆರ್ಮನ್ನೂರು ಸಂತ ಸೆಬೆಸ್ಟಿಯನ್‌ ಧರ್ಮ ಕೇಂದ್ರದ ಧರ್ಮಗುರು ಜೆ.ಬಿ. ಸಲ್ಡಾನ್ಹಾ ಕರೆ ನೀಡಿದರು.

ಅವರು ಸಂತ ಸೆಬೆಸ್ಟಿಯನ್‌ ಧರ್ಮ ಕೇಂದ್ರ ಪೆರ್ಮನ್ನೂರು ಇದರ ಆಶ್ರ ಯ ದಲ್ಲಿ ಪೊಸಕುರಲ್‌ ಬಳಗ, ಸದ್ಭಾವನಾ ವೇದಿಕೆ ಮತ್ತು ಸಾರ್ಜಂಟ್‌ ಬಿಷಪ್‌ ದೇವಾಲಯ ಬಬ್ಬುಕಟ್ಟೆ ಇವರ ಸಹಭಾಗಿತ್ವದಲ್ಲಿ ತೊಕ್ಕೊ ಟ್ಟುವಿನ ಅಂಬೇಡ್ಕರ್‌ ರಂಗಮಂದಿರದಲ್ಲಿ ಮಂಗಳವಾರ ನಡೆದ ಸೌಹಾರ್ದ ಕ್ರಿಸ್ಮಸ್‌ ಸಂಭ್ರಮದ ಅಧ್ಯಕ್ಷತೆ ವಹಿಸಿ ಆಶಿರ್ವಚನ ನೀಡಿದರು.

ಕ್ಷೇತ್ರಗಳು ವ್ಯಾಪಾರೀಕರಣ ದಂತ ವೈದ್ಯ ಮುರಲೀಮೋಹನ್‌ ಚುಂತಾರು ಮಾತ ನಾಡಿ, ಪ್ರಸಕ್ತ ಕಾಲ ಘಟ್ಟದಲ್ಲಿ ಪ್ರತಿಕ್ಷೇತ್ರಗಳಲ್ಲಿ ಜಾತೀ ಯತೆ ಬೆಳೆಯುತ್ತಿದ್ದು, ವಿಶ್ವಾಸ ಕಡಿಮೆ ಯಾಗುತ್ತಿದೆ. ಇದಕ್ಕೆ ತೆರೆ ಎಳೆಯಲು ಏಸುಕ್ರಿಸ್ತ ಇನ್ನೊಮ್ಮೆ ಹುಟ್ಟಿ ಬರಬೇಕಾಗಿದೆ. ಹಿರಿಯರಿಗೆ ಗೌರವ, ಸಂಸ್ಕಾರ ಕೊಡು ವುದನ್ನು ನಾವಿಂದು ಮರೆತಿದ್ದೇವೆ. ವೈದ್ಯ ಕೀಯ, ಶಿಕ್ಷಣ ಕ್ಷೇತ್ರಗಳು ವ್ಯಾಪಾರೀಕರಣ ಆಗುತ್ತಿದೆ ಎಂದರು.

ಪ್ರೀತಿ-ವಿಶ್ವಾಸ ಪ್ರಕೃತಿಯ ದೊಡ್ಡ ಸಂಪತ್ತು ಚೊಕ್ಕಬೆಟ್ಟು ಜುಮಾ ಮಸೀದಿ ಖತೀಬ್‌ ಅಬ್ದುಲ್‌ ಅಝೀಝ್ ದಾರಿಮಿ ಮಾತನಾಡಿ ಪ್ರೀತಿ ವಿಶ್ವಾಸ, ಸೇವೆಗೆ ಮದರ್‌ ತೆರೆಸಾ ಅಂದು ಆದರ್ಶರಾಗಿದ್ದರು. ಈಗ ಹೃದಯಂವತಿಕೆಯ ಸೇವೆ ನಮ್ಮಲ್ಲಿಲ್ಲ. ಪ್ರೀತಿ-ವಿಶ್ವಾಸ ಎನ್ನುವುದೇ ಪ್ರಕೃತಿಯ ದೊಡ್ಡ ಸಂಪತ್ತು. ನಿಜವಾದ ಸಂಪತ್ತು ಹೃದಯ ಸಂಪತ್ತು ಆಗಿದೆ ಎಂದರು.
ಪತ್ರ ಕರ್ತ ವಿದ್ಯಾದರ್‌ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಂತ ಸೆಬೆಸ್ಟಿಯನ್‌ ಧರ್ಮ ಕೇಂದ್ರ ಪಾಲನ ಸಮಿತಿಯ ಉಪಾಧ್ಯಕ್ಷ ಮೆಲ್ವಿನ್‌ಡಿ’ಸೋಜಾ ಮಾತನಾಡಿದರು.

ಈ ಸಂದರ್ಭ ಬಿಷಪ್‌ ಸಾರ್ಜಂಟ್‌ ದೇವಾಲಯದ ವಂದನೀಯ ಜಯ ಕುಮಾರ್‌ ಕೋಟ್ಯಾನ್‌, ಪೆರ್ಮನ್ನೂರು ಚರ್ಚ್‌ನ ಸಹಾಯಕ ಧರ್ಮಗುರು ಫಾದರ್‌ ಸ್ಟಾನಿ ಪಿಂಟೋ, ಫಾ| ಲೈಝಿಲ್‌ ಡಿ’ಸೋಜಾ, ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಕೃಷ್ಣ ಗಟ್ಟಿ, ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್‌ ಉಳ್ಳಾಲ್‌, ಸದಾºವನ ವೇದಿಕೆ ಅಧ್ಯಕ್ಷ ಪ್ರಸಾದ್‌ ರೈ ಕಲ್ಲಿಮಾರ್‌, ನುಸ್ರತುಲ್‌ ಮಸಾಕೀನ್‌ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ತ್ವಾಹಾ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್‌ ಕುಂಪಲ, ಜಮಾಅತೆ ಇಸ್ಲಾಮಿ ಹಿಂದ್‌ ಮಾಜಿ ಅಧ್ಯಕ್ಷ ಎ.ಎಚ್‌. ಅಬೂಬಕರ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಉಮ ರಬ್ಬ, ಸುರೇಶ್‌ ಭಟ್ನಗರ್‌, ಸುವಾಸಿನಿ ಬಬ್ಬಟುಕಟ್ಟೆ, ಕೌನ್ಸಿಲರ್‌ ವೀಣ ಶಾಂತಿ ಡಿ’ಸೋಜಾ, ಬಾಝಿಲ್‌ ಡಿ’ಸೋಜಾ ಮೊದಲಾದವರು ಉಪಸ್ಥಿತರಿದ್ದರು. ರೊನಾಲ್ಡ್‌ ಫೆರ್ನಾಂಡಿಸ್‌ ಸ್ವಾಗ ತಿಸಿದರು. ಅರುಣ್‌ ಉಳ್ಳಾಲ್‌ ಕಾರ್ಯ ಕ್ರಮವನ್ನು ನಿರೂಪಿಸಿದರು. ಲಾಯನ್‌ ಡಿ’ಸೋಜಾ ವಂದಿಸಿದರು.

LEAVE A REPLY

Please enter your comment!
Please enter your name here