Home ಧಾರ್ಮಿಕ ಸುದ್ದಿ ಭಗವಾನ್‌ ಶ್ರೀ ಅನಂತನಾಥ ಸ್ವಾಮಿ ಪುನಃಪ್ರತಿಷ್ಠೆ

ಭಗವಾನ್‌ ಶ್ರೀ ಅನಂತನಾಥ ಸ್ವಾಮಿ ಪುನಃಪ್ರತಿಷ್ಠೆ

1291
0
SHARE

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ನಲ್ಲೂರಂಗಡಿ ಯಲ್ಲಿರುವ ಭಗವಾನ್‌ 1008 ಶ್ರೀ ಅನಂತನಾಥ ಸ್ವಾಮಿ ಬಸದಿಯಲ್ಲಿ ಸೋಮವಾರ ಧಾಮ ಸಂಪ್ರೋಕ್ಷಣೆ ಮತ್ತು ಪುನಃಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಗಳು ನಡೆದವು. ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮಿಗಳ ಉಪಸ್ಥಿತಿ ಮತ್ತು ಮಾರ್ಗ ದರ್ಶನದಲ್ಲಿ ವಿವಿಧ ಜೈನ ಆಗಮೋಕ್ತ ವಿಧಿ ವಿಧಾನಗಳು ನಡೆದವು.

ಪ್ರತಿಷ್ಠಾ ಪುರೋಹಿತ ಚಂದ್ರನಾಥ ಇಂದ್ರ ಅವರ ನೇತೃತ್ವ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬ ಸ್ಥರ ಪ್ರಾಯೋಜಕತ್ವದಲ್ಲಿ ಧಾರ್ಮಿಕ ಪೂಜೆಗಳು ನಡೆದವು.ಹೇಮಾವತಿ ವಿ. ಹೆಗ್ಗಡೆ ಮತ್ತು ಶ್ರೀ ಧರ್ಮಸ್ಥಳ ಮಂಜು ನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ದಂಪತಿ ಭಾಗವಹಿಸಿದ್ದರು.

ಬೆಳಗ್ಗೆ ಅಷ್ಟದಿಕ್ಷು ಧಾಮ ಸಂಪ್ರೋ ಕ್ಷಣೆ, ಚತುಃದಿಕ್ಷು ಹೋಮ, ಶ್ರೀ ಗಂಧ ಯಂತ್ರಾರಾಧನೆ ವಿಧಾನ, ಮಂತ್ರನ್ಯಾಸ, ತಿಲಕನ್ಯಾಸ, ಗುಣಾರೋಪಣಪೂರ್ವಕ ಮಧ್ಯಾಹ್ನ 11.02ರ ಮಿಥುನ ಲಗ್ನದಲ್ಲಿ ಭಗವಾನ್‌ ಶ್ರೀ ಅನಂತನಾಥ ಸ್ವಾಮಿ ಪ್ರತಿಷ್ಠೆ, ಮತ್ತು ಮೇಗಿನ ನೆಲೆ ಭಗವಾನ್‌ಪಾರ್ಶ್ವನಾಥ ಸ್ವಾಮಿ ಪ್ರತಿಷ್ಠೆ ಮತ್ತು ಮುಖವಸ್ತ್ರ ಉದ್ಘಾಟನೆ, ಶಿಖರಾ ರೋಹಣ ನಡೆಯಿತು. ಬಲ ಬಸದಿಯಲ್ಲಿ ಚತು ರ್ವಿಂಶತಿ ತೀರ್ಥಂಕರರ ಆರಾಧನೆ, ಪಾರ್ಶ್ವನಾಥ ಸ್ವಾಮಿಗೆ 108 ಕಲಶಗಳಿಂದ ಮಹಾಭಿಷೇಕ ನಡೆಯಿತು.

ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್‌, ಬಸದಿಯ ಆಡಳಿತ ಮಂಡಳಿ ಅಧ್ಯಕ್ಷ ಭೋಜ ಕೆ. ಸಂಗಬೆಟ್ಟು ಹೊಸಮನೆ, ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜಯರಾಜ ಹೆಗ್ಡೆ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಅರ್ಕಕೀರ್ತಿ ಇಂದ್ರ, ಮೊಕ್ತೇಸರ ಪ್ರಕಾಶ್‌ ಜೈನ್‌ ಜಂಕಳ, ನ್ಯಾಯವಾದಿ ಶ್ರೇಯಾಂಸ ಕುಮಾರ್‌, ಸಹಕಾರಿ ಸಂಘಗಳ ಕಾನೂನು ಸಲಹೆಗಾರ ಅಪರಾಜಿತ ಆರಿಗ ಮತ್ತು ಅರ್ಕುಳ ಬೀಡಿನ ರತ್ನರಾಜ ಜೈನ್‌, ಸಮಿತಿ ಕಾರ್ಯದರ್ಶಿ ವಿನಯಚಂದ್ರ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಸುದರ್ಶನ ಜೈನ್‌, ಜೀರ್ಣೋದ್ಧಾರ ಸಮಿತಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here