ವಿಟ್ಲಮುಟ್ನೂರು: ಕುಳ, ವಿಟ್ಲಮುಟ್ನೂರು ಗ್ರಾಮಗಳ ವಿಷ್ಣುನಗರ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ ಮತ್ತು ಶ್ರೀ ಮಲರಾಯ- ಮೂವರ್ ದೈವಂಗಳ ದೈವಸ್ಥಾನ ಶಿಬರಿಕಲ್ಲ ಮಾಡದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ರವಿವಾರ 8.52ಕ್ಕೆ ವೇ| ಮೂ| ಕುಂಟುಕುಡೇಲು ರಘುರಾಮ ತಂತ್ರಿ ಯವರ ನೇತೃತ್ವದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ, ಶ್ರೀ ಗಣಪತಿ, ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠೆ ನೆರವೇರಿತು. ಗೋದರ್ಶನ, ಅಷ್ಟಮಂಗಲದರ್ಶನ, ಶಿಖರ ಪ್ರತಿಷ್ಠೆ ನೆರವೇರಿಸಲಾಯಿತು.
ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಕೆ.ವಿಟ್ಲ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ. ಟಿ. ವೆಂಕಟೇಶ್ವರ ಕರ್ಗಲ್ಲು ನೂಜಿ, ಯೋಗೀಶ್ ಕುಡ್ವ ಕುಂಡಡ್ಕ, ರವೀಂದ್ರ ಅಡ್ಯಂತಾಯ ಕುಳ, ಯಾಮಿನಿ ಶ್ರೀದೇವಿ ಅಮರ್ಜಿತ್ಮಲ್ಲಿ ಕುಂಡಡ್ಕ, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಮರುವಾಳ, ಕೋಶಾಧಿಕಾರಿ ಗೋವಿಂದರಾಜ್ ಪೆರುವಾಜೆ, ಸಂಘಟನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು ಉಪಸ್ಥಿತರಿದ್ದರು.