Home ಧಾರ್ಮಿಕ ಸುದ್ದಿ ಬಳಂಜ ದೇವಸ್ಥಾನದ ಜಾತ್ರೆ, ಶ್ರದಾಭಕ್ತಿಯಿಂದ ದೇವರನ್ನು ಪ್ರಾರ್ಥಿಸಿ: ಸ್ವಾಮೀಜಿ

ಬಳಂಜ ದೇವಸ್ಥಾನದ ಜಾತ್ರೆ, ಶ್ರದಾಭಕ್ತಿಯಿಂದ ದೇವರನ್ನು ಪ್ರಾರ್ಥಿಸಿ: ಸ್ವಾಮೀಜಿ

1394
0
SHARE

ಬೆಳ್ತಂಗಡಿ : ಅಹಂಕಾರ ತ್ಯಜಿಸಿ ಶ್ರದ್ಧಾ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿದಲ್ಲಿ ಆಶೀರ್ವಾದ ಸಿಗಲಿದೆ ಎಂದು ಉತ್ತರಾಖಂಡ ಗೋತೀರ್ಥ ಕಪಿಲಾಶ್ರಮ ಮಠದ ಶ್ರೀ ರಾಮಚಂದ್ರ ಸ್ವಾಮೀಜಿ ನುಡಿದರು. ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ವರ್ಷಾವಧಿ ಜಾತ್ರೆ ಕಾರ್ಯಕ್ರಮದಲ್ಲಿ ಶನಿವಾರ
ಶ್ರೀಗಳು ಆಶೀರ್ವಚನ ನೀಡಿದರು.

ದೇವಸ್ಥಾನ, ದೈವಸ್ಥಾನಕ್ಕೆ ಹೋಗುವುದರಿಂದ ಪ್ರತಿಯೊಬ್ಬರೂ ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಬಹುದು. ದೇವರು ನಮ್ಮ ಪ್ರಾರ್ಥನೆ ಮೂಲಕ ಒಲಿಯುತ್ತಾನೆ, ಅದಕ್ಕಾಗಿ ದೇವರನ್ನು ಶ್ರದ್ಧಾಭಕ್ತಿಯಿಂದ ಆರಾಧನೆ ಮಾಡಬೇಕು ಎಂದರು.

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಬೆಂಗಳೂರು ತುಳು ಕೂಟದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮಾತನಾಡಿ, ಕಾಯಿಲೆ ಬಂದಾಗ ನಾವು ವೈದ್ಯರ ಮೊರೆ ಹೋದಂತೆ, ನೋವು ಮತ್ತು ಕಷ್ಟ ಬಂದಾಗ ಮಾತ್ರ ದೇವಸ್ಥಾನಕ್ಕೆ ಹೋಗದೇ ನಿತ್ಯವೂ ದೇವಸ್ಥಾನಕ್ಕೆ ತೆರಳಿ ದೇವರ ಆರಾಧನೆ ಮಾಡುವ ಮನೋಭಾವ ನಮ್ಮಲ್ಲಿ ಬರಬೇಕು ಎಂದು ಹೇಳಿದರು.

ಮುಳಿಯ ಜುವೆಲರ್ನ ಚೇರ್ಮನ್‌ ಕೇಶವಪ್ರಸಾದ್‌ ಮುಳಿಯ ಮಾತನಾಡಿ, ನಮ್ಮ ಬದುಕನ್ನು ಆನಂದಿಸುವ ಮತ್ತು ಹೊಸ ಕನಸನ್ನು ಈಡೇರಿಸುವ ನಂಬಿಕೆಗಾಗಿ ಧಾರ್ಮಿಕ ಕಾರ್ಯಕ್ರಮ ನೆರವೇರುತ್ತದೆ

ಅದಕ್ಕಾಗಿ ಧಾರ್ಮಿಕ ಕೇಂದ್ರಗಳಿಗೆ ಹೋಗುವ ಮನೋಭಾವ ನಾವು ಬೆಳೆಸಬೇಕು ಎಂದರು. ಶ್ರೀ ಪಂಚಲಿಂಗೇಶ್ವರ ದುರ್ಗಾ ಪರಮೇಶ್ವರೀ ದೇವಸ್ಥಾನದ ಜಾತ್ರೆ ಸಮಿತಿ ಅಧ್ಯಕ್ಷ ಅಶ್ವತ್ಥ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತ್ರೆಗೆ ಊರವರ ಸಹಕಾರ ಅಗತ್ಯ ಎಂದರು. ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್‌, ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಬಿ. ಶೀತಲ್‌ ಪಡಿವಾಳ್‌ ಬಳಂಜಗುತ್ತು, ಬಳಂಜ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತೀಶ್‌ ರೈ ಬಾರªಡ್ಕ ಉಪಸ್ಥಿತರಿದ್ದರು. ಸಂತೋಷ್‌ ಪಿ. ಕೋಟ್ಯಾನ್‌ ಸ್ವಾಗತಿಸಿದರು. ಪ್ರಮೋದ್‌ ಬಿ.ಎಸ್‌. ವಂದಿಸಿದರು. ಜಗದೀಶ್‌ ಪರಾರಿ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here