ಬಂಟ್ವಾಳ : ಗಣಪತಿ ಧರ್ಮಾತೀತ ವಾಗಿ ಪೂಜಿಸಲ್ಪಡುವ ದೇವರು. ಮೈಸೂರಿನ ಇಲವಾಲದಲ್ಲಿ ಮುಸ್ಲಿಂ ಕುಟುಂಬವೊಂದು ಗಣೇಶೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿ ದ್ದನ್ನು ಕಂಡಿದ್ದೇನೆ. ರಷ್ಯಾದ ಹೊಟೇಲ್ನ ಗಲ್ಲಾಪೆಟ್ಟಿಗೆಯಲ್ಲಿ ಗಣಪತಿ ವಿಗ್ರಹವನ್ನು ನೋಡಿದ್ದೇನೆ. ಬರ್ಮಾದಲ್ಲಿ ಗಣಪತಿಯನ್ನು ಪೂಜಿಸುತ್ತಾರೆ. ಗಣಪತಿ ಸಂಪತ್ತಿನ ದೇವರು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೆ. 15ರಂದು ರಾತ್ರಿ ಜಕ್ರಿಬೆಟ್ಟು ದಾಸ ರೈ ಮೈದಾನದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚಿಸಿ, ಧಾರ್ಮಿಕ ಕಾರ್ಯ ಗಳಿಂದ ಸಮಾಜ ಸಂಘಟಿತ ಆಗುತ್ತದೆ. ನಾವು ಇಂತಹ ಧರ್ಮಕಾರ್ಯ ಮೂಲಕ ಪರಿವರ್ತನೆ ಕಾಣಬೇಕು. ಹಬ್ಬಗಳು ನಮ್ಮನ್ನು ಒಂದಾಗಿಸುತ್ತವೆ. ಜಗತ್ತಿಗೆ ಒಳಿತನ್ನು ಹೇಳುವುದೇ ಧರ್ಮ. ಅದು ಜೀವನದ ಸಂವಿಧಾನ, ಧರ್ಮ ಜಗತ್ತಿನ ಸಂವಿಧಾನ. ಮಾನವ ಅಧ್ಯಾತ್ಮದ ಕಡೆಗೆ ಹೋಗುವುದೇ ಅವನ ಜಾಗೃತಿ ಎಂದರು.
ಫಲಪ್ರದಾಯಕ
ಮನುಷ್ಯ ವಿಕೃತಿ ಯಿಂದಾಗಿ ಪ್ರಕೃತಿ ಎಲ್ಲೆ ಮೀರಿದರೆ ತಡೆಯುವ ಶಕ್ತಿ ಇಲ್ಲ. ಪ್ರಕೃತಿಯನ್ನು ಸಮತೋಲನದಲ್ಲಿ ಇಡುವಂತೆ ಗಣಪತಿಯನ್ನು ಪ್ರಾರ್ಥಿಸಬೇಕು. ಗಣಪತಿ ಮಾತ್ರ ಕ್ಷಿಪ್ರ ಫಲಪ್ರದಾಯಕ.
ಡಾ| ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ