ಉಡುಪಿ, : ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಮತ್ತು ತರುಣ ಕಲಾವೃಂದ ತಾಂಗದಗಡಿ ಇಲ್ಲಿನ
ಶ್ರೀ ಆಂಜನೇಯ ಗಣಪತಿ ದೇವರ ಪುನಃ ಪ್ರತಿಷ್ಠಾಪನಾ ಚತುರ್ಥ ವರ್ಧಂತಿ ಕಾರ್ಯಕ್ರಮ ಫೆ.23ರಂದು ಜರಗಿತು.
ಗಣೇಶ ಸರಳಾಯ ಮೂಡು ಸಗ್ರಿ ಅವರ ವೈದಿಕತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಿತು. ಸಂಸ್ಥೆಯ ಗೌರವಾಧ್ಯಕ್ಷ ಟಿ. ಕೃಷ್ಣಪ್ಪ, ಸಹ ಗೌರವಾಧ್ಯಕ್ಷ ಎ.ಅಕಲಂಕ ಪೈ, ಗೌರವ ಸಲಹೆಗಾರ ಎ.ಸದಾನಂದ ನಾಯಕ್, ಸಂಸ್ಥೆಯ ಅಧ್ಯಕ್ಷ ಮನೋಜ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷ ಪ್ರಸಾದ ಶೆಟ್ಟಿ, ಪ್ರಭಾಕರ ಎನ್., ಸಲಹೆಗಾರರಾದ ಶಿವಾನಂದ ಮೂಡಬೆಟ್ಟು, ಪಾಂಡುರಂಗ ತಾಂಗದಗಡಿ, ಆರ್ಥಿಕ ಸಲಹೆಗಾರರಾದ ಪ್ರದೀಪ್ ಜೋಗಿ, ಪ್ರಧಾನ ಕಾರ್ಯದರ್ಶಿ ಜೀವನ ಪೂಜಾರಿ ಹಾಗೂ ಸಂಸ್ಥೆಯ ಸರ್ವ ಸದಸ್ಯರು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.