Home ಧಾರ್ಮಿಕ ಸುದ್ದಿ ಕೋಡಿಂಬಾಳ ಶ್ರೀ ಅಯ್ಯಪ್ಪ ದೇವರ ಪ್ರತಿಷ್ಠೆ, ಕಲಶಾಭಿಷೇಕ

ಕೋಡಿಂಬಾಳ ಶ್ರೀ ಅಯ್ಯಪ್ಪ ದೇವರ ಪ್ರತಿಷ್ಠೆ, ಕಲಶಾಭಿಷೇಕ

257
0
SHARE
ಧಾರ್ಮಿಕ ವಿಧಿಗಳು ನೆರವೇರಿದವು.

ಕಡಬ: ಕೋಡಿಂಬಾಳ ರಾಮನಗರದ ಶ್ರೀ ಅಯ್ಯಪ್ಪ ಭಕ್ತ ಸಮಿತಿಯ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೇವರ ಪ್ರತಿಷ್ಠೆ ಹಾಗೂ ಕಲಶಾಭಿಷೇಕವು ವೇದಮೂರ್ತಿ ಪ್ರಸಾದ ಕೆದಿಲಾಯ ಬಿನ್ನಾಜೆ ಅವರ ನೇತೃತ್ವದಲ್ಲಿ ರವಿವಾರ ಜರಗಿತು.

ಶನಿವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಹೊರೆಕಾಣಿಕೆ ಸಮರ್ಪಣೆ, ಗಣಪತಿ ಹೋಮ, ಶ್ರೀ ಅಯ್ಯಪ್ಪ ದೇವರಿಗೆ ಅನುಜ್ಞಾ ಕಲಶಾಭಿಷೇಕ ನೆರವೇರಿತು. ಸಂಜೆ ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ಶ್ರೀ ಅಯ್ಯಪ್ಪ ದೇವರ ನೂತನ ಬಿಂಬ ಶುದ್ಧಿ ಮುಂತಾದ ವೈದಿಕ ವಿಧಿಗಳು ಜರಗಿದವು. ರವಿವಾರ ಬೆಳಗ್ಗೆ ಕಲಶಪೂಜೆ, ಗಣಪತಿ ಹೋಮ, ಶ್ರೀ ಅಯ್ಯಪ್ಪ ದೇವರ ಪ್ರತಿಷ್ಠೆ, ಚಾಮುಂಡಿ, ಗುಳಿಗ ಪ್ರತಿಷ್ಠೆ, ಅಶ್ಲೇಷಾ ಬಲಿ, ಕಲಶಾಭಿಷೇಕ, ತಂಬಿಲ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರಗಿತು.

ಶ್ರೀ ಅಯ್ಯಪ್ಪ ಭಕ್ತ ಸಮಿತಿಯ ಗೌರವಾಧ್ಯಕ್ಷ ಎನ್‌. ನಿಂಗಪ್ಪ, ಅಧ್ಯಕ್ಷ ವಸಂತ ಗೌಡ ಪಡೆಜ್ಜಾರು, ಕಾರ್ಯದರ್ಶಿ ವಾಸುದೇವ ಗೌಡ ಕೋಲ್ಪೆ, ಗುರುಸ್ವಾಮಿ ಸಿ.ಎ. ರವೀಂದ್ರನ್‌ ಗೋಳಿಯಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here