Home ಧಾರ್ಮಿಕ ಸುದ್ದಿ ರಥಾರೋಹಣವಾದ ಭಗವಂತನ ನೋಡಿದರೆಪುಣ್ಯ: ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ

ರಥಾರೋಹಣವಾದ ಭಗವಂತನ ನೋಡಿದರೆಪುಣ್ಯ: ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ

1429
0
SHARE

ಮಹಾನಗರ: ನಗರದ ಆರ್ಯ ಸಮಾಜ ರಸ್ತೆಯಲ್ಲಿ ಕಾರ್ಯಾಚರಿ ಸುತ್ತಿರುವ ಕೃಷ್ಣ ಪ್ರಜ್ಞಾ ಸಂಘದ (ಇಸ್ಕಾನ್‌) ಆಶ್ರಯದಲ್ಲಿ 16ನೇ ವಾರ್ಷಿಕ ಶ್ರೀ ಕೃಷ್ಣ ಬಲರಾಮ ರಥಯಾತ್ರೆ ಶನಿವಾರ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಅನಾದಿ ಕಾಲದಿಂದಲೂ ಕೃಷ್ಣ-ಬಲರಾಮನ ಯಾತ್ರೆ ಚಾಲ್ತಿಯಲ್ಲಿತ್ತು. ರಥಾ ರೋಹಣವಾದ ಭಗವಂತನನ್ನು ನೋಡಿ ದರೆ ಪುಣ್ಯಪ್ರದಾಯಕ ಎಂಬುದು ನಂಬಿಕೆ. ಇದಕ್ಕಾಗಿಯೇ ಜನ ರಥಯಾತ್ರೆ ಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನುಡಿದರು.

ಇಸ್ಕಾನ್‌ ಮತ್ತು ಅಕ್ಷಯಪಾತ್ರ ಫೌಂಡೇಶನ್‌ ಹುಬ್ಬಳ್ಳಿ ಸಂಸ್ಥೆಯ ಅಧ್ಯಕ್ಷ ರಾಜೀವ್‌ ಲೋಚನ್‌ ದಾಸ ಅವರು ಗೌರವ ಅತಿಥಿಯಾಗಿದ್ದರು. ವಿಶ್ವ ಹಿಂದೂ ಪರಿಷತ್‌ ಮುಖಂಡ ಡಾ| ಕೃಷ್ಣ ಪ್ರಸನ್ನ ಪುತ್ತೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಪ್ರದೀಪಕುಮಾರ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

ಇಸ್ಕಾನ್‌ ಮತ್ತು ಅಕ್ಷಯಪಾತ್ರ ಫೌಂಡೇಶನ್‌ ಮಂಗಳೂರು ಸಂಸ್ಥೆಯ ಅಧ್ಯಕ್ಷ ಕಾರುಣ್ಯ ಸಾಗರ್‌ ದಾಸ ಸ್ವಾಗತಿಸಿದರು. ಸನಂದನ ದಾಸ ವಂದಿಸಿದರು. ಸುಧಾಕರ ರಾವ್‌ ಪೇಜಾವರ ನಿರೂಪಿಸಿದರು.

ನಗರದ ರಥಬೀದಿ ವೆಂಕಟರಮಣ ದೇವಸ್ಥಾನ ವಠಾರದಿಂದ ಆರಂಭಗೊಂಡ ಶ್ರೀಕೃಷ್ಣ ಬಲರಾಮರ ವಿಗ್ರಹಗಳನ್ನು ಹೊತ್ತ ರಥ ಮಹಮಾಯಿ ದೇವಸ್ಥಾನ, ಕೆನರಾ ಪ್ರೌಢಶಾಲೆ, ನವಭಾರತ ವೃತ್ತ, ಕೆ.ಎಸ್‌. ರಾವ್‌ ರಸ್ತೆ, ಪಿ.ಎಂ. ರಾವ್‌ ರಸ್ತೆ, ಮಾರ್ಕೆಟ್‌ ರಸ್ತೆ, ಭವಂತಿ ರಸ್ತೆ ಮೂಲಕ ಸಾಗಿ ವೆಂಕಟರಮಣ ದೇವಸ್ಥಾನ ದಲ್ಲಿ ಸಮಾಪನಗೊಂಡಿತು. ರಥ
ಯಾತ್ರೆಯುದ್ದಕ್ಕೂ 10,000 ಪ್ರಸಾದ ಪೊಟ್ಟಣವನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here