ಮುಕ್ವೆ : ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನ. 12ರಂದು ಕಾರ್ತಿಕ ಮಾಸದ ಸಲುವಾಗಿ ಶ್ರೀ ದೇವರಿಗೆ ದೀಪಾಲಂಕೃತ ಕಾರ್ತಿಕ ಪೂಜೆ ನಡೆಯಿತು.
ದೇವಸ್ಥಾನದ ಅರ್ಚಕ ರಮೇಶ ಬೈಪಾಡಿತ್ತಾಯ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಶಿವಪ್ರಸಾದ್ ಶಾಂತಿಗೋಡು, ಲಕ್ಷ್ಮೀಶ ರಾವ್ ಪುತ್ತಿಲ ಸಹಕರಿಸಿದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್, ಸದಸ್ಯರಾದ ಸೀತಾರಾಮ ಗೌಡ ಎಂ., ಕುತ್ತಿಗದ್ದೆ ಜನಾರ್ದನ ಜೋಯಿಸ, ಗಣೇಶ ನಾಯ್ಕ, ಜಯಾನಂದ ಆಳ್ವ, ಗುಮಾಸ್ತ ಕೇಶವ ನಾಯ್ಕ, ಭಕ್ತರು ಉಪಸ್ಥಿತರಿದ್ದರು. ನ. 19, 26, ಡಿ. 3ರಂದು ಸಂಜೆ 7.30ಕ್ಕೆ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ನಡೆಯಲಿದೆ.