ಮುಡಿಪು: ಸಂತ ಜೋಸೆಫ್ ವಾಜ್ ಸಾಮಾನ್ಯ ವಿಷಯಗಳನ್ನು ಬಹಳ ಪ್ರೀತಿ ಮತ್ತು ನಿಷ್ಠೆಯಿಂದ ಮಾಡುತ್ತಿದ್ದರು. ಅವರ ಜೀವನ ನಮಗೆ ಪ್ರೇರಣೆಯಾಗಿದೆ
ಎಂದು ಮಂಗಳೂರಿದ ಬಿಷಪ್ ವಂ| ರೆ| ಡಾ| ಪೀಟರ್ ಪಾವ್ ಸಲ್ಡಾನ್ಹಾ ಅವರು ಹೇಳಿದರು.
ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದ ಎರಡನೇಯ ದಿನವಾದ ಶುಕ್ರವಾರ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ ಅವರು ಪ್ರವಚನ ನೀಡಿದರು.
ಸಂತ ಜೋಸೆಫ್ ವಾಜ್ ತಮ್ಮ ಕಾರ್ಯ ವೈಖರಿಯ ಮೂಲಕ ಯೇಸು ಕ್ರಿಸ್ತರ ಪ್ರೀತಿಗೆ ಪಾತ್ರರಾಗುವ ಮುಖಾಂತರ ಜೀವನವನ್ನು ಪಾವನ ಗೊಳಿಸಿದ್ದರು. ಹೆತ್ತವರು ತಮ್ಮ ಮಕ್ಕಳಿಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡುವಾಗ ತಮ್ಮದೇ ಆದ ರೀತಿಯಲ್ಲಿ ಪುನೀತ ರಾಗುತ್ತಾರೆ ಎಂದವರು ವಿವರಿಸಿದರು. ಸಂತ ಜೋಸೆಫ್ವಾಜ್ ವಲಯದ ಪ್ರಧಾನ ಗುರು ಮತ್ತು ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ನ ಧರ್ಮ ಗುರು ವಂ| ಜೆ.ಬಿ. ಸಲ್ಡಾನ್ಹಾ, ವಂ| ಫೆಲಿಕ್ಸ್ ನೊರೋನ್ಹಾ, ಡೀಕನ್ ಶೋನ್ ರೊಡ್ರಿಗಸ್, ಮುಡಿಪು ಚರ್ಚ್ನ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಷನ್ ಡಿ’ಸೋಜಾ, ಕಾರ್ಯದರ್ಶಿ ಮಾರ್ಸೆಲ್ ಡಿ’ಸೋಜಾ ಉಪಸ್ಥಿತರಿದ್ದರು.
ವಂ| ವಿಜಯ್ ಮಚಾದೊ ಬಲಿಪೂಜೆಯ ಕಾರ್ಯಕ್ರಮ ನಿರ್ವ ಹಿಸಿದರು. ವಂ| ಬೆಂಜಮಿನ್ ಪಿಂಟೋ ವಂದಿಸಿದರು.
ಸಮ್ಮಾನ
ಮಂಗಳೂರು ಧರ್ಮಪ್ರಾಂತದ ಬಿಷಪ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ವಂ| ರೆ| ಡಾ| ಪೀಟರ್ ಪಾವ್ಲ ಸಲ್ಡಾನ್ಹಾ ಅವರನ್ನು ಬಲಿಪೂಜೆಯ ಬಳಿಕ ಸಮ್ಮಾನಿಸಲಾಯಿತು. ನೆನಪಿನ ಕಾಣಿಕೆ ಯಾಗಿ ಅವರಿಗೆ ಕ್ಷೇತ್ರದ ನಿರ್ದೇಶಕ ವಂ| ಬೆಂಜಮಿನ್ ಪಿಂಟೋ ಅವರು ಒಂದು ಗಿಡವನ್ನು ಕೊಟ್ಟರು. ಬಿಷಪ್ ಅವರು ಈ ಗಿಡವನ್ನು ಬಿಷಪ್ ಅವರು ಪುಣ್ಯ ಕ್ಷೇತ್ರದ ಮುಂಭಾಗದಲ್ಲಿ ನೆಟ್ಟರು.