Home ಧಾರ್ಮಿಕ ಸುದ್ದಿ “ದೇವರ -ಸಮಾಜ ಸೇವೆಯಿಂದ ಬದುಕು ಸಾರ್ಥಕ’

“ದೇವರ -ಸಮಾಜ ಸೇವೆಯಿಂದ ಬದುಕು ಸಾರ್ಥಕ’

1436
0
SHARE

ಪುಂಜಾಲಕಟ್ಟೆ : ದೇವರ ಸೃಷ್ಟಿಯಲ್ಲಿ ಬುದ್ಧಿಮತ್ತೆಯ ವಿಭಿನ್ನತೆ ಹೊಂದಿದ ಮಾನವ ಅದನ್ನು ದೇವರ, ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿ ಸಾರ್ಥಕಗೊಳಿಸದಿದ್ದರೆ ಬದುಕು ವ್ಯರ್ಥ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದರು.

ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಆರಾಧನ ಕೇಂದ್ರಗಳು ಸದೃಢವಾಗಿದ್ದರೆ ಗ್ರಾಮದ ಅಭಿವೃದ್ಧಿ ಜತೆಗೆ ಸಾಮಾಜಿಕ ಸಾಮರಸ್ಯ ಉಂಟಾಗುತ್ತದೆ ಎಂದರು.

ಸಮಿತಿ ಉಪಾಧ್ಯಕ್ಷ, ಜಿ.ಪಂ. ಸದಸ್ಯ ಬಿ.ಪದ್ಮಶೇಖರ ಜೈನ್‌, ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಪೂಂಜ, ಸಮಿತಿ ಉಪಾಧ್ಯಕ್ಷ, ಬೆಂಗಳೂರು ಉದ್ಯಮಿ ಶಿವರಾಮ ಮಯ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಿತಿ ಪದಾಧಿಕಾರಿಗಳಾದ ಗಣಪತಿ ಮುಚ್ಚಿನ್ನಾಯ, ವೀರೇಂದ್ರ ಅಮೀನ್‌, ವೇದವ, ಗ್ರಾಮಣಿಗಳಾದ ವೆಂಕಟರಾಜ ಎಳಚಿತ್ತಾಯ, ಸದಸ್ಯರಾದ ಹೇಮಂತ ಕುಮಾರ್‌, ಸುವರ್ಣ ಕುಮಾರ್‌, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಆಚಾರ್ಯ ಬಾಳ್ತಬೈಲ್‌,
ಸದಾಶಿವ ಪ್ರಭು, ಕೃಷ್ಣಪ್ಪ ಗೌಡ ತಾಳಿತ್ತೂಟ್ಟು, ವಿಶ್ವನಾಥ ಪೂಜಾರಿ ಪೀರ್ಯ, ವೆಂಕಪ್ಪ ನಾಯ್ಕ ಕಾರಿಂಜಬೈಲ್‌, ಸುಜಲಾ ಶೆಟ್ಟಿ, ಸವಿತಾ, ವ್ಯವಸ್ಥಾಪಕ ಸತೀಶ್‌ ಪ್ರಭು, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ಪಚ್ಚಾಜೆ ಗುತ್ತು ಸ್ವಾಗತಿಸಿದರು. ಸಮಿತಿಯ ಮಾಣಿಕ್ಯರಾಜ್‌
ಜೈನ್‌ ವಂದಿಸಿದರು. ಶ್ರೀನಿಧಿ ಎಳಚಿತ್ತಾಯ ಮತ್ತು ಆದಿರಾಜ ಜೈನ್‌ ಕೊಯಿಕುಡೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here