Home ಧಾರ್ಮಿಕ ಸುದ್ದಿ “ಹಿಂದೂ ಧರ್ಮದ ಶ್ರೇಯಸಿಗೆ ಕಾರ್ಯ ಪ್ರವೃತ್ತರಾಗೋಣ’

“ಹಿಂದೂ ಧರ್ಮದ ಶ್ರೇಯಸಿಗೆ ಕಾರ್ಯ ಪ್ರವೃತ್ತರಾಗೋಣ’

1656
0
SHARE

ಬಂಟ್ವಾಳ : ಹಿಂದೂ ಸಮಾಜ ಉನ್ನತ ಮಟ್ಟದಲ್ಲಿ ಬೆಳೆಯುವ ಸಂದರ್ಭ ನಮ್ಮ ಜವಾಬ್ದಾರಿಯನ್ನು ಮರೆಯದೆ ಹಿಂದೂ ಧರ್ಮದ ಶ್ರೇಯಸ್ಸಿಗಾಗಿ, ಜಾಗೃತಿಗಾಗಿ ಕಾರ್ಯಪ್ರವೃತ್ತರಾಗೋಣ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಹೇಳಿದರು.

ಅವರು ಡಿ. 6ರಂದು ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಸ್ಥಾನದ ಮುಕ್ತಿ ಅಂದೋಲನದ ವಿಜಯೋತ್ಸವ ಅಂಗವಾಗಿ ಬಿ.ಸಿ.
ರೋಡ್‌ನ‌ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ವಠಾರದಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ಬಹುಸಂಖ್ಯಾಕ ಎಂಬ ಹೆಸರಿನಲ್ಲಿ ಹಿಂದೂ ಸಮುದಾಯವನ್ನು ದಮನ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದರ ವಿರುದ್ಧ ಹಿಂದೂ ಸಮಾಜ ಸೆಟೆದು ನಿಂತು ಹೋರಾಟ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದರು.

ವಿಟ್ಲ ತಾಲೂಕು ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಗಣರಾಜ್‌ ಭಟ್‌ ಕೆದಿಲ ದಿಕ್ಸೂಚಿ ಭಾಷಣ ಮಾಡಿ, ಹಿಂದೂಗಳ ತಾಳ್ಮೆಯನ್ನು ಪರೀಕ್ಷೆ ಮಾಡಲು ಹೊರಟರೆ ಅದರ ಪರಿಣಾಮ ಸರಿಯಾಗಿರುವುದಿಲ್ಲ ಎಂದರು.

ಬಂಟ್ವಾಳ ತಾಲೂಕು ಅಧ್ಯಕ್ಷ ಚಂದ್ರ ಕಲಾಯಿ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ಗೌರವ ಅಧ್ಯಕ್ಷ ವಿಟuಲ ಅಲ್ಲಿಪಾದೆ, ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಕಲಾಯಿ ಉಪಸ್ಥಿತರಿದ್ದರು. ಶೈಲೇಶ್‌ ಬಿ.ಸಿ. ರೋಡ್‌ ಸ್ವಾಗತಿಸಿ, ಬಾಲಕೃಷ್ಣ ಕಾಮಾಜೆ ವಂದಿಸಿದರು. ವಿಟ್ಲ ಪ್ರಖಂಡ ಅಧ್ಯಕ್ಷ ನರಸಿಂಹ ಶೆಟ್ಟಿ ಮಾಣಿ ನಿರೂಪಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here