Home ಧಾರ್ಮಿಕ ಸುದ್ದಿ ಬಪ್ಪನಾಡು ದೇವಿಗೆ ಲಕ್ಷ ಮಲ್ಲಿಗೆ ಚೆಂಡು!

ಬಪ್ಪನಾಡು ದೇವಿಗೆ ಲಕ್ಷ ಮಲ್ಲಿಗೆ ಚೆಂಡು!

1298
0
SHARE

ಬಪ್ಪನಾಡು : ಇಲ್ಲಿನ ಶ್ರೀ ದುರ್ಗಾಪಮೇಶ್ವರೀ ದೇವಸ್ಥಾನದ ಡೋಲಿನಷ್ಟೇ ಪ್ರಾಮುಖ್ಯತೆ ಹಗಲು ರಥೋತ್ಸವದ ದಿನ ರಾತ್ರಿ ನಡೆ ಯುವ ಶಯನೋತ್ಸವಕ್ಕೂ ಇದೆ. ಶಯನೋತ್ಸವ ಅಂದರೆ ದೇವರಿಗೆ ಹರಕೆ ರೂಪದಲ್ಲಿ ಮಲ್ಲಿಗೆ ಹೂ ಸಮರ್ಪಿಸುವ ಸೇವೆ. ಇದು ಒಂಬತ್ತು ಮಾಗಣೆ ವ್ಯಾಪ್ತಿಯ ದೇವಸ್ಥಾನ ವಾಗಿದ್ದರೂ 32 ಗ್ರಾಮಗಳಿಂದ ಮಾತ್ರವಲ್ಲದೆ ಕಾಸರಗೋಡು, ಉಡುಪಿ ಮತ್ತು ದ.ಕ. ಜಿಲ್ಲೆಯ ಹೆಚ್ಚಿನ ಭಕ್ತರು ದೇವರ ಶಯನಕ್ಕೆ ಮಲ್ಲಿಗೆ ಹೂ ಸಮರ್ಪಿಸುತ್ತಾರೆ.

ದಾಖಲೆ ಮಲ್ಲಿಗೆ
ಶುಕ್ರವಾರ ನಡೆದ ಬಪ್ಪನಾಡು ಶಯನೋತ್ಸವಕ್ಕೆ ಸುಮಾರು 80,000ದಿಂದ 1 ಲಕ್ಷ ಚೆಂಡುಗಳಷ್ಟು ಮಲ್ಲಿಗೆ ಅರ್ಪಿತವಾಗಿದೆ ಎಂಬುದು ವಿಶೇಷ. ಇದು ಸಾರ್ವತ್ರಿಕ ದಾಖಲೆ ಎಂಬುದು ಭಕ್ತರ ಅಭಿಪ್ರಾಯ. ಒಂದು ಚೆಂಡು ಮಲ್ಲಿಗೆ ದರ ಸುಮಾರು 70 ರಿಂದ 80 ರೂ.ಗಳಿತ್ತು.  ಸಾವಿರಗಟ್ಟಲೆ ಮಲ್ಲಿಗೆ ಚೆಂಡು ಬಂದ ಹಿನ್ನೆಲೆಯಲ್ಲಿ ದೇವಾಲಯದ ಗರ್ಭಗುಡಿಯ ಹೊರಭಾಗದ ಸುತ್ತು ಪೌಳಿಯ ಸುತ್ತ ಮಲ್ಲಿಗೆಯಲ್ಲಿ ಇಡಲಾಗಿತ್ತು. ಹೀಗಾಗಿ ದೇವಸ್ಥಾನ ಆವರಣದಲ್ಲಿ ಮಲ್ಲಿಗೆಯ ಪರಿಮಳವೇ ಮನ ತಣಿಸುವಂತಿತ್ತು.

ಹರಕೆ ರೂಪದಲ್ಲಿ ಹೂ ನೀಡಿದವರಿಗೆ ದೇವಸ್ಥಾನದ ವತಿಯಿಂದ ರಶೀದಿ ನೀಡಲಾಯಿತು. ಅದನ್ನು ಶುಕ್ರವಾರ ದೇವಸ್ಥಾನದಲ್ಲಿ ತೋರಿಸಿ, ಮಲ್ಲಿಗೆ ಪ್ರಸಾದವನ್ನು ಭಕ್ತರು ಪಡೆದುಕೊಂಡರು. ಇಲ್ಲಿ ಸ್ವೀಕರಿಸುವ ಮಲ್ಲಿಗೆ ಎಷ್ಟು ಎಂಬುದನ್ನು ನಿಖರವಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಆದರೆ, ಅಂದಾಜು ಹಾಗೂ ಪ್ರತೀ ವರ್ಷದ ಮಲ್ಲಿಗೆಯ ಆಗ ಮನದ ಹಿನ್ನೆಲೆಯಿಂದ ಲೆಕ್ಕ ಮಾಡಲಾಗುತ್ತದೆ. ಇದರಂತೆ ಸುಮಾರು ಒಂದು ಲಕ್ಷ ಚೆಂಡು ಮಲ್ಲಿಗೆ ಸಮರ್ಪಿ ತವಾಗಿರಬಹುದು ಎಂಬುದು ಸಾರ್ವತ್ರಿಕ ಅನಿಸಿಕೆ.

ಈ ಬಾರಿ ಅಧಿಕ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಶಯನೋತ್ಸವಕ್ಕೆ ಸಲ್ಲಿಕೆಯಾಗುವ ಮಲ್ಲಿಗೆ ಹೂವಿಗೆ ವಿಶೇಷ ಮಾನ್ಯತೆ ಇದೆ. ಹೀಗಾಗಿ ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಮಲ್ಲಿಗೆ ಹೂವನ್ನು ಹರಕೆಯ ರೂಪದಲ್ಲಿ ಸಲ್ಲಿಸುತ್ತಾರೆ. ಈ ಬಾರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡು ಬಂದಿದೆ.
– ಮನೋಹರ್‌ ಶೆಟ್ಟಿ, ಕ್ಷೇತ್ರದ ಮ್ಯಾನೇಜಿಂಗ್‌ ಟ್ರಸ್ಟಿ

ದೇವಾಲಯವೆಲ್ಲ ಮಲ್ಲಿಗೆಯ ಸುವಾಸನೆ..!
ಶ್ರೀ ದೇವಿಯ ಶಯನಕ್ಕೆಂದು ಭಕ್ತರು ದೇವರಿಗೆ ಅರ್ಪಿಸುವ ಮಲ್ಲಿಗೆ ಹೂವನ್ನು ಇಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ಗುರುವಾರ ಸಂಜೆಯಿಂದ ಭಕ್ತರು ಶ್ರೀ ದೇವರಿಗೆ ಮಲ್ಲಿಗೆ ಹೂ ಅರ್ಪಿಸಿದರು. ಭಾರೀ ಪ್ರಮಾಣದ ಮಲ್ಲಿಗೆ ಇದ್ದ ಹಿನ್ನೆಲೆಯಲ್ಲಿ ದೇವಾಲಯವೆಲ್ಲ ಘಮ ಘಮ ಸುವಾಸನೆಯಿಂದ ಮನ ತಣಿಸಿತು.

ಲೆಕ್ಕ ಇಲ್ಲ
ಶಯನೋತ್ಸವದಲ್ಲಿ ಈ ಬಾರಿ ಹೆಚ್ಚಿನ ಮಲ್ಲಿಗೆ ಬಂದಿದೆ. ಎಷ್ಟು ಬಂದಿದೆ ಎಂಬುದರ ಲೆಕ್ಕವಿಲ್ಲ. ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವದ ಶಯನೋತ್ಸವದ ಸಂದರ್ಭಕ್ಕಿಂತಲೂ ಅಧಿಕ ಮಲ್ಲಿಗೆ ಬಂದಿದೆ.
– ಜಯಮ್ಮಾ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ

50ಕ್ಕೂ ಅಧಿಕ ಮಾರಾಟಗಾರರು!
ಮೂಲ್ಕಿಯಿಂದ ಆರಂಭವಾಗಿ ಮುಖ್ಯದ್ವಾರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 50ಕ್ಕೂ ಮಿಕ್ಕಿ ಮಾರಾಟಗಾರರು ಗುರುವಾರ ಮಧ್ಯಾಹ್ನದಿಂದಲೇ ಮಲ್ಲಿಗೆ ಮಾರಾಟ ಮಾಡುತ್ತಿದ್ದರು. ಉಡುಪಿ, ಕಟಪಾಡಿ, ಪಡುಬಿದ್ರಿ, ಮೂಲ್ಕಿ, ಕಾರ್ನಾಡು, ಹಳೆಯಂಗಡಿ, ಸುರತ್ಕಲ್‌, ಮಂಗಳೂರಿನ ವ್ಯಾಪಾರಿಗಳು ಭಾಗವಹಿಸಿದ್ದರು.
– ವೇದವ್ಯಾಸ್‌ ,ಹೂವಿನ ಮಾರಾಟಗಾರರು

LEAVE A REPLY

Please enter your comment!
Please enter your name here