ಬೆಳ್ತಂಗಡಿ : ಲಾೖಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ವೆಂಕಟರಮಣ ಸ್ವಾಮಿ ದೇವರ ಪುನಃ ಪ್ರತಿಷ್ಠಾ ವರ್ಧಂತಿ ಹಾಗೂ ಪರಿವಾರ ದೇವರ ಪ್ರತಿಷ್ಠಾ ವರ್ಧಂತಿ ಅಂಗವಾಗಿ ದೇವರಿಗೆ ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಸಾನ್ನಿಧ್ಯ ಹೋಮ ನಡೆಯಿತು.
ಮಧ್ಯಾಹ್ನ ಮಹಾಪೂಜೆ ಬಳಿಕ ಜಿಎಸ್ಬಿ ಸಮುದಾಯದಿಂದ ಬಾಂಧವರು ದೇವರಿಗೆ ಪಟ್ಟ ಕಾಣಿಕೆ ಸಮರ್ಪಿಸಿದರು. ಸಂಜೆ ಪಲ್ಲಕ್ಕಿಯಲ್ಲಿ ವಿರಾಜಮಾನರಾದ ದೇವರ ಪೇಟೆ ಸವಾರಿ ಉತ್ಸವ, ಪ್ರಾಕಾರ ಉತ್ಸವ ಹಾಗೂ ವಸಂತ ಪೂಜೆ ಬಳಿಕ ದೇವರು ಮತ್ತು ಪರಿವಾರ ದೇವರಿಗೆ ಮಹಾ ಪೂಜೆ ಜರಗಿತು.
ದೇಗುಲದ ಆಡಳಿತ ಮೊಕ್ತೇಸರ ಮೂರ್ಜೆ ವಿವೇಕಾನಂದ ಪ್ರಭು, ಆಡಳಿತ ಮಂಡಳಿ ಸದಸ್ಯರು, ಜಿಎಸ್ಬಿ ಸಮುದಾಯದವರು ಉಪಸ್ಥಿತರಿದ್ದರು.