Home ಧಾರ್ಮಿಕ ಕಾರ್ಯಕ್ರಮ ‌ಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ಕ್ಷೇತ್ರ ವರ್ಷಾವಧಿ ರಥೋತ್ಸವ ಸಂಪನ್ನ

‌ಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ಕ್ಷೇತ್ರ ವರ್ಷಾವಧಿ ರಥೋತ್ಸವ ಸಂಪನ್ನ

228
0
SHARE

ಪುಂಜಾಲಕಟ್ಟೆ : ಬಂಟ್ವಾಳ ತಾ| ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಕ್ಷೇತ್ರದ ತಂತ್ರಿ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ನೇತೃತ್ವದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡ್ತಾಯ ಅವರ ಸಹಕಾರದಲ್ಲಿ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ಸಂಪನ್ನಗೊಂಡಿತು.

ವಿವಿಧ ಬ್ಯಾಂಡ್‌ ವಾದ್ಯಗಳು, ಚೆಂಡೆ ವಾದನ, ಕೀಲು ಕುದುರೆ, ಗೊಂಬೆ, ಸ್ತಬ್ಧ ಚಿತ್ರ, ಹುಲಿ ವೇಷಗಳೊಂದಿಗೆ ಮೆರವಣಿಗೆಯಲ್ಲಿ ಶ್ರೀ ದೇವರ ಪೇಟೆ ಸವಾರಿ ಮತ್ತು ಕಟ್ಟೆಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಬೆಳಗ್ಗೆ ಕವಾಟೋದ್ಘಾಟನೆ, ದಿವ್ಯ ದರ್ಶನ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಎಲ್‌.ಸಿ.ಆರ್‌. ಇಂಡಿಯನ್‌ ವಿದ್ಯಾಸಂಸ್ಥೆ ಕಕ್ಯಪದವು ಇವರಿಂದ ಸಾಂಸ್ಕೃತಿಕ ವೈಭವ ನಡೆಯಿತು. ಬಳಿಕ ಉತ್ಸವ, ದೈವಗಳ ನೇಮ, ಮಹಾರಥೋತ್ಸವ ನಡೆಯಿತು. ಮಧ್ಯಾಹ್ನ ಶ್ರೀ ಸತ್ಯಸಾಯಿ ಸೇವಾ ಸಮಿತಿ ಮತ್ತು ಶಿವಾಜಿ ಫ್ರೆಂಡ್ಸ್‌ ಕಕ್ಯ ವತಿಯಿಂದ ಮಜ್ಜಿಗೆ ವಿತರಣೆ ನಡೆಯಿತು.

ಜ. 19ರಂದು ಬೆಳಗ್ಗೆ ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆಯೊಂದಿಗೆ ಮಂಗಳ ನಡೆಯಿತು. ಬಳಿಕ ಕ್ಯಬೀಡು ಮೂಲ ಚಾವಡಿಗೆ ನೇಮ ಭಂಡಾರ ನಿರ್ಗಮಿಸಿತು.

ಅರಣ್ಯ ಸಚಿವ ಬಿ. ರಮಾನಾಥ ರೈ, ಪ್ರಗತಿಪರ ಕೃಷಿಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್‌, ಚಂದ್ರಪ್ರಕಾಶ್‌ ಶೆಟ್ಟಿ, ದೇವಳದ ಜೀರ್ಣೋದ್ಧಾರ ಸಮಿತಿಯ ಸ್ಥಾಪಕಾಧ್ಯಕ್ಷ ಕೆ. ಜಾರಪ್ಪ ಶೆಟ್ಟಿ ಖಂಡಿಗ, ಬಾರªಡ್‌ ಗುತ್ತಿನ ಮನೆಯ ರಾಜವೀರ ಮೂಡಬಿದಿರೆ, ಅಧ್ಯಕ್ಷ ಯು. ದಾಮೋದರ ನಾಯಕ್‌, ಪೂರ್ವಾಧ್ಯಕ್ಷ ಜಯ ಶೆಟ್ಟಿ ಕಿಂಜಾಲು, ಉಪಾಧ್ಯಕ್ಷ ಕೆ. ಮಾಯಿಲಪ್ಪ ಸಾಲಿಯಾನ್‌, ಕಾರ್ಯದರ್ಶಿ ನಾರಾಯಣ ರೈ, ಎ. ಚೆನ್ನಪ್ಪ ಸಾಲಿಯಾನ್‌, ಡಾ| ಸತ್ಯಶಂಕರ ಶೆಟ್ಟಿ, ಡಾ| ರಾಜರಾಮ ಕೆ.ಬಿ., ಬೇಬಿ ಕುಂದರ್‌, ವಾಸುದೇವ ಭಟ್‌, ನಾರಾಯಣ ಹೊಳ್ಳ, ರವಿ ಕಕ್ಯಪದವು, ಸಂಪತ್‌ ಕುಮಾರ್‌ ಶೆಟ್ಟಿ ಮುಂಡ್ರೇಲು, ದಯಾನಂದ ಶೆಟ್ಟಿ ಅಮೈ, ದೀನಾಕ್ಷಿ ಮಲ್ಯೋ ಡಿ, ರೋಹಿನಾಥ ಪಾದೆ, ಅಗ್ಪಲ ಸಂಜೀವ ಗೌಡ, ಪಿ. ರಾಮಯ್ಯ ಭಂಡಾರಿ, ಪ್ರವೀಣ್‌ ಎಲ್‌ಸಿಆರ್‌, ಜಯರಾಜ ಹೆಗ್ಡೆ ಪುತ್ತಿಲ, ನಾರಾಯಣ ಶೆಟ್ಟಿ ಮುಂಬಯಿ, ಸಂಜೀವ ಪೂಜಾರಿ ಗುರುಕೃಪಾ, ವಿನ್ಯಾಸ್‌ ಶೆಟ್ಟಿ, ಚಂದ್ರಹಾಸ ಶೆಟ್ಟಿ ರಂಗೋಲಿ, ಉತ್ಸವ ಸಮಿತಿ ಅಧ್ಯಕ್ಷ ಪಿ. ವಾಸುದೇವ ಮಯ್ಯ, ಉಪಾಧ್ಯಕ್ಷ ವಿಶ್ವನಾಥ ಸಾಲಿಯಾನ್‌ ಬಿತ್ತ, ಕಚೇರಿ ವ್ಯವಸ್ಥಾಪಕ ವೀರೇಂದ್ರ ಕುಮಾರ್‌ ಜೈನ್‌, ಸುಧಾಕರ ಶೆಟ್ಟಿ ಸರಪಾಡಿ, ಪಂಚದುರ್ಗಾ ಪರಮೇಶ್ವರೀ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ ಹಾಗೂ ಶಿಕ್ಷಕರು, ಶಿವಾಜಿ ಫ್ರೆಂಡ್ಸ್‌, ಐವೆರ್‌ ಫ್ರೆಂಡ್ಸ್‌ ಕಕ್ಯಬೀಡು, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here