Home ಧಾರ್ಮಿಕ ಸುದ್ದಿ ಕುತ್ತಾರಪದವು: ಭಾಗವತ ಸಪ್ತಾಹ

ಕುತ್ತಾರಪದವು: ಭಾಗವತ ಸಪ್ತಾಹ

1674
0
SHARE
ಭಾಗವತ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕುತ್ತಾರಪದವು: ಇಲ್ಲಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ಕೇಂದ್ರದ ಸ್ಥಾಪಕಾಧ್ಯಕ್ಷ ದಿ| ಪಿ.ಎಂ. ಶೆಣೈ ಅವರ ಜನ್ಮ ಶತಾಬ್ಧಿ ಮತ್ತು ಆಶ್ರಯಧಾಮದ ಮಂಗಳಾ ಸೇವಾ ಸಮಿತಿ ಟ್ರಸ್ಟ್‌ನ 40ನೇ ವರ್ಷಾಚರಣೆ ಪ್ರಯುಕ್ತ ವಿದ್ವಾನ್‌ ಕೆ.ಆರ್‌. ಶಶಾಂಕ ಭಟ್ ಅವರಿಂದ ಭಾಗವತ ಸಪ್ತಾಹ ಕಾರ್ಯಕ್ರಮ ಇತ್ತೀಚೆಗೆ ಜರಗಿತು.

ಈ ಸಂದರ್ಭ ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದಜೀ ಉದ್ಘಾಟಿಸಿದರು. ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರನ್ನು ಸಮ್ಮಾನಿಸಲಾಯಿತು. ಲಕ್ಷ್ಮಣ ಶೆಣೈ, ಎಲ್., ಶ್ರೀಧರ ಭಟ್, ಪ್ರೊ| ಎಂ.ಬಿ. ಪುರಾಣಿಕ್‌ ಮೊದಲಾದವರು ಉಪಸ್ಥಿತರಿದ್ದರು.

ಡಾ| ಪಿ. ಅನಂತಕೃಷ್ಣ ಭಟ್ ಪ್ರಸ್ತಾವನೆಗೈದರು. ಮೇಘಾಲಯದ ಯೂಥಾಂಗ್‌ ವಂದಿಸಿದರು. ಶಿಲ್ಪಾ ಆಚಾರ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here