ಸುಳ್ಯಪದವು : ಪಡುವನ್ನೂರು ಗ್ರಾಮದ ಕುತ್ಯಾಳ ಪಾದೆ ಶ್ರೀ ಮಹಾವಿಷ್ಣು ದೇವಸ್ಥಾನದ 14ನೇ ವರ್ಷಾವಧಿ ಜಾತ್ರೆ ಕುಂಟಾರು ವೇದಮೂರ್ತಿ ವಾಸುದೇವ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕುಂಟಾರು ಬ್ರಹ್ಮಶ್ರಿ ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ದೇವಸ್ಥಾನದಲ್ಲಿ ಶನಿವಾರ ಗಣಪತಿ ಹೋಮ, ನವಕಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ನೀಲೇಶ್ವರ ಗಂಗಾಧರ್ ಮಾರಾರ್ ಮತ್ತು ಬಳಗದವರಿಂದ ತಾಯಂಬಕ, ರಾತ್ರಿ ರಂಗಪೂಜೆ, ದೇವರ ನೃತ್ಯ ಬಲಿ, ಭೂತ ಬಲಿ ನೆರವೇರಿತು. ಬಳಿಕ ತುಳು ನಾಟಕ ‘ಮದ್ಮೆ ಒಂಜಿ ಆಂಡ್ಗೆತ್ತಾ’ ಪ್ರದರ್ಶನಗೊಂಡಿತು.
ರವಿವಾರ ಬೆಳಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆದವು. ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಆಡಳಿತ ಮೊಕ್ತೇಸರ, ಚಿತ್ರನಟ ವಿನೋದ ಆಳ್ವ, ಉತ್ಸವ ಸಮಿತಿ ಅಧ್ಯಕ್ಷ ರತನ್ ಕುಮಾರ್ ನಾೖಕ್, ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ, ಕಾರ್ಯನಿರ್ವಾಹಕ ಕುತ್ಯಾಳ ವಿಶ್ವನಾಥ ರೈ, ರಾಕೇಶ್ ರೈ ಕುದ್ಕಾಡಿ, ರೋಶನ್ ರೈ ಉಪಸ್ಥಿತರಿದ್ದರು.